Tuesday, January 21, 2025

Latest Posts

ಇನ್ನೊಂದು ಡೂಬ್ಲಿಕೇಟ್ ಸಹಿ ಮಾಡಿ ರಾಜ್ಯ ಕೊಳ್ಳೆ ಹೊಡೆಯುವ ಆಸೆ ಇದೆಯಾ?: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮದ ಜೊತೆ ಮಾತನಾಡಿದ್ದು, ಅಂಬೇಡ್ಕರ್ ಗೆ ಇಷ್ಟು ದಿನ ಅಪಮಾನ ಮಾಡಿ ಈಗ ಅಂಬೇಡ್ಕರ್ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕ್ರಮ ಮಾಡುತ್ತಿದ್ದಾರೆ. ಜೈ ಭೀಮ್ ಎನ್ನಲು ಸಹ ಕಾಂಗ್ರೆಸ್ ಗೆ ಅರ್ಹತೆ ಇಲ್ಲ. ಗೊಡ್ಸೆ ಹೊಡೆದಿದ್ದು ಒಂದು ಗುಂಡು ಆದ್ರೆ ಇನ್ನೂ ಎರಡು ಗುಂಡು ಯಾರವು? ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ. ಇನ್ನೂ ಎರಡು ಗುಂಡು ಹೊಡೆಸಿದ್ದು ನೆಹರು ಎಂದು ಯತ್ನಾಳ್ ಆರೋಪಿಸಿದ್ದಾರೆ.

ನಮ್ಮ ವಿರೋಧಿ ಬಣ ದೆಹಲಿಗೆ ಅಲ್ಲಾ ಬೇಕಿದ್ರೆ ವಾಷಿಂಗ್ಟನ್ ಹೋಗಲಿ ಸತ್ಯ ಸತ್ಯವೇ. ಈ ಬಗ್ಗೆ ಲೋಫರ್, ಜೇಬುಗಳ್ಳರ ಹೇಳಿಕೆ ಯಾಕೆ ಪಡೆಯುತ್ತೀರಿ‌‌..? ಬೇಕಿದ್ದರೆ ವಿಜಯೇಂದ್ರ ಅಪ್ಪನ ಹೇಳಿಕೆ ಪಡೆಯಿರಿ. ನಾವು ವಿಜಯೇಂದ್ರನ ಅಪ್ಪನಂತೆ ಅವರು ಬೇಕಾದ್ದು ಮಾಡಲಿ ಎದುರಿಸಲು ಸಿದ್ಧ. ಅವರನ್ನಪ್ಪ ಸಹಿ ನಕಲು ಮಾಡಿದವರಿಗೆ ಏನು ಹೇಳಬೇಕು?. ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ನಕಲಿ ಸಿಹಿಗಳಾಗಿವೆ ತನಿಖೆ ಆಗಲಿ. ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾವ ಯಾವ ಸಹಿ ಮಾಡಿದ್ದಾರೆ ಅದು ತನಿಖೆ ಆಗಲಿ.

ನಾವು ರಾಜ್ಯಾಧ್ಯಕ್ಷರ ಚುನಾವಣೆಗೆ ಸಿದ್ಧವಾಗಿದ್ದಿವಿ. ನಾವು ನಮ್ಮ ಅಭ್ಯರ್ಥಿ ಹಾಕತ್ತವಿ. ಹೈಕಮಾಂಡ್ ಮಧ್ಯಪ್ರವೇಶ ಮಾಡಿದ ಚುನಾವಣೆ ಮಾಡಬೇಕು. ಇನ್ನೊಂದು ಡೂಬ್ಲಿಕೇಟ್ ಸಹಿ ಮಾಡಿ ರಾಜ್ಯ ಕೊಳ್ಳೆ ಹೊಡೆಯುವ ಆಸೆ ಇದೆಯಾ? ಅಂತ ವಿಜಯೇಂದ್ರ ವಿರುದ್ಧ ಯತ್ನಾಳ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮೂಡಾ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಮುಡಾ ಹಗರಣದಲ್ಲಿ ಯಾರು ಸಾಚಾ ಇಲ್ಲ. 185 ಕೋಟಿ ವಾಲ್ಮೀಕಿ ಹಗರಣವನ್ನು ಸಿಎಂ ಒಪ್ಪಿಕೊಳ್ತಾರೆ.  ಕೇಂದ್ರ ಸರ್ಕಾರದ ಯಾರನ್ನು ಟಾರ್ಗೆಟ್ ಮಾಡಿಲ್ಲ ಆದರೆ ರಾಜ್ಯದಲ್ಲಿ ನನ್ನ ಮತ್ತು ಸಿಟಿ ರವಿ ಟಾರ್ಗೆಟ್ ಮಾಡಿದ್ದಾರೆ. ಹಿಂದೂಗಳ ಪರವಾಗಿ ಮಾತನಾಡಿದ್ರೆ ಕೇಸ್ ಹಾಕತ್ತಾರೆ..ಆದರೆ ವಿಜಯೇಂದ್ರ ಮೇಲೆ ಪ್ರಕರಣ ದಾಖಲು ಮಾಡಲ್ಲ ಎಂದು ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.

ಹಿಂದೂಗಳ ಭಾವನೆ ಕೇರಳಿಸಿ , ರಾಜ್ಯದ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಷ್ಟು ಧೈರ್ಯ ಮುಸ್ಲಿಂ ಸಮುದಾಯ ಹೇಗೆ ಬಂದಿದೆ. ಈ ಹಿಂದೆ ನಮ್ಮ ಬಿಜೆಪಿ ಅಧಿಕಾರದಲ್ಲಿ ಏನು ಮಾಡಿಲ್ಲ ನಾವು ಸಹ ಈ ವಿಚಾರದಲ್ಲಿ ತಪ್ಪು ಮಾಡಿದ್ದೆವೆ. ನಮ್ಮ ಸರ್ಕಾರದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದ್ರೆ ಈ ರೀತಿ ಘಟನೆಗಳು ಆಗುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. .

ವಿಜಯಪುರದಲ್ಲಿ ಕಾರ್ಮಿಕನ ಮೇಲೆ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್,  ಕಾರ್ಮಿಕರ ಮೇಲೆ ಈ ರೀತಿಯಲ್ಲಿ ದೌರ್ಜನ್ಯ ಆಗ ಬಾರದು. ಪೊಲೀಸ್ ನಿಶ್ಚಿತವಾಗಿ ಕ್ರಮ ಕೈಗೊಳ್ಳಬೇಕು. ಇದು ಯಾರು ಮಾಡಿದ್ರೂ ಅಮಾನವೀಯತೆ ಮತ್ತು ಅಮಾನುಷ. ಕಾರ್ಮಿಕನ ಮೇಲೆ ಕೈ ಮಾಡಿದ್ದು ದೊಡ್ಡ ತಪ್ಪು ಇದನ್ನು ಯಾರೇ ಮಾಡಿದ್ರು, ಎಷ್ಟೆ ದೊಡ್ಡ ವ್ಯಕ್ತಿ ಇದ್ದ್ರೂ ಕ್ರಮ ಆಗಬೇಕು. ನಾನು ಈ ಬಗ್ಗೆ ಎಸ್ ಪಿ ಅವರಿ ಮಾತನಾಡಿ ಮಾಹಿತಿ ಪಡೆದು, ಕ್ರಮಕ್ಕೆ ಒತ್ತಾಯ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

- Advertisement -

Latest Posts

Don't Miss