Web News: ಸಿಗರೇಟ್. ಕೆಲವರು ಒತ್ತಡದಿಂದ ಹೊರಬರಲು ಉಪಯೋಗಿಸುವ ವಸ್ತು. ಅದೆಷ್ಟೋ ಜನ ಉಸಿರು ತೆಗೆದ ವಸ್ತು. ಸಿಗರೇಟ್ ಸೇದುವುದರಿಂದ ಆರೋಗ್ಯಕ್ಕೆ ಎಷ್ಟು ನಷ್ಟ ಅಂತಾ ಎಲ್ಲರಿಗೂ ಗೊತ್ತು. ಆದರೆ ಹಲವರು ಚಟ ಬಿಡಲು ಕೇಳುವುದಿಲ್ಲ. ಆ ರೀತಿ ಚಟ ಹಿಡಿಸಿಕೊಂಡಿರುತ್ತಾರೆ. ಹಾಗಾದ್ರೆ ಈ ರೇಂಜಿಗೆ ಮತ್ತು ಬರಿಸುವ ಸಿಗರೇಟ್ ಯಾಕೆ, ಯಾವಾಗ ಮತ್ತು ಎಲ್ಲಿ ತಯಾರಿಸಲಾಯಿತು ಅಂತಾ ನಿಮಗೆ ಗೊತ್ತಾ..? ನಾವು ಹೇಳ್ತೀವಿ ಕೇಳಿ..
ಅಮೆರಿಕದ ಜೇಮ್ಸ್ ಬ್ಯುಕಾನನ್ ಡ್ಯೂಕ್ ಎಂಬಾತ ಸಿಗರೇಟ್ ಕಂಡು ಹಿಡಿದಿದ್ದು. ಈತ 24 ವರ್ಷದವನಿದ್ದಾಗಲೇ, ಮನೆಯಲ್ಲಿಯೇ ಈ ಸಿಗರೇಟ್ ರೆಡಿ ಮಾಡಿ, ಮಾರಾಟ ಮಾಡುತ್ತಿದ್ದ. ಇವನ ಪ್ರಾಡಕ್ಟ್ ಅ್ಯುತ್ತಮವಾಗಿ ಸೇಲ್ ಆಗಲು ಶುರುವಾಯಿತು. ಆಗ ಡ್ಯೂಕ್, ಒಂದು ಚಿಕ್ಕ ಮಷಿನ್ ತಂದು, ಅದರಲ್ಲಿ ಸಿಗರೇಟ್ ರೆಡಿ ಮಾಡಲು ಶುರು ಮಾಡಿದ.
ಬಳಿಕ ಇದೇ ರೀತಿ ವಿದೇಶಗಳಿಗೂ ಮಾರಾಟ ಮಾಡಲು ಶುರು ಮಾಡಿದ. ಆದರೆ ಇಂದಿನ ಕಾಲದಲ್ಲಿ ಶ್ರೀಮಂತ ದೇಶದಲ್ಲಿ ಧೂಮ್ರಪಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಆದರೆ ಭಾರತದಲ್ಲಿ ಧೂಮ್ರಪಾನ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೇ, ಈ ಧೂಮ್ರಪಾನದ ಚಟದಿಂದಲೇ, ಕ್ಯಾನ್ಸರ್, ಶ್ವಾಸಕೋಶದ ಖಾಯಿಲೆ ಬಂದು ಸಾಯುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೂ ಸಿಗರೇಟ್ ಖರೀದಿಸುತ್ತಿರುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ ಅನ್ನೋದು ಕೂಡ ಆತಂಕಕಾರಿ ಸಂಗತಿ.