Monday, April 21, 2025

Latest Posts

ಸೌತ್ ಕೋರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ..

- Advertisement -

International News: ಸೌತ್ ಕೋರಿಯಾದಲ್ಲಿ ಇಷ್ಟು ದಿನ ನಾಯಿ ಮಾಂಸದ ಸೇವನೆ ಮಾಡಲಾಗುತ್ತಿತ್ತು. ಅಲ್ಲಿನ ಕೆಲ ಜನರೇ ಇದಕ್ಕೆ ವಿರುದ್ಧವಾಗಿದ್ದರು. ರಸ್ತೆಯಲ್ಲಿ ಅಲ್ಲಲ್ಲಿ ನಾಯಿ ಮಾಂಸ ಸೇವನೆ ನಿಷೇಧಿಸಿ ಎಂದು ಬೋರ್ಡ್ ಹಾಕಿಕೊಂಡು, ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದರು.

ಅದು ಸಾಕು ಪ್ರಾಣಿ, ನಿಯತ್ತಿನ ಪ್ರಾಣಿ, ಪಾಪದ ಪ್ರಾಣಿ ಅಂಥ ಪ್ರಾಣಿಯನ್ನು ಕೊಂದು, ಅದರ ಮಾಂಸ ತಿನ್ನುವುದು ಸೂಕ್ತವಲ್ಲ. ದಯವಿಟ್ಟು ನಾಯಿ ಮಾಂಸ ಸೇವನೆ ನಿಷೇಧಿಸಿ ಎಂದು ಹಲವರು, ಅಲ್ಲಿನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಅವರ ಮನವಿಯನ್ನು ಸ್ವೀಕಾರ ಮಾಡಿರುವ, ದಕ್ಷಿಣ ಕೋರಿಯಾ ಸರ್ಕಾರ, ನಾಯಿ ಮಾಂಸ ನಿಷೇಧಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಈ ಮಸೂದೆಯ ಪರ 208 ಮತಗಳು ಬಂದಿದ್ದು, ನಾಯಿ ಮಾಂಸ ತಿನ್ನುವುದು ಮತ್ತು ಮಾರಾಟ ಮಾಡುವುದು ಎರಡನ್ನೂ ನಿಷೇಧಿಸಲಾಗಿದೆ. ಇನ್ನು ಮಸೂದೆ ಕಾನೂನು ರೂಪಕ್ಕೆ ಬಂದ ಬಳಿಕ, ಯಾರು ನಾಯಿ ಮಾಂಸ ಮಾರಾಟ ಮಾಡುತ್ತಾರೆ. ಮತ್ತು ಅದನ್ನು ಯಾರು ಖರೀದಿಸಿ ತಿನ್ನುತ್ತಾರೆ, ಅಂಥವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 30 ಮಿಲಿಯನ್ ವಾನ್ ದಂಡ ವಿಧಿಸಲಾಗುತ್ತದೆ.

ಇನ್ನು ಮಾಂಸ ಮಾರಾಟಕ್ಕಾಗಿಯೇ, ನಾಯಿಯನ್ನು ಬೆಳೆಸಿ ಮಾರುವವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು 20 ಮಿಲಿಯನ್ ವಾನ್ ದಂಡ ವಿಧಿಸಲಾಗುತ್ತದೆ. ಇನ್ನನು ಇದು ಕಾನೂನಾಗಿ ಪರಿವರ್ತನೆಯಾಗಿ, ಜಾರಿಯಾಗಲು 2027ರವರೆಗೂ ಸಮಯವಿದೆ. ಅಷ್ಟರೊಳಗೆ ನಾಯಿ ಮಾಂಸದ ವ್ಯಾಪಾರಿಗಳು, ತಮ್ಮ ವ್ಯಾಪಾರವನ್ನು ಬದಲಿಸಿಕೊಂಡು, ಬೇರೆ ವ್ಯಾಪಾರ ಮಾಡಬೇಕು. ಅಂಂಥವರಿಗೆ ಅಲ್ಲಿನ ಸರ್ಕಾರ ಸಬ್ಸಿಡಿ ಕೂಡ ನೀಡುತ್ತದೆ.

- Advertisement -

Latest Posts

Don't Miss