International News: ಇಂದಿನ ಕಾಲದಲ್ಲಿ ಹೆಣ್ಣು ಸಿಗುವುದು, ವಿವಾಹವಾಗುವುದೆಲ್ಲ ದೊಡ್ಡ ವಿಚಾರವೇ ಸರಿ. ಕೆಲವರಿಗೆ ವಿದ್ಯೆ ಇರುವುದಿಲ್ಲ,ಇನ್ನು ಕೆಲವರಿಗೆ ಕೆಲಸವಿರುವುದಿಲ್ಲ, ಮತ್ತೆ ಕೆಲವರಿಗೆ ವಿದ್ಯೆ, ಕೆಲಸ, ಸ್ವಂತ ಮನೆ, ಆಸ್ತಿ, ಅಂದ- ಚೆಂದ ಎಲ್ಲವೂ ಇದ್ದು, ಜಾತಕದಲ್ಲಿ ದೋಷವಿರುತ್ತದೆ. ಅಥವಾ ಎಲ್ಲವೂ ಇದ್ದರೂ, ಹೆಣ್ಣು ಸಿಗುವುದಿಲ್ಲ. ಹಾಗಾಗಿ ಇಂದಿನ ಕಾಲದಲ್ಲಿ ವಯಸ್ಸು 40 ದಾಟಿದರೂ, ಇನ್ನೂ ಮದುವೆಯಾಗಿಲ್ಲವೆಂದು ಹೇಳುವವರು ಹಲವರಿದ್ದಾರೆ. ಅಲ್ಲದೇ, ವಯಸ್ಸು 40 ದಾಟಿದ ಬಳಿಕ, ಇನ್ನೆಲ್ಲಿ ಮದುವೆಯಾಗೋದು, ಅನ್ನೋ ಆಸೆ ಬಿಟ್ಟು, ಬ್ರಹ್ಮಚಾರಿಯಾಗಿದ್ದು ಬಿಡೋಣವೆಂದು ನಿರ್ಧರಿಸುತ್ತಾರೆ.
ಆದರೆ ಇಲ್ಲೋಬ್ಬ ಯುವಕ, ಹೆಣ್ಣು ಸಿಕ್ಕಿಲ್ಲವೆಂದು ಕುಕ್ಕರ್‌ನ್ನೇ ಮದುವೆಯಾಗಿದ್ದಾನೆ. ಇದು ವಿಚಿತ್ರವೆನ್ನಿಸಿದರೂ ನಿಜ. ಇಂಥ ಎಷ್ಟೋ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಗೊಂಬೆಯೊಂದಿಗೆ, ನಾಯಿಯೊಂದಿಗೆ, ಫ್ರಿಜ್, ಬಟ್ಟೆ, ದಿಂಬು, ಹೀಗೆ ವಸ್ತುಗಳೊಂದಿಗೆ ವಿವಾಹವಾದ ಸುದ್‌ದಿಯನ್ನು ನಾವು ಕೇಳಿದ್ದೇವೆ. ಓದಿದ್ದೇವೆ. ಅದೇ ರೀತಿ ಇಲ್ಲೋರ್ವ ಯುವಕ, ಕುಕ್ಕರ್‌ನ್ನೇ ವಿವಾಹವಾಗಿದ್ದಾನೆ.
ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಖೋಯಿರುಲ್ ಅನಮ್ ಎಂಬಾತ, ಕುಕ್ಕರ್‌ನ್ನು ಮದುವೆಯಾದ ಯುವಕ. ಕುಕ್ಕರ್‌ನ ಮೇಲ್ಭಾಗದಲ್ಲಿ ಮಧುಮಗಳಿಗೆ ಶಾಲು ಹೊದಿಸುವಂತೆ, ಹೊದಿಸಿ, ಅಲಂಕಾರ ಮಾಡಲಾಗಿದೆ. ಅನಮ್ ಬಿಳಿ ಬಟ್ಟೆಯಲ್ಲಿ ಮಧುಮಗನಾಗಿ ಮಿಂಚಿದ್ದಾನೆ.
ಇನ್ನು ಕುಕ್ಕರ್‌ನನ್ನು ಯಾಕೆ ವಿವಾಹವಾಗುತ್ತಿದ್ದಿ ಎಂದು ಕೇಳಿದರೆ, ಈಗ ಕೊಟ್ಟ ಉತ್ತರ, ಕುಕ್ಕರ್ ಎಂದಿಗೂ ನನಗೆ ಮೋಸ ಮಾಡುವುದಿಲ್ಲ. ಅಲ್ಲದೇ, ಅಡುಗೆ ಮಾಡುವುದರಲ್ಲಿಯೂ ನಿಸ್ಸೀಮಳು. ಹಾಗಾಗಿ ಈಕೆಯನ್ನೇ ವಿವಾಹವಾಗಿದ್ದೇನೆ ಎಂದು ಅನಮ್ ಹೇಳಿದ್ದಾನೆ.
ವಿಚಿತ್ರ ಅಂದ್ರೆ ಮದುವೆಯಾಗಿ ನಾಲ್ಕೇ ದಿನಕ್ಕೆ ಅನಮ್ ತನ್ನ ಮುದ್ದಿನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಇದಕ್ಕೆ ಕಾರಣವೇನು ಅಂತಾ ಕೇಳಿದಾಗ, ಆಕೆಗೆ ಬರೀ ಅನ್ನ ಬೇಯಿಸಲು ಬರುತ್ತದೆ. ಬೇರೆ ಯಾವ ಅಡುಗೆ ಮಾಡಲೂ ಬರುವುದಿಲ್ಲ. ಹಾಗಾಗಿ ವಿಚ್ಛೇದನ ನೀಡಿದ್ದೇನೆ ಎಂದಿದ್ದಾನೆ. ಈತನ ಹುಚ್ಚಾಟ ನೋಡಿ, ಸಾಮಾಜಿಕ ಜಾಲತಾಣದಲ್ಲಿ ಜನ, ಚೆನ್ನಾಗಿ ವಾಗ್ದಾಳಿ ಮಾಡಿದ್ದಾರೆ.