ಭಾರತದಲ್ಲಿ ಗಲ್ಲಿ ಗಲ್ಲಿಗೂ ಹೊಟೇಲ್‌ಗಳಿದೆ. ಚಿಕ್ಕ ಚಿಕ್ಕ ಢಾಬಾಗಳಲ್ಲೂ ಜನ ರುಚಿ ಸವಿಯೋಕ್ಕೆ ಹೋಗ್ತಾರೆ. ಅದರಲ್ಲೂ ಭಾರತದಲ್ಲಿ ಊಟ ತಿಂಡಿಯ ವೆರೈಟಿಗಳಿಗೇನು ಕಡಿಮೆ ಇಲ್ಲ. ಸೌತ್ ಮೆನು, ನಾರ್ತ್ ಮೆನು, ಮಹಾರಾಷ್ಟ್ರಿಯನ್, ಬೆಂಗಾಲಿ, ಗುಜರಾತಿ, ರಾಜಸ್ಥಾನಿ ಥಾಲಿ, ಹೀಗೆ ಅನೇಕ ರೀತಿಯ ವೆರೈಟಿ ವೆರೈಟಿ ಫುಡ್‌ಗಳು ನಮಗೆ ಸವಿಯೋಕ್ಕೆ ಸಿಗುತ್ತದೆ. ಹಾಗಾಗಿ ಹೊಟೇಲ್ ಇಟ್ಟರೆ ಒಳ್ಳೆಯ ಲಾಭ ಪಡೆಯಬಹುದು.

ಹೊಟೇಲ್, ಚಾಟ್ಸ್, ಜ್ಯೂಸ್, ಐಸ್‌ಕ್ರೀಮ್ ಅಂಗಡಿಗಳನ್ನ ಎಲ್ಲಿ ಇಡಬೇಕು ಅನ್ನೋದರ ಬಗ್ಗೆ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಹಾಗಾದ್ರೆ 75 ಸಾವಿರ ರೂಪಾಯಿ ಬಂಡವಾಳ ಹೂಡಿ ಚಿಕ್ಕ ಹೊಟೇಲ್ ಓಪನ್ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
ಜನಜಂಗುಳಿ ಹೆಚ್ಚಾಗಿರುವ ಪ್ರದೇಶದಲ್ಲಿ ನೀವು ಹೊಟೇಲ್ ಓಪನ್ ಮಾಡುವುದು ಒಳಿತು. ಅಲ್ಲಿ ನಿಮಗೆ 5 ಸಾವಿರ ರೂಪಾಯಿ ಬಾಡಿಗೆಗೆ ಚಿಕ್ಕ ಅಂಗಡಿ ಸಿಗಬಹುದು. ಅಂತಹ ಅಂಗಡಿಯಲ್ಲಿ ನಿಮ್ಮ ಹೊಟೇಲ್ ಶುರು ಮಾಡಿ. ಆನ್‌ಲೈನ್‌ನಲ್ಲಿ 40 ಸಾವಿರ ರೂಪಾಯಿ ಒಳಗೆ ಸೆಕೆಂಡ್ ಹ್ಯಾಂಡ್ ಫರ್ನಿಚರ್, ಪಾತ್ರೆ, ಓವನ್ ಕೊಂಡುಕೊಳ್ಳಬಹುದು.
ಇನ್ನು ಚಿಕ್ಕ ಹೊಟೇಲ್ ನಡೆಸುವುದಕ್ಕೆ ಅಗತ್ಯವಾಗಿ ಬೇಕಾಗುವುದು ರೇಷನ್. 7ರಿಂದ 8 ಸಾವಿರ ರೂಪಾಯಿಯೊಳಗೆ ಅಗತ್ಯವಿರುವ ರೇಷನ್ ತರಿಸಿಕೊಳ್ಳಬಹುದು. ಇದಾದ ಬಳಿಕ ಅಡುಗೆ ತಯಾರಿಸುವರು ಬೇಕು. ಒಬ್ಬರಿಗೆ 5 ಸಾವಿರ ಕೊಡಬೇಕೆಂದರೂ ಮೂವರಿದ್ದರೆ 15 ಸಾವಿರ ಸಂಬಳ ಕೊಡಲೇ ಬೇಕು. ಆದ್ದರಿಂದ ಆರಂಭದಲ್ಲಿ ಇಬ್ಬರನ್ನ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಿ. ಒಬ್ಬವ ಅಡುಗೆ ಮಾಡಿದ್ರೆ, ಮತ್ತೊಬ್ಬನು ಸರ್ವ್ ಮಾಡಲಿಕ್ಕೆ ಇರಲಿ.
ಕೆಲಸಕ್ಕೆ ಹುಡುಗರಾಯ್ತು, ಫರ್ನಿಚರ್, ಅಡುಗೆ ಸಾಮಗ್ರಿ, ಪಾತ್ರೆ ಪಗಡೆ ಆಯ್ತು, ರೆಂಟ್ ಕೊಡೊಕ್ಕೆ ಶುರು ಮಾಡಿದ್ದು ಆಯ್ತು. ಇದೀಗ ಗ್ರಾಹಕರನ್ನ ಸೆಳೆಯೋದು ಹೇಗೆ ಅನ್ನೋದರ ಬಗ್ಗೆ ಯೋಚಿಸಿ.
ಜೋಮೆಟೋ, ಸ್ವಿಗ್ಗಿಯಂಥ ಆನ್‌ಲೈನ್ ಫುಡ್ ಡಿಲೆವರಿ ಮಾಡುವರನ್ನ ಸಂಪರ್ಕಿಸಿ ಮತ್ತು ಅವರ ಆ್ಯಪ್‌ನಲ್ಲಿ ನಿಮ್ಮ ಹೊಟೇಲನ್ನು ಸೇರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಹೊಟೇಲ್‌ಗೆ ಹೆಚ್ಚು ಗ್ರಾಹಕರು ಬರದಿದ್ದರೂ, ನಿಮ್ಮ ತಿಂಡಿ ತಿನಿಸುಗಳು ಆನ್‌ಲೈನ್ ಮೂಲಕ ಮಾರಾಟವಾಗುತ್ತದೆ. ಗೂಗಲ್‌ನಲ್ಲಿ ನಿಮ್ಮ ಹೊಟೇಲ್ ಇರುವ ಸ್ಥಳ, ನಿಮ್ಮ ಹೊಟೇಲ್‌ನಲ್ಲಿ ಸಿಗುವ ತಿಂಡಿಗಳ ಮೆನುಗಳನ್ನ ಸೇರಿಸಿ.
ಇನ್ನು ನೀವು ಹೊಟೇಲ್ ಶುರು ಮಾಡಿದ ಮೇಲೆ ಆರಂಭದಲ್ಲಿ ನಿಮ್ಮ ಹೊಟೇಲ್‌ಗೆ ಜನ ಬರುವುದಿಲ್ಲ. ನಿಮ್ಮ ಹೊಟೇಲ್ ಇಂಪ್ರೂವ್ ಆಗಬೇಕು ಅಂದ್ರೆ 5ರಿಂದ 6 ತಿಂಗಳು ಬೇಕಾಗಬಹುದು. ಹಾಗಾಗಿ ತಾಳ್ಮೆಯಿಂದ ಉದ್ಯಮ ನಡೆಸಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
