Spiritual: ಕೆಲವು ಸಿನಿಮಾಗಳಲ್ಲಿ ಮತ್ತು ಕೆಲವು ಎಡಪಂಥಿಯರು ಹೇಳುವುದನ್ನು ನೀವು ಕೇಳಿದ್ದೀರಿ. ಶಿವಲಿಂಗಕ್ಕೆ ಸುಮ್ಮನೆ ಹಾಲು, ತುಪ್ಪ, ಹಣ್ಣು, ಬೆಣ್ಣೆ ಎಲ್ಲ ಅಭಿಷೇಕ ಮಾಡಿ ವೇಸ್ಟ್ ಮಾಡುವ ಬದಲು, ಅದನ್ನು ಬಡವರಿಗಾದರೂ ದಾನ ಮಾಡಬಾರದಾ ಅಂತಾ..? ಏಕೆಂದರೆ, ಹೀಗೆ ಮಾತನಾಡುವವರಿಗೆ ಶಿವಲಿಂಗಕ್ಕೆ ಅಥವಾ ಯಾವುದೇ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡುವುದು ಕಡ್ಡಾಯ ಅನ್ನುವ ವಿಷಯ ಗೊತ್ತೇ ಇರೋದಿಲ್ಲ. ಹಾಗಾದ್ರೆ ಯಾಕೆ ಕಲ್ಲಿನ ಮೂರ್ತಿಗೆ, ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ಕಲ್ಲಿನಿಂದ ಮೂರ್ತಿ ಅಥವಾ ಲಿಂಗ ತಯಾರಿಸಿದಾಗ, ಆ ಮೂರ್ತಿ ಅಥವಾ ಲಿಂಗ ನೂರರಿಂದ 10 ಸಾವಿರ ವರ್ಷಗಳಲ್ಲಿ ಕಸಿಯಲಾರಂಭಿಸುತ್ತದೆ. ಆದರೆ ಶಿವಲಿಂಗ ಕುಸಿಯಬಾರದು, ಒಡೆಯಬಾರದು, ಅಥವಾ ಕೋಟಿ ಕೋಟಿ ವರ್ಷಗಳವರೆಗೆ ನಾವು ಪೂಜಿಸಿದ ಅದೇ ಶಿವಲಿಂಗವನ್ನೇ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಪೂಜಿಸಬೇಕು, ಸನಾತನ ಧರ್ಮ ಉಳಿಯಬೇಕು ಅಂದರೆ, ನಾವು ಶಿವಲಿಂಗಕ್ಕೆ ಹಾಲು, ತುಪ್ಪ, ಬೆಣ್ಣೆ, ಹಣ್ಣಿನ ಅಭಿಷೇಕಗಳನ್ನು ಮಾಡಲೇಬೇಕು.
ಹಾಗಾದ್ರೆ ಏಕೆ ಅಭಿಷೇಕ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ, ಕಲ್ಲಿನಿಂದ ಮಾಡಿದ ಮೂರ್ತಿ ಅಥವಾ ಶಿವಲಿಂಗಕ್ಕೆ ಅಭಿಷೇಕ ಮಾಡುುದರಿಂದ ಆ ಅಭಿಷೇಕಕ್ಕೆ ಬಳಸಿದ ಹಾಲು, ಮೊಸರು, ತುಪ್ಪ, ಬೆಣ್ಣೆ, ಹಣ್ಣು, ನೀರು, ಬೂದಿ ಇವೆಲ್ಲದರಿಂದ ಕಲ್ಲು ಗಟ್ಟಿಯಾಗುತ್ತದೆ. ಏಕೆಂದರೆ, ಕಲ್ಲು ಗಟ್ಟಿಯಾಗಲು ಏನೇನು ಬೇಕೋ, ಆ ಅಂಶವನ್ನು ಹಾಲು, ಬೆಣ್ಣೆ, ಮೊಸರು, ತುಪ್ಪದಿಂದ ಹೀರಿಕೊಳ್ಳುತ್ತದೆ.
ಹಾಗಾಗಿಯೇ ನಮ್ಮ ಮುತ್ತಾತ ಅವರ ಮುತ್ತಾತ ಪೂಜಿಸಿರುವ ಕಾಶಿ ವಿಶ್ವನಾಥ, ಉಜ್ಜೇಯಿನಿ ಮಹಾಕಾಳೇಶ್ವರ ಮಹಾಲಿಂಗವನ್ನು ನಾವೂ ಪೂಜಿಸುವ ಅವಕಾಶ ಸಿಕ್ಕಿರುವುದು. ಈ ವೈಜ್ಞಾನಿಕ ಕಾರಣ ಗೊತ್ತಿಲ್ಲದೇ, ಕೆಲವರು ಅಭಿಷೇಕ ಮಾಡಿ, ಸುಮ್ಮನೆ ಆಹಾರ ಹಾಳು ಮಾಡುತ್ತಾರೆಂದು ವಾಾದಿಸುತ್ತಾರೆ. ಅದಕ್ಕಾಗಿಯೇ ಸನತಾನ ಧರ್ಮದ ಹಿಂದಿರುವ ಸತ್ಯಗಳ ಅರಿವಿರಲಿ ಎಂದು ಹೇಳುವುದು.