Mandya News: ಮಂಡ್ಯದಲ್ಲಿ ಭಿನ್ನಮತ ಸ್ಪೋಟವಾಗಿದ್ದು, KPCC ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಡಾ.ಹೆಚ್.ಎನ್.ರವೀಂದ್ರ ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಚುನಾವಣೆ ಅಭ್ಯರ್ಥಿ ಹೆಸರು ಘೋಷಣೆಗೆ ಬೇಸರ ಮಾಡಿಕೊಂಡಿದ್ದ ರವೀಂದ್ರ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಕುಬೇರನಿಗೆ ಮನ್ನಣೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ರವೀಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇನ್ನು ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರವೀಂದ್ರ, ಡಿ.ಕೆ.ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟು KPCC ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ಕೊಟ್ಟಿದ್ರು. ಇದೀಗ ವಾತವರಣ ಕಲುಷಿತವಾಗಿದೆ. ಹಾಗಾಗಿ KPCC ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ. KPCCಯ ಪ್ರತಿಯೊಂದು ಕಾರ್ಯವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡ್ತಾರೆ ಅನ್ನೋ ವಿಶ್ವಾಸ ಇತ್ತು. ಕಡೆ ಗಳಿಗೆಯಲ್ಲಿ ಮೇಲುಕೋಟೆ ಕ್ಷೇತ್ರವನ್ನು ರೈತ ಸಂಘಕ್ಕೆ ನೀಡಿದ್ದಾರೆ. ರೈತ ಸಂಘಕ್ಕೆ ಬಿಟ್ಟುಕೊಡುವ ಬಗ್ಗೆ ಸೌಜನ್ಯಕ್ಕೂ ಚರ್ಚೆ ಮಾಡದೆ ತೀರ್ಮಾನ ತೆಗೆದುಕೊಂಡ್ರು.
ಕಾರ್ಯಕರ್ತರು, ಸ್ಥಳೀಯರು ನಿಮಗೆ ಗುಲಾಮರು,ನೀವು ಹೇಳಿದಾಗೆ ಕುಣಿಯುವ ಗೊಂಬೆಗಳು. ಪಕ್ಷ ಸೂಚನೆ ಮೆರೆಗೆ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರು. ಕಳೆದ ಎಂಪಿ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆದ್ದರು. ಮತದಾನ ಮುಗಿದ ನಂತರ ನಟ ದರ್ಶನ್ ಕೂಡ ಕರೆ ಮಾಡಿ ನಿಮ್ಮಿಂದ ಅಪ್ಪಾಜಿ ಅವರ ಗೌರವ ಉಳಿಯಿತು ಅಂತ ಹೇಳಿದ್ರು. ಸುಮಲತಾ ಅಂಬರೀಶ್ ಕೂಡ ಮಾತನಾಡಿ ಜನರೆಲ್ಲ ನಮ್ಮ ಸ್ಟಾರ್ ಗೆ ಅಭಿಮಾನಿಗಳು, ಆದ್ರೆ ಸ್ಟಾರ್ ಗಳು ನಿಮ್ಮಗೆ ಅಭಿಮಾನಿಗಳಾಗಿದ್ದಾರೆ ಅಂದ್ರು ಎಂದು ರವೀಂದ್ರ ಹೇಳಿದ್ದಾರೆ.
ನಾನು ಲಾಟರಿ ಹೊಡೆಯಿತು ಅನ್ಕೊಂಡೆ. ನಿಮ್ಮ ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ನಾನು ರಾಕ್ ಲೈನ್ ಅಲ್ಲ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಲ್ಲಿ ಯಾವ ಯಾವದೋ ಜಿಲ್ಲೆಯನ್ನ ಸ್ಮಾರ್ಟ್ ಸಿಟಿ ಮಾಡೋಕೆ ಹೋಗಿದ್ದಾರೆ.
ಮಂಡ್ಯ ಸ್ಮಾರ್ಟ್ ಸಿಟಿ ಮಾಡಬೇಕು ಎನ್ನುವ ಮೂಲಕ ರವೀಂದ್ರ, ಕಾಂಗ್ರೆಸ್ ಮತ್ತು ಸುಮಲತಾ ಅಂಬರೀಷ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶೇಕ್ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು
ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್
ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್