Political News: ಹುಬ್ಬಳ್ಳಿ: ಶ್ರೀಕಾಂತ್ ಪೂಜಾರಿ ರೌಡಿ ಶೀಟರ್ ಕ್ರೀಮಿನಲ್. ಅವನ ಹಿನ್ನೆಲೆ ತೆಗದಾಗ 16 ಕೇಸ್ ಇವೆ. ಜನ ಛೀಮಾರಿ ಹಾಕುತ್ತಿದ್ದಾರೆ. ಇದು ದೇಶದಲ್ಲಿ ಸುದ್ದಿಯಾಗ್ತಿದೆ. ರಾಜ್ಯದ ಉದ್ದಗಲಕ್ಕೂ ಇದು ಚರ್ಚೆಯಾಗ್ತಿದೆ. ಯಾವ ಪುರುಷಾರ್ಥಕ್ಕೆ ಬಿಜೆಪಿ ಹೋರಾಟ ಎಂದ ಶಾಸಕ ಪ್ರಸಾದ್ ಅಬ್ಬಯ್ಯ ವ್ಯಂಗ್ಯವಾಡಿದರು.
ನಿನ್ನೆ ಆರ್.ಅಶೋಕ ಬಂದು ಹೋರಾಟ ಮಾಡಿದ್ರು. ಮತ್ತೆ ವಿಜಯೇಂದ್ರ ಬಂದು ಹೋರಾಟ ಮಾಡ್ತಾರಂತೆ.
ಇವರ ಹೋರಾಟ ಯಾವ ಪುರುಷಾರ್ಥಕ್ಕೆ..? ನಿಮ್ಮ ಅಜೆಂಡಾ ಹೇಳಿಬೇಡಿ. ರೌಡಿ ಶೀಟರ್ ಕ್ರಿಮಿನಲ್ ಹಿನ್ನಲೆ ಇದ್ದವರು ನಿಮ್ಮ ಪಕ್ಷದ ಪಿಲ್ಲರ್‌ಗಳಾ ಎಂದು ಪ್ರಶ್ನಿಸಿದರು.
ರಾಮನ ಭಕ್ತರು ಸಾರಾಯಿ ಮಾರ್ತಾರಾ..? ಮಟ್ಕಾ ಜೂಜಾಟ ಆಡೋನು ರಾಮ ಭಕ್ತನಾ..? ರಾಮನ ವಿಚಾರಗಳನ್ನು ತಿರಚೋ ಕೆಲಸ ದೇಶದಲ್ಲಿ ಆಗ್ತಿದೆ ಎಂದು ಅಬ್ಬಯ್ಯ ಕಿಡಿಕಾರಿದರು.
ಎಲ್ಲ ಜಾತಿಗಳನ್ನ ಒಳಗೊಂಡ ದೇಶ ಇದು. ಇವತ್ತು ದಲಿತರನ್ನ ಊರಿಂದ ಹೊರಗಡೆ ಇಡೋ ಕೆಲಸ ಆಗಿದೆ. ಇವರಿಗೆ ಧೈರ್ಯ ಇದ್ರೆ ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಲಿ ಎಂದು ಅಬ್ಬಯ್ಯ. ಸವಾಲ್ ಹಾಕಿದ್ರು.
ಜನ ಇವತ್ತು ನಿರ್ಧಾರ ಮಾಡಬೇಕು. ಎಂತಹ ವ್ಯಕ್ತಿ ಪರ ಪ್ರತಿಭಟನೆ ಮಾಡ್ತೀದಾರೆ ಅನ್ನೋದು. ಇದು ಕೋರ್ಟ್ ಆರ್ಡರ್ ಇದೆ. ಹಾಗಾಗಿ ಬಂಧನ ಮಾಡಿದ್ದಾರೆ. ಇವತ್ತು ರಾಮ ರಾಜ್ಯ ಬಿಟ್ಟು ರಾವಣನ ರಾಜ್ಯ ಬೇಕಾಗಿದೆ ಎಂದು ಅಬ್ಬಯ್ಯ ಹೇಳಿದರು.
ಹಿಂದೂ ಧರ್ಮ ಅನ್ನೋದು ಬೇರೆ ಧರ್ಮವನ್ನು ಗೌರವದಿಂದ ಕಾಣೋದು ಅದರ ತತ್ವ. ಆದ್ರೆ, ಇವರು ಇದೇ ವಿಚಾರದಿಂದ ದೇಶ ಒಡೆಯೋ ಕೆಲಸ ಮಾಡಿದ್ದಾರೆ ಎಂದರು.
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’
ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್ ಲಾಡ್