Thursday, June 19, 2025

Latest Posts

Knowledge: 40ನೇ ವಯಸ್ಸಿಗೆ ನಿವೃತ್ತಿ ಬೇಕಾ..? ಅಂದ್ರೆ ಈ ರೂಲ್ಸ್ ಫಾಲೋ ಮಾಡಿ.. ಭಾಗ 2

- Advertisement -

Knowledge: ಈ ಮೊದಲ ಭಾಗದಲ್ಲಿ ನಾವು 40ನೇ ವಯಸ್ಸಿಗೆ ನೀವು ನಿವೃತ್ತಿ ಪಡೆಯಬೇಕು ಅಂದ್ರೆ ಏನೇನು ಮಾಡಬೇಕು ಅಂತಾ ಹೇಳಿದ್ದೆವು. ಇದೀಗ ಅದರ ಮುಂದುವರಿದ ಭಾಗದಲ್ಲಿ ಇನ್ನಷ್ಟು ತಿಳಿಯೋಣ.

Fourth Rule: ನಾಲ್ಕನೇಯ ರೂಲ್ಸ್ ಅಂದ್ರೆ, ಬೇರೆಯವರು ತೆಗೆದುಕxಡರೆಂದು, ಅಥವಾ ಶೋಕಿಗಾಗಿ ಲಕ್ಷ ಲಕ್ಷ ಲೋನ್ ಮಾಡಿ, ಕಾರು ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ನಿಮಗೆ ಅoರ ಅವಶ್ಯಕತೆ ಇಲ್ಲ, ನಿಮ್ಮ ಬಳಿ ಬೈಕ್ ಇದ್ದು, ನಿಮಗೆ ಬಸ್‌ನಲ್ಲಿ ತಿರುಗಾಡಬಹುದಾದರೆ, ನೀವು ಸಾಲ ಮಾಡಿ ಕಾರ್ ತೆಗೆಯುವ ಅವಶ್ಯಕತೆ ಇಲ್ಲ. ನಿಮ್ಮ ಬಳಿ ಕೋಟಿ ಲೆಕ್ಕದಲ್ಲಿ ಸೇವಿಂಗ್ಸ್, ಇನ್ಶುರೆನ್ಸ್‌ಗಳಿಗೆ ತುಂಬಲು ದುಡ್ಡಿದ್ದು, ಲೋನ್ ಮಾಡಿದರೆ ತೀರಿಸುವ ಅರ್ಹತೆ ಇದ್ದಾಗ ಮಾತ್ರ ನೀವು ಕಾರ್ ಖರೀದಿ ಮಾಡಬಹುದು.

Fifth Rule: ಜೀವನದಲ್ಲಿ ಬೇಗ ಸೆಟಲ್ ಆಗಬೇಕು ಎಂಬ ಭರದಲ್ಲಿ ಸಣ್ಣ ವಯಸ್ಸಿಗೆ ಲಕ್ಷ ಲಕ್ಷ ಸಾಲ ಮಾಡಿ, ಮನೆ ಖರೀದಿಸುವ ತಪ್ಪು ಎಂದಿಗೂ ಮಾಡಬೇಡಿ. ಸಾಲ ಮಾಡಿದಾಗ, ದುಡಿಯದಿದ್ದರೂ,  ಅನಾರೋಗ್ಯವಾದರೂ ಸಾಲ ತೀರಿಸುವ ಅರ್ಹತೆ ಇದ್ದಲ್ಲಿ ಮಾತ್ರ ಮನೆ ಖರೀದಿಸಿ. ಇಲ್ಲದಿದ್ದಲ್ಲಿ ಸಾಲ ತೀರಿಸುವುದರಲ್ಲಿಯೇ ನಿಮ್ಮ ಯವ್ವನ ಮುಗಿದು ಹೋಗುತ್ತದೆ.

Sixth Rule: ಕ್ರೆಡಿಟ್ ಕಾರ್ಡ್ ಬಳಕೆ ಮಾಡಲೇಬೇಡಿ. ಕ್ರೆಡಿಟ್ ಕಾರ್ಡ್ ಬಳಸುವ ಎಷ್ಟೋ ಜನ , ಬಳಸುವ ರೀತಿ ಗ“ತ್ತಿಲ್ಲದೇ, ಸಾವಿರ ಸಾವಿರ ರೂಪಾಯಿ ದಂಡ ಕಟ್ಟುತ್ತಾರೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದನ್ನು ನಿಲ್ಲಿಸಿ. ನಿಮ್ಮ ಖರ್ಚು ತನ್ನಿಂದ ತಾನೇ ಕಡಿಮೆಯಾಗಿ ದುಡ್ಡು ಉಳಿಯುತ್ತದೆ.

Seventh Rule: ದುಡ್ಡು ಮಾಡುವ ಭರದಲ್ಲಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕ“ಳ್ಳಬೇಡಿ. ನಾವು ಜೀವನದಲ್ಲಿ ಮಾಡುವ ಅತ್ಯುತ್ತಮ ಇನ್ವೆಸ್ಟ್‌ಮೆಂಟ್ ಅಂದ್ರೆ, ಅದು ನಾವು ಸೇವಿಸುವ ಆರೋಗ್ಯಕರ ಆಹಾರ. ಹಾಗಾಗಿ ಇನ್ವೆಸ್ಟ್ ಮಾಡಿದ ಬಳಿಕ ಉಳಿದ ಹಣದಲ್ಲಿ ನೀವು ಆರೋಗ್ಯಕರ ಆಹಾರ ಸೇವನೆ ಮಾಡಿ, ಯೋಗ, ವ್ಯಾಯಾಮ ಮಾಡುವ ಅಭ್ಯಾಸವಿರಿಸಿಕ“ಳ್ಳಿ.

- Advertisement -

Latest Posts

Don't Miss