Health Tips: ಇಂದಿನ ಯುವ ಪೀಳಿಗೆಯ ಜೀವನ ಶೈಲಿಯೇ ಹೃದಯಾಘಾತಕ್ಕೆ ಕಾರಣ ಅಂತಾರೆ ವೈದ್ಯರು. ಅದರಲ್ಲೂ ಪರೀಕ್ಷೆ ಸಮೀಪಿಸುವ ಸಮಯದಲ್ಲಿ ಹಲವರಿಗೆ ಆರೋಗ್ಯ ಹಾಳಾಗುತ್ತದೆ. ಹೃದಯದ ಸಮಸ್ಯೆ ಆಗುತ್ತದೆ. ಹಾಗಾದ್ರೆ ಯುವ ಪೀಳಿಗೆಯವರು, ವಿದ್ಯಾರ್ಥಿಗಳು ಮಾಡುವ ತಪ್ಪಾದ್ರೂ ಏನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ವಿದ್ಯಾರ್ಥಿಗಳು ಯಾವ ರೀತಿಯಾಗಿ ಪರೀಕ್ಷೆಗೆ ತಯಾರಿ ಮಾಡುತ್ತಾರೆ ಅನ್ನೋದರ ಮೇಲೆ ಅವರ ಆರೋಗ್ಯ ಅವಲಂಬಿತವಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುವಾಗ ಅದರ ಬಗ್ಗೆ ಯೋಚಿಸುತ್ತಾರೆ. ಉಳಿದ ಸಮಯವನ್ನು ನಿರ್ಲಕ್ಷಿಸುವುದೇ ಈ ಸಮಸ್ಯೆಗೆ ಕಾರಣವಾಗಿದೆ.
ಅಲ್ಲದೇ, ಸೈಕೋಲಾಜಿಕಲ್ ಡಿಸಾರ್ಡರ್ಸ್ ಇರುತ್ತೆ. ಮಕ್ಕಳಲ್ಲಿ, ಯುವ ಪೀಳಿಗೆಯಲ್ಲಿ ಕೋಪ ಹೆಚ್ಚಾಗಿ, ಇದರಿಂದ ಹೃದಯದ ಸಮಸ್ಯೆ ಹೆಚ್ಚಾಗಿ, ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತ ಪರಿಚಲನೆಯಲ್ಲಿ ಏರುಪೇರಾಗಿ, ಹೃದಯಾಘಾತ ಹೆಚ್ಚಾಗುತ್ತಿದೆ. ಹಾಗಾಗಿ ಕೋಪ ಕಡಿಮೆ ಮಾಡಬೇಕು ಅಂತಾರೆ ವೈದ್ಯರು.
ಅಲ್ಲದೇ, ಸೆಲ್ ಫೋನ್, ದೂರದರ್ಶನ ಎಲ್ಲದಕ್ಕೂ ಹೆಚ್ಚು ಸಮಯ ನೀಡಿ, ನಿದ್ರೆ ಕಡಿಮೆ ಮಾಡುತ್ತಿದ್ದಾರೆ. ಇದೇ ನಿದ್ರಾಹೀನತೆಯೇ ಹೃದಯಾಘಾತಕ್ಕೆ ಕಾರಣ ಅಂತಾರೆ ವೈದ್ಯರು. 1 ಕಡೆ 3 ತಾಸು ಕುಳಿತೂ, 3 ತಾಸಿಗೂ ಕಡಿಮೆ ನಿದ್ರಿಸಿದರೂ ಹೃದಯಾಘಾತ ಬರುತ್ತೆ ಅಂತಾರೆ ವೈದ್ಯರು. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




