Friday, December 13, 2024

Latest Posts

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

- Advertisement -

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಅವರನ್ನು ಬಂಧಿಸಲಾಗಿದೆ. ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್ ಅವರಂತಹ ಸೆಲೆಬ್ರಿಟಿಯನ್ನು ಅರೆಸ್ಟ್ ಮಾಡುವುದು ಸುಲಭದ ಕೆಲಸವಲ್ಲ. ಸಾಕಷ್ಟು ರಾಜಕಾರಣಿಗಳ ಒತ್ತಡ ಇರುತ್ತದೆ. ಹೀಗಾಗಿ, ದಾಸನನ್ನು ಅರೆಸ್ಟ್ ಮಾಡಿದಂತಹ ಪೊಲೀಸ್ ಅಧಿಕಾರಿ ಯಾರು? ಎಂಬುದು ಕೋಟ್ಯಂತರ ಜನರ ಪ್ರಶ್ನೆಯಾಗಿತ್ತು. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ದೊಡ್ಡ ದೊಡ್ಡ ಆಮಿಷಗಳು, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್ ಅವರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಗಿದ್ದು, ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್. ಗಿರೀಶ್ ಅವರು ಇಲ್ಲದೇ ಇದ್ದಿದ್ದರೆ ಈ ಪ್ರಕರಣದಲ್ಲಿ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಮುಚ್ಚಿಹೋಗಬೇಕಿದ್ದ ಕೇಸ್ ಅನ್ನು ಬಯಲಿಗೆಳೆದು ಸತ್ಯಾಸತ್ಯತೆ ಹೊರತುವಲ್ಲಿ ಗಿರೀಶ್ ಅವರು ಯಶಸ್ವಿಯಾಗಿದ್ದಾರೆ. ಈ ಡೈನಾಮಿಕ್ ಅಧಿಕಾರಿ ಇಲ್ಲಿದಿದ್ದರೆ, ಪ್ರಕರಣದ ಸತ್ಯವು ಹೂತುಹೋಗುತ್ತಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಡಿಸಿಪಿ ಗಿರೀಶ್ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಚಂದನ್ ಕುಮಾರ್ ಅವರು ರಿಯಲ್ ಹೀರೋಗಳಾಗಿ ನಟಭಯಂಕರನ ಬೇಟೆಯಾಡಿದ್ದಾರೆ.

ಎಸ್‌ ಗಿರೀಶ್‌ ಅವರು ಕೊಲೆಯಾದ ದಿನದ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಇಲ್ಲದಿದ್ದರೇ ಈ ಕೇಸ್‌ ಧಮ್‌ ಕಳೆದುಕೊಳ್ತಿತ್ತು. ರೇಣುಕಾಸ್ವಾಮಿ ಶವ ಸಿಗುತ್ತಲೇ ನಾಲ್ಕು ಮಂದಿ ನಾವೇ ಕೊಲೆ ಮಾಡಿದ್ದು ಅಂತಾ ಪೊಲೀಸ್‌ ಠಾಣೆಗೆ ಆಗಮಿಸಿದ್ದರು. ಶರಣಾದ ನಾಲ್ವರು ಹೇಳಿದ ಕಥೆ ಗಿರೀಶ್‌ ಅವರಿಗೆ ಅನುಮಾನ ಬರುವಂತೆ ಮಾಡಿತ್ತು. ನಾಲ್ವರ ಹೇಳಿಕೆಗಳು ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆಗ ಡಿಸಿಪಿ ಎಸ್ ಗಿರೀಶ್ ಮತ್ತು‌ ಎಸಿಪಿ ಚಂದನ್ ಕುಮಾರ್‌ ಇಬ್ಬರು ಸೇರಿಕೊಂಡು ಶರಣಾದ ನಾಲ್ವರಿಗೆ ತಮ್ಮದೇ ರೀತಿಯಲ್ಲಿ ವರ್ಕ್‌ ಮಾಡಿದ್ದಾರೆ. ಆಗ ಇವರಿಗೂ ರೇಣುಕಾಸ್ವಾಮಿಗೂ ಸಂಬಂಧ ಇಲ್ಲ. ಕೇವಲ ಜೈಲಿಗೆ ಹೋಗಲು ಇವರಿಗೆ ಹಣದ ಆಮಿಷ ಒಡ್ಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಎಸ್‌. ಗಿರೀಶ್‌ ಅವರ ಹೆಸರು ಕೇಳಿದ್ರೆ ಕರ್ನಾಟಕದ ಜನರಿಗೆ ನೆನಪಿಗೆ ಬರುವುದೇ ಬಿ.ಎಸ್.ಯಡಿಯೂರಪ್ಪ ಪ್ರಕರಣ. 2011ರಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಬಂಧಿಸಿದ್ದು ಇದೇ ಎಸ್‌ ಗಿರೀಶ್‌ ಅವರು. ಇಂಜಿನಿಯರ್‌ ಆಗಿದ್ದ ಗಿರೀಶ್ ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಇನ್ನು, ಚಂದನ್‌ ಕುಮಾರ್‌ ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದರು.

ಕೂಲಿ ಕೆಲಸಕ್ಕೆ ತೆರಳುತ್ತಿದ್ದವರ ಮೇಲೆ ಕಾಡಾನೆ ದಾಳಿ: ಕಾಲು ಮುರಿತ

ದರ್ಶನ್ ಕೇಸ್ ಬಗ್ಗೆ ಹುಬ್ಬಳ್ಳಿಯಲ್ಲಿ ಇಂದ್ರಜೀತ್‌ ಲಂಕೇಶ್ ಮಾತು

ಹಿಂದಿನ ಕೇಸ್‌ನಲ್ಲಿ ಕಠಿಣ ಕ್ರಮ ಕೈಗೊಂಡಿದ್ದರೆ, ಇಂದು ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ: ಮಾಜಿ ಶಾಸಕ ಎ.ಟಿ.ರಾಮಸ್ವಾಮಿ

- Advertisement -

Latest Posts

Don't Miss