Saturday, June 21, 2025

Latest Posts

ಒಂದೂವರೆ ಲಕ್ಷದ ಮೊಬೈಲ್ ಕೊಡಿಸಿಲ್ಲವೆಂದು ಯುವತಿ ಮಾಡಿದ್ದೇನು ಗೊತ್ತಾ..?

- Advertisement -

Bihar News: ಮಕ್ಕಳು ಪೋಷಕರ ಬಳಿ ಅದು ಬೇಕು ಇದು ಬೇಕು ಅಂತಾ ಕೇಳೋದು ಕಾಮನ್. ಕೇಳಿದ್ದನ್ನು ಕೊಡಿಸದೇ ಇದ್ದಾಗ, ಕೋಪ ಬರೋದು ಕಾಮನ್. ಈ ವೇಳೆ ಒಂದೆರಡು ದಿನ ಮಾತು ಬಿಡ್ತಾರೆ, ಊಟ ಬಿಡ್ತಾರೆ, ತಮ್ಮಷ್ಟಕ್ಕೆ ತಾವು ಇರ್ತಾರೆ ಅಥವಾ ಕೇಳಿದ್ದನ್ನು ಕೊಡಿಸುವ ತನಕ ಬಿಡದೇ ಹಠ ಮಾಡುತ್ತಾರೆ. ಆದರೆ ಇಲ್ಲೋರ್ವ ಹುಡುಗಿ ತಾನು ಕೇಳಿದ ಒಂದೂವರೆ ಲಕ್ಷ ಬೆಲೆ ಬಾಳುವ ಮೊಬೈಲ್ ಕೊಡಿಸಿಲ್ಲವೆಂದು, ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ಬಿಹಾರದ ಮುಂಗೇರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಪೋಷಕರು 1 ಲಕ್ಷ 50 ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲ್ ಕೊಡಿಸಿಲ್ಲವೆಂದು, 18 ವರ್ಷದ ಯುವತಿ ಬ್ಲೇಡ್‌ನಿಂದ ಕೈ ಕುಯ್ದುಕೊಂಡಿದ್ದಾಳೆ. ಇನ್ನು ಕೆಲ ವರದಿಗಳ ಪ್ರಕಾರ, ಈಕೆಗೆ ಬಾಯ್‌ಫ್ರೆಂಡ್ ಬೇರೆ ಇದ್ದನಂತೆ. ಅವನೊಂದಿಗೆ ಮಾತನಾಡಲು ಈಕೆ ಫೋನ್ಗಾಗಿ ಬೇಡಿಕೆ ಇಟ್ಟಿದ್ದಳು.

ಮೂರು ತಿಂಗಳಿನಿಂದ ತಾನು ಕೇಳಿದ ಫೋನ್ ಕೊಡಿಸಬೇಕು. ಇಲ್ಲವಾದಲ್ಲಿ ತಾನು ತನ್ನ ಬಾಯ್‌ಫ್ರೆಂಡ್ ಜೊತೆ ಓಡಿ ಹೋಗುವುದಾಗಿ ಬೆದರಿಕೆಯೂ ಹಾಕಿದ್ದಳಂತೆ. ಆದರೆ ಅಪ್ಪ ಅಮ್ಮನ ಬಳಿ ಅಷ್ಟೆಲ್ಲ ದುಡ್ಡಿಲ್ಲದ ಕಾರಣ, ಅವರು ಪೋನ್ ಕೊಡಿಸಲು ನಿರಾಕರಿಸಿದ್ದಾರೆ. ಈ ವೇಳೆ ಆಕೆ ಕೋಣೆಯ ಬಾಗಿಲು ಹಾಕಿ, ಬ್ಲೇಡ್ ತೆಗೆದುಕೊಂಡು ಕೈ ಕುಯ್ದುಕೊಂಡಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಯುವತಿ ಇನ್ನು ಮುಂದೆ ಎಂದಿಗೂ ಈ ರೀತಿ ಪ್ರಾಣಹಾನಿ ಮಾಡಿಕೊಳ್ಳುವುದಿಲ್ಲವೆಂದು ಹೇಳಿದ್ದಾಳೆ.

ಒಟ್ಟಾರೆಯಾಗಿ ಬೇಗ ಬೇಗ ಓದು ಮುಗಿಸಿ, ಅಪ್ಪ ಅಮ್ಮನ ಕಷ್ಟಕ್ಕಾಗಬೇಕು ಎನ್ನುವ ಮಕ್ಕಳ ಕಾಲ ಒಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಕ್ಕಳು ಅಪ್ಪ ಅಮ್ಮನ ಕಷ್ಟಕ್ಕಾಗುವ ಬದಲು, ಕಷ್ಟ ಕೊಡಲು ಮುಂದಾಗುತ್ತಿರುವುದು ವಿಪರ್ಯಾಸದ ಸಂಗತಿ.

- Advertisement -

Latest Posts

Don't Miss