ತುಮಕೂರು : ಬಿಜೆಪಿಯ(bjp) ಹಲವಾರು ಶಾಸಕರು ಹಾಗೂ ಸಚಿವರು ಕಾಂಗ್ರೆಸ್(Congress) ಸೇರಲು ತಯಾರಾಗಿದ್ದಾರೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್(Dr.G Parameshwar) ಹೇಳಿಕೆ ನೀಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವ ಮಾಧುಸ್ವಾಮಿ (J.C Madhuswamy)ಒಬ್ಬ ಸಮರ್ಥ ನಾಯಕ ಅವರಿಗೆ ತುಮಕೂರು(Tumakuru) ಜಿಲ್ಲೆಯ ಉಸ್ತುವಾರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯಿಂದ ಮುಕ್ತ ಗೊಳಿಸುವುದರ ಬಗ್ಗೆ ನನಗೆ ನಿರಾಸೆಯಾಗಿದೆ ಎಂದು ಕಾಂಗ್ರೆಸ್ ಮಾಜಿ ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದು, ಇದರಿಂದ ತುಮಕೂರಿನ ಜನತೆಗೆ ನಷ್ಟವಾಗಿದೆ ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಕಾಂಗ್ರೆಸ್ ಸೇರಲು ಬಿಜೆಪಿ ಹಲವು ಶಾಸಕರು ಸಚಿವರು ತಯಾರಾಗಿದ್ದಾರೆ, ಮೂಲ ಬಿಜೆಪಿಯವರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ, ಕೆಪಿಸಿಸಿ(kpcc) ಅಧ್ಯಕ್ಷರ ಬಳಿ ಕಾಂಗ್ರೆಸ್ ಗೆ ಸೇರುವವರ ಪಟ್ಟಿ ಇದೆ, ತುಮಕೂರು ಜಿಲ್ಲೆಯ ಅವು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ತುಮಕೂರಿನಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.