Devotional:
ಧನ್ ತೇರಾಸ್, ದೀಪಾವಳಿಯ ಹಬ್ಬದ ದಿನದಂದು ಮಾಡುವ ಯಾವುದೇ ಕೆಲಸಗಳು ವಿಶೇಷವಾದ ಫಲಕೊಡುತ್ತದೆ.ಹಾಗೆಯೆ ಈ ದಿನ ಮಾಡುವ ದಾನವು ನಿಮಗೆ ಶುಭ ಫಲವನ್ನು ತಂದುಕೊಡುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಲಭಿಸುತ್ತದೆ .ಲಕ್ಷ್ಮಿ ದೇವಿಯ ಕೃಪೆಗಾಗಿ ವಿಶೇಷವಾಗಿ ಧನ್ ತೇರಾಸ್ ಮತ್ತು ದೀಪಾವಳಿಯಂದು ಪೂಜೆಗಳನ್ನು ಮಾಡಲಾಗುತ್ತದೆ. ದೀಪಾವಳಿ ಹಬ್ಬವು ಧನ್ ತೇರಾಸ್ ದಿನದಿಂದ ಪ್ರಾರಂಭವಾಗುತ್ತದೆ. ಆ ದಿನ ಚಿನ್ನ,ಬೆಳ್ಳಿ ಅಥವಾ ಪಾತ್ರೆಗಳನ್ನು ಖರೀದಿಸುವ ಸಂಪ್ರದಾಯ ಇಂದಿನ ಕಾಲದಿಂದಲೂ ಇದೆ. ದೀಪಾವಳಿಯಂದು ಮಾಡಿದ ಧನ್ ತೇರಾಸ್ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹಾಗಾದರೆ ಧನ್ ತೇರಾಸ್ ಮತ್ತು ದೀಪಾವಳಿ ಯಂದು ಯಾವ ರೀತಿಯ ವಸ್ತುಗಳನ್ನು ದಾನ ಮಾಡಬೇಕೆಂದು ತಿಳಿಯೋಣ.
1.ದೀಪಾವಳಿ ಮತ್ತು ಧನ್ ತೇರಾಸ್ ಸಮಯದಲ್ಲಿ ಬಡವರಿಗೆ ಅನ್ನದಾನ ಮಾಡಿ ಧನ್ ತೇರಾಸ್ ಮತ್ತು ದೀಪಾವಳಿಯಂದು ಅನ್ನದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆ ದಿನ ಅನ್ನ ದಾನ ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ .
2.ಧನ್ ತೇರಾಸ್ ದಿನದಂದು ಆಹಾರ, ಧಾನ್ಯಗಳನ್ನು ದಾನ ಮಾಡುವುದರಿಂದ ಮನೆಯಲ್ಲಿ ಆಹಾರದ ಕೊರತೆ ಎದುರಾಗುವುದಿಲ್ಲ ಊಟ ಮಾಡಿದವರಿಗೆ ದಕ್ಷಿಣೆಯನ್ನು ಕೊಟ್ಟು ಕಳುಹಿಸಿ.
3.ಧನ್ ತೇರಾಸ್ ದಿನ ಕಬ್ಬಿಣವನ್ನು ದಾನ ಮಾಡಿದರೆ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಕಬ್ಬಿಣವನ್ನು ಶನಿ ದೇವರ ಲೋಹವೆಂದು ಪರಿಗಣಿಸಲಾಗಿದೆ ಧನ್ ತೇರಾಸ್ ಅಥವಾ ದೀಪಾವಳಿಯ ದಿನದಂದು ಕಬ್ಬಿಣವನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಮತ್ತು ಶನಿಯ ಮಂಗಳಕರ ಫಲಗಳು ಸಿಗುತ್ತದೆ.
4.ಧನ್ ತೇರಾಸ್ ದಿನದಂದು ಪೊರಕೆಯನ್ನು ದಾನ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ .ನೀವು ದೇವಾಲಯಕ್ಕೆ ಪೊರಕೆಯನ್ನು ದಾನ ಮಾಡಬಹುದು. ಹೀಗೆ ಮಾಡಿದರೆ ಸಂಪತ್ತಿನ ದೇವಿಗೆ ಸಂತೋಷವಾಗುತ್ತದೆ ಹಣದ ಕೊರತೆ ನಿವಾರಿಸುತ್ತಾಳೆ .
5.ದೀಪಾವಳಿ ಮತ್ತು ಧನ್ ತೇರಾಸ್ ನಲ್ಲಿ ಬಡವರಿಗೆ ಬಟ್ಟೆ ದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದೆ. ಕುಬೇರನ ಕೃಪೆಯಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಧನ್ ತೇರಾಸ್ ದಿನದಂದು ವಸ್ತ್ರ ದಾನ ಮಹಾದಾನ ಎಂದು ಪರಿಗಣಿಸಲಾಗಿದೆ.
6.ಧನ್ ತೇರಾಸ್, ದೀಪಾವಳಿಯಂದು ತೆಂಗಿನಕಾಯಿ ಮತ್ತು ಸಿಹಿತಿಂಡಿಗಳನ್ನು ಅಗತ್ಯವಿರುವ ವ್ಯಕ್ತಿಗೆ ದಾನ ಮಾಡಬೇಕು. ಈ ರೀತಿ ದಾನ ಮಾಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ವೃದಿಯಾಗುತ್ತದೆ ಎಂದು ನಂಬಲಾಗಿದೆ.
7.ಧನತೇರಸ್ ಪೂಜೆಯ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸಿ ;
ಓಂ ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತಯೇಃ ಮತ್ತು
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ, ಸರ್ವ ರೋಗ ನಿವಾರಣಾಯ
ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣು ಸ್ವರೂಪ
ಶ್ರೀ ಧನ್ವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮಃ