Friday, August 29, 2025

Latest Posts

ಮುಸ್ಸಂಜೆ ವೇಳೆಯಲ್ಲಿ ಈ ಕೆಲಸಗಳನ್ನ ಮಾಡಿದ್ರೆ ದಟ್ಟ ದಾರಿದ್ರ್ಯ ಕಟ್ಟಿಟ್ಟಬುತ್ತಿ..!

- Advertisement -

ಮುಸ್ಸಂಜೆ ಹೊತ್ತಲ್ಲಿ ಕೆಲ ಕೆಲಸಗಳನ್ನ ಮಾಡುವುದರಿಂದ, ಮನೆಗೆ ಮಹಾಲಕ್ಷ್ಮೀ ಪ್ರವೇಶಿಸುವ ಬದಲು ದಾರಿದ್ರ್ಯ ಲಕ್ಷ್ಮೀಯ ಆಗಮನವಾಗುತ್ತದೆ. ಹಾಗಾದ್ರೆ ಯಾವ ಯಾವ ಕೆಲಸವನ್ನ ಮುಸ್ಸಂಜೆ ಹೊತ್ತಲ್ಲಿ ಮಾಡಬಾರದು ಅನ್ನೋದನ್ನ ನೋಡೋಣ ಬನ್ನಿ.

ಸಾಯಂಕಾಲದ ವೇಳೆ ಮುಖ್ಯ ದ್ವಾರವನ್ನ ತೆರೆದಿಡಿ ಮತ್ತು ಮನೆಯ ಹಿಂಬಾಗಿಲನ್ನ ಮುಚ್ಚಬೇಕು. ಸಾಯಂಕಾಲ ಲಕ್ಷ್ಮೀ ಮನೆಗೆ ಬರುತ್ತಾಳೆಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ ಸಂಜೆ 6 ಗಂಟೆಗೆ ಮನೆಯ ಮುಖ್ಯ ದ್ವಾರವನ್ನ ತೆರೆದಿಡಿ.

ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಕಸ ಗುಡಿಸಬಾರದು. 5 ಗಂಟೆಯೊಳಗೆ ಕಸ ಗುಡಿಸಿ. ಅದರ ನಂತರ ಅಥವಾ 6 ಗಂಟೆಯ ಬಳಿಕ ಕಸ ಗುಡಿಸಬೇಡಿ. ಹೀಗೆ ಮಾಡಿದ್ದಲ್ಲಿ ದಾರಿದ್ರ್ಯ ಉಂಟಾಗುತ್ತದೆ.

ಮುಸ್ಸಂಜೆ ಹೊತ್ತಲ್ಲಿ ಉಗುರು ಕತ್ತರಿಸಬಾರದು. ರವಿವಾರ ಬಿಟ್ಟು ಬೇರೆ ದಿನಗಳಲ್ಲಿ ಉಗುರು ಕತ್ತರಿಸಬಾರದೆಂಬ ನಿಯಮವಿದೆ. ಆದರೆ ರವಿವಾರವೂ ಕೂಡ ಮುಸ್ಸಂಜೆ ಹೊತ್ತಿನಲ್ಲಿ ಅಥವಾ ರಾತ್ರಿ ಹೊತ್ತು ಉಗುರು ಕತ್ತರಿಸಿದರೆ ದಾರಿದ್ರ್ಯ ಸಂಭವಿಸುವ ಸಾಧ್ಯತೆ ಇದೆ.

ಇನ್ನು ಮುಸ್ಸಂಜೆ ಹೊತ್ತು ದೀಪ ಹಚ್ಚುವ ಸಮಯದಲ್ಲಿ ಮಹಾಲಕ್ಷ್ಮೀ ಮನೆಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ವೇಳೆ ನಿದ್ರಿಸಬಾರದು. ಹೀಗೆ ಮಾಡಿದ್ದಲ್ಲಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದಿಲ್ಲ.

ಗಾಜಿನ ಬಳೆಗಳನ್ನು ನೀವು ಬಳಸುತ್ತಿದ್ದರೆ, ಸಾಯಂಕಾಲದ ಹೊತ್ತು ಗಾಜಿನ ಬಳೆ ಒಡೆಯದಂತೆ ನೋಡಿಕೊಳ್ಳಿ. ಹಾಗೇನಾದರೂ ಮುಸ್ಸಂಜೆ ವೇಳೆ ಗಾಜಿನ ಬಳೆ ಒಡೆದರೆ, ಅಪಶಕುನ ಎನ್ನಲಾಗುತ್ತದೆ.
ಮುಸ್ಸಂಜೆ ಬಳಿಕ ಕೂದಲು ಕತ್ತರಿಸಬಾರದು. ಮಂಗಳವಾರ, ಶುಕ್ರವಾರ ಮತ್ತು ಮುಸ್ಸಂಜೆ ವೇಳೆಯಲ್ಲಿ ಕೂದಲು ಕತ್ತರಿಸಬಾರದೆಂಬ ನಿಯಮವಿದೆ. ಅಲ್ಲದೇ ಮುಸ್ಸಂಜೆ ವೇಳೆಯಲ್ಲಿ ಕೂದಲು ಬಾಚಲು ಬಾರದು.

https://youtu.be/RQ46o4h2TL4

ಇನ್ನು ಮುಸ್ಸಂಜೆ ವೇಳೆ ಬಾಗಿಲಿನ ಬಳಿ ಒರಗಿ ನಿಲ್ಲಬಾರದು. ಅಲ್ಲದೇ, ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು.

ಮುಸ್ಸಂಜೆ ವೇಳೆಯಲ್ಲಿ ದೈಹಿಕ ಸಂಪರ್ಕ ಹೊಂದಬಾರದು. ಹೀಗೆ ಮಾಡಿದ್ದಲ್ಲಿ ಹುಟ್ಟುವ ಮಗುವಿಗೆ ಜೀವನಪೂರ್ತಿ ಅದೃಷ್ಟವೇ ಇರುವುದಿಲ್ಲ. ಲಕ್ ಅಥವಾ ಲಾಭ ಅನ್ನುವುದು ಆ ಮಗು ಕಾಣುವುದೇ ಇಲ್ಲ. ಅಲ್ಲದೇ ಅಂತಹ ಮಗುವಿಗೆ ದುಷ್ಟಬುದ್ಧಿ ಬರುವ ಸಾಧ್ಯತೆ ಇರುತ್ತದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss