ಚುನಾವಣಾ ಹಿಂದೂ ಆಗಬೇಡಿ ಸಿದ್ದರಾಮಯ್ಯನವರೇ: ಬಸನಗೌಡ ಪಾಟೀಲ್ ಯತ್ನಾಳ್

Political News: ರಾಮಮಂದಿರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ರಾಜಕೀಯ ಗುದ್ದಾಟ ಜೋರಾಗಿದೆ. ಪ್ರಧಾನಿ ರಾಮಮಂದಿರ ಉದ್ಘಾಟನೆ ಮಾಡಿರುವುದು ರಾಜಕೀಯ ಕಾರಣಕ್ಕಾಗಿ ಎಂದು ಆ ಕಾರ್ಯಕ್ರಮಕ್ಕೆ ಹೋಗುವುದನ್ನು ಕಾಂಗ್ರೆಸ್ ನಿಷೇಧಿಸಿತ್ತು. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಕೂಡ ಸಾಲು ಸಾಲು ಟ್ವೀಟ್ ಮಾಡಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಸಿಎಂ ಇನ್ನೊಂದು ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಆ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ವಿಸರ್ಜಿಸುವಂತೆ ಹೇಳಿದ್ದಾರೆ.

ನಾವು ಮಹಾತ್ಮಾ ಗಾಂಧಿಯವರು ಹೇಳಿದ ರಾಮನ ಭಕ್ತರು. ಮಹಾತ್ಮಾ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದು, ಅವರು ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಬಿಜೆಪಿ ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಅವರು,ಗಾಂಧಿಯವರು ಗೋಹತ್ಯೆಯನ್ನು ನಿಷೇಧ ಮಾಡಿ, ಕಾಂಗ್ರೆಸ್ ಪಕ್ಷವನ್ನೇ ವಿಸರ್ಜಿಸಿ ಎಂದಿದ್ದರು, ಅದನ್ನೂ ಪಾಲಿಸಿ ನೋಡೋಣ. ಚುನಾವಣಾ ಹಿಂದೂ ಆಗಬೇಡಿ ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಏಜೆಂಟ್‌ಗಳಂತೆ ನಡೆದುಕೊಳ್ಳದಂತೆ ಬುದ್ಧಿ ಕೊಡಲಿ: ಸಂಸದ ಮುನಿಸ್ವಾಮಿ

‘ಈಗ ಜೈ ಶ್ರೀರಾಮ್ ಅಂದಿದ್ದಾರೆ. ಇನ್ನಷ್ಟು ದಿನ ಹೋದ್ರೆ ರಾಮನ ಗುಡಿಗೆ ಕಸ ಹೊಡಿಯೋಕು ಬರ್ತಾರೆ’

‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’

About The Author