Web News: ಮುಂಚೆ ಎಲ್ಲ ಮದುವೆ ಅಂದ್ರೆ, ಮುನ್ನ ದಿನದ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಮರುದಿನ ಮದುವೆ, ಅದರ ಮರುದಿನ ರಿಸೆಪ್ಕ್ಷನ್ ಅಥವಾ ಬೀಗರೂಟ. ಇಷ್ಟೇ ಆಗಿತ್ತು. ಆದರೆ ಈಗ ಹಾಗಿಲ್ಲ. ಶ್ರೀಮಂತರ ಮದುವೆ ಅಂದ್ರೆ, ಅಲ್ಲಿ 1 ವಾರದವರೆಗೆ ಕಾರ್ಯಕ್ರಮವಿರುತ್ತದೆ. ಸಂಗೀತ್, ಮೆಹೆಂದಿ, ಹಳದಿ, ಮದುವೆ, ರಿಸೆಪ್ಶನ್ ಸೇರಿ ಇನ್ನೂ ಹಲವು ಕಾರ್ಯಕ್ರಮಗಳಿರುತ್ತದೆ.
ಇಂಥ ಫಂಕ್ಷನ್ ಎಲ್ಲಾ ಎಲ್ಲರ ಮನೆಯಲ್ಲಿ ಮಾಡಲಾಗುವುದಿಲ್ಲ. ಶ್ರೀಮಂತರ ಮನೆಯಲ್ಲಿ ಮಾತ್ರ ಮಾಡಲಾಗುತ್ತದೆ. ಆದ್ರೆ ನಿಮಗೂ ಹೀಗೆ ಸಂಗೀತ್ ಕಾರ್ಯಕ್ರಮಕ್ಕೆ ಹೋಗಿ, ಅಲ್ಲಿ ಢೋಲಿನ ಸದ್ದಿಗೆ ಕುಣಿಯಬೇಕು. ಮೆಹೆಂದಿ ಹಚ್ಚಿ ಎಂಜಾಯ್ ಮಾಡಬೇಕು. ಹಳದಿ ಉಡುಪು ಧರಿಸಿ, ಮುಖಕ್ಕೆ ಅರಿಶಿನ ಹಚ್ಚಿ ಡಾನ್ಸ್ ಮಾಡಬೇಕು. ಮದುವೆಯಲ್ಲಿ ಭಾಗವಹಿಸಿ, ಭರ್ಜರಿ ಮದುವೆಯೂಟ ಮಾಡಬೇಕು. ರಿಸೆಪ್ಕ್ಷನ್‌ನಲ್ಲಿ ಡಿಸೈಲ್ ಲೆಹೆಂಗಾ ಧರಿಸಿ, ಕಾರ್ಯಕ್ರಮವನ್ನು ಎಂಜಾಯ್ ಮಾಡಬೇಕು ಅಂತಾ ನಿಮಗೆ ಆಸೆ ಇದ್ರೆ, ನೀವು ಮಕಲಿ ಮದುವೆ ಫಂಕ್ಷನ್ ನಲ್ಲಿ ಭಾಗವಹಿಸಬಹುದು.
ನಕಲಿ ಮದುವೆ ಅಂದ್ರೆ, ಈ ಮೇಲೆ ಹೇಳಿದ ಎಲ್ಲ ಕಾರ್ಯಕ್ರಮಗಳೂ ಅಲ್ಲಿ ನಡೆಯುತ್ತದೆ. ಆದರೆ ಅಲ್ಲಿ ಗಂಡ ಹೆಂಡತಿ ಇರುವುದಿಲ್ಲ. ನೀವು ಎಂಟ್ರಿ ಫೀಸ್ ನೀಡಿ, ಈ ಕಾರ್ಯಕ್ರಮಕ್ಕೆ ಹೋಗಬೇಕು. ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಇಂಥ ಫೇಕ್ ವೆಡ್ಡಿಂಗ್ ನಡೆಯುತ್ತದೆ. ದುಡ್ಡಿದ್ದವರು, ಇಂಥ ಕಾರ್ಯಕ್ರಮಕ್ಕೆ ಹೋಗಿ, ಮದುವೆಯ ಗೌಜಿ-ಗಮ್ಮತ್ತನ್ನು ಫೀಲ್ ಮಾಡಬಹುದು.