ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲಿರುಳು ಕಾರ್ಯ ನಿರ್ವಹಿಸುವ ಪೊಲೀಸರ ಕಾರ್ಯದೊತ್ತಡ ಕಡಿಮೆಯಾಗಲು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರು ತಿಳಿಸಿದರು.ಅವರು ಇಂದು ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸಮಾಜದ ಅಭ್ಯುದ್ಯಯಕ್ಕಾಗಿ ಶ್ರಮಿಸುವ ಪೊಲೀಸರು ಸಭೆ, ಸಮಾರಂಭ, ಮುಷ್ಕರ ಮತ್ತಿತರ ಕಾರ್ಯಕ್ರಮಗಳ ರಕ್ಷಣೆಗಾಗಿ ಹಬ್ಬ-ಹರಿದಿನಗಳಲ್ಲೂ ಕುಟುಂಬ ಸದಸ್ಯರನ್ನು ತ್ಯಜಿಸಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಾರ್ಯ ನಿರ್ವಹಿಸುತ್ತಾರೆ. ಇಂತಹವರಿಗೆ ಪ್ರತಿ ವರ್ಷ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡುವುದು ಶ್ಲಾಘನೀಯ ಎಂದರು. ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಸೋಲು-ಗೆಲುವಿಗೆ ದೃತಿಗೆಡದೆ, ಹುಮ್ಮಸ್ಸು ವೃದ್ಧಿಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದರು.
ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರ: ಯಾಮಾರಿದ್ರೆ ಪಾಪರ್ ಆಗ್ತೀರಾ ಹುಷಾರ್..!
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಜಿ.ರಮಾ ಅವರು ಜಿಲ್ಲಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಒತ್ತಡದ ಕಾನೂನಿನ ನಿರ್ವಹಣೆಯ ಹೊಣೆಗಾರಿಕೆಯ ಶ್ರಮ ಕಾನೂನು ಮತ್ತು ಪೊಲೀಸ್ ಇಲಾಖೆಯ ಮೇಲಿರುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಹೊಣೆಗಾರಿಕೆಯೂ ಒಮ್ಮೊಮ್ಮೆ ನಮ್ಮದಾಗುತ್ತದೆ. ಹಗಲಿರುಳುನ್ನೆದೇ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳದೇ ಅಪರಾಧ ಚಟುವಟಿಕೆ ನಿಯಂತ್ರಣ ಹಾಗೂ ಆರೋಪಿಗಳ ಪ್ರಕರಣ ದಾಖಲಿಸಲು ಕಾರ್ಯ ನಿರ್ವಹಿಸುವ ಹೊಣೆಗಾರಿಕೆ ನಮ್ಮದಾಗಿದೆ ಎಂದರು.
ಕಾನೂನು ಇಲಾಖೆಯ ನನ್ನ 26 ವರ್ಷಗಳ ಸೇವೆಯಲ್ಲಿ ಇಂತಹ ಒತ್ತಡಗಳನ್ನು ನಾನು ಕಂಡಿದ್ದೇನೆ. ಒತ್ತಡವನ್ನು ಸರಿದೂಗಿಸುವ ಸದುದ್ದೇಶದಿಂದ ಕ್ರೀಡೆ ಆಯೋಜನೆ ಸೂಕ್ತವಾಗಿದ್ದು, ದೈಹಿಕ ಹಾಗೂ ಮಾನಸಿಕ ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.
ಎಎಪಿ ಪಕ್ಷದ ರೈತ ಸಂಪರ್ಕ ಯಾತ್ರೆಗೆ ಅದ್ಧೂರಿ ಚಾಲನೆ
ಶಿಸ್ತು ಮೈಗೂಡಬೇಕಾದರೆ ಪ್ರತಿಯೊಬ್ಬರಿಗೂ ಕ್ರೀಡೆ ಅವಶ್ಯಕವಾಗಿದ್ದು, ಸೋಲನ್ನು ಗೆಲುವಿನಂತೆ ಸಂಭ್ರಮಿಸುವ ಅಭಿರುಚಿ ಬೆಳೆಸಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಮುಖ್ಯ ಅತಿಥಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಸ್ವಾಗತಿಸಿದರು. ಉಪ ಅಧೀಕ್ಷಕ ವೇಣುಗೋಪಾಲ್ ವಂದಿಸಿದರು.