Sunday, April 20, 2025

Latest Posts

ಸೌಂದರ್ಯ ಸ್ಪರ್ಧೆಯಲ್ಲಿ ಪತ್ನಿ ಗೆಲ್ಲಲಿಲ್ಲವೆಂದು ಪತಿ ಮಾಡಿದ್ದೇನು ಗೊತ್ತಾ..? Viral Video ..

- Advertisement -

International News: ಸೌಂದರ್ಯ ಸ್ಪರ್ಧೆಯಲ್ಲಿ ತನ್ನ ಪತ್ನಿಗೆ ಎರಡನೇಯ ಸ್ಥಾನ ಬಂದ ಕಾರಣ, ಆಕೆಯ ಪತಿ ಸ್ಟೇಜ್ ಹತ್ತಿ ಬಂದು, ವಿಜೇತಳಿಗೆ ತೊಡಿಸಬೇಕಾದ ಕಿರೀಟವನ್ನು ನೆಲಕ್ಕೆ ಬಡೆದಿದ್ದಾನೆ. ಈ ವೀಡಿಯೋ ಟ್ವಿಟರ್‌ನಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ.

ಬ್ರೆಜಿಲ್‌ನಲ್ಲಿ ನಡೆಯುತ್ತಿದ್ದ ಸೌಂದರ್ಯ ಸ್ಪರ್ಧೆಯಲ್ಲಿ ಈ ವ್ಯಕ್ತಿ ಪತ್ನಿ ಮತ್ತು ಇನ್ನೊರ್ವ ಸುಂದರಿ, ಫಿನಾಲೆ ತಲುಪಿದ್ದರು. ಆದರೆ ವಿಜೇತ ಬಹುಮಾನ ಇನ್ನೋರ್ವ ಸುಂದರಿಗೆ ಸಿಕ್ಕಿದ್ದು, ಈ ವ್ಯಕ್ತಿಯ ಪತ್ನಿಗೆ ಎರಡನೇಯ ಸ್ಥಾನ ಸಿಕ್ಕಿದೆ. ಈ ಕಾರಣಕ್ಕೆ ಸಿಟ್ಟಾದ ಪತಿರಾಯ, ತಕ್ಷಣ ಸ್ಟೇಜ್‌ ಮೇಲೆ ಹತ್ತಿ ಬಂದು, ವಿಜೇತರಿಗೆ ತೊಡಿಸುತ್ತಿದ್ದ ಕಿರೀಟವನ್ನು, ಕಸಿದು, ನೆಲಕ್ಕೆ ಬಡಿದಿದ್ದಾನೆ.

ಇಲ್ಲಿ ರನ್ನರ್ ಅಪ್ ಆದ ಮಹಿಳೆ, ಅಂದರೆ ಈ ವ್ಯಕ್ತಿಯ ಮಹಿಳೆ ಬೆಕರ್ ಆಗಿದ್ದಾಳೆ. ಮತ್ತು ವಿನ್ನರ್ ಆದ ಮಹಿಳೆ ಇಮ್ಯಾನುಲಿ ಬೆಲಿನಿ ಆಗಿದ್ದಾಳೆ. ಈ ವೇಳೆ ಈ ವ್ಯಕ್ತಿಯ ಪರಿಸ್ಥಿತಿ ಕಂಡು ಅಲ್ಲಿನ ಜನ ಹೆದರಿದ್ದಾರೆ. ತನ್ನ ಪತ್ನಿಯನ್ನೇ ವಿಜೇತೆ ಎಂದು ಘೋಷಣೆ ಮಾಡಿ ಎಂದು ಆ ವ್ಯಕ್ತಿ ಪಟ್ಟು ಹಿಡಿದಿದ್ದಾನೆ. ಕೊನೆಗೆ ಅಲ್ಲಿದ್ದ ಇನ್ನೋರ್ವ ವ್ಯಕ್ತಿ ಬಂದು, ಆತನನ್ನು ಸ್ಟೇಜ್‌ನಿಂದ ಕರೆದೊಯ್ದಿದ್ದಾರೆ.

- Advertisement -

Latest Posts

Don't Miss