Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿರುವ ಜಗದೀಶ್ ಶೆಟ್ಟರ್,
ಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.
ಮನೆ ಒಡೆಯುವಂತಹ ಕೆಲಸ ಯಾರೂ ಮಾಡಬಾರದು ಎಂಬ ವಿಜಯೇಂದ್ರ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಈ ಹಿಂದೆಯೂ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ವೀರಶೈವ, ಲಿಂಗಾಯತ ಬೇರೆ ಬೇರೆ ಅನ್ನೋ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತು. ಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತ ನಾನು ಹೇಳಿದ್ದೆ. ವೀರಶೈವ ಮಹಾಸಭಾ ಲೀಡ್ ತೆಗೆದುಕೊಳ್ಳಬೇಕೆಂದು ನಾನು ಹೇಳಿದ್ದೆ. ಸಮಾಜದಲ್ಲಿ ಒಡಕು ಉಂಟಾಗುವುದು ಬೇಡ. ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಲು ಹೊರಟಿದ್ದಕ್ಕೆ ನಾನೂ ವಿರೋಧ ಮಾಡಿದ್ದೆ. ಸಮಾಜವನ್ನು ಒಡೆಯುವ ಪ್ರಶ್ನೆಯೇ ಇಲ್ಲ. ನಿನ್ನೆಯ ದಾವಣಗೆರೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಅದರಂತೆ ವೀರಶೈವ ಲಿಂಗಾಯತರ ಬೇಡಿಕೆಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲಾಗಿದೆ.
ಸಚಿವ ಶಿವಾನಂದ ಪಾಟೀಲರಿಂದ ರೈತರ ಅವಹೇಳನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಯಾರೋ ಒಬ್ಬರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಅದನ್ನು ಅವರೇ ಹೇಳಲಿ ಎಂದಿದ್ದಾರೆ.
ಅನುದಾನ ವಿಚಾರದಲ್ಲಿ ಶೆಟ್ಟರ್ ಮತ್ತು ಮಹೇಶ್ ಟೆಂಗಿನಕಾಯಿ ಜಟಾಪಟಿ ವಿಚಾರದ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಅದರ ಬಗ್ಗೆ ಚರ್ಚೆ ಮಾಡೋದು ಬೇಡ. ಅವರು ಸನ್ಮಾನ ಮಾಡ್ತೇನೆ ಅಂದ್ರೂ ನನಗೆ ಮಾಡಿಸಿಕೊಳ್ಳೋ ಇಂಟರೆಸ್ಟ್ ಇಲ್ಲ. ಹಿಜಾಬ್ ಕುರಿತ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿಸಿದ್ದಾರೆ. ಅದನ್ನೇ ಪ್ರತಿಪಕ್ಷಗಳು ಬೇಕಿದ್ದರೆ ಅಸ್ತ್ರವನ್ನಾಗಿ ಮಾಡಿಕೊಳ್ಳಲಿ. ಅದಕ್ಕೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ಬಿಜೆಪಿಯವರು ಬ್ರಿಟಿಷರ ಬೂಟು ನೆಕ್ಕಿದ್ದರು ಎಂಬ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಲು ಶೆಟ್ಟರ್ ನಿರಾಕರಿಸಿದ್ದು, ವೈಯಕ್ತಿಕ ಹೇಳಿಕೆಗಳನ್ನು ಅವರೇ ಡಿಫೈನ್ ಮಾಡಿಕೊಳ್ಳುತ್ತಾರೆ.ನಾನೇಕೆ ಎಲ್ಲದಕ್ಕೂ ಉತ್ತರ ಕೊಡಲಿ..? ಎಂದಿದ್ದಾರೆ.
8 ರಿಂದ 10 ಸಚಿವರನ್ನು ಲೋಕಸಭಾ ಅಕಾಡಕ್ಕೆ ಇಳಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ಈ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಿಲ್ಲ ಎಂದಿದ್ದಾರೆ.
ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್
ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?
ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್