Belagavi News: ಬೆಳಗಾವಿ: ಆರ್ಎಸ್ಎಸ್ ಸಂಘದ ಚಾಲಕ ಡಾ. ಮೋಹನ್ ಭಾಗವತ್, ಬೆಳಗಾವಿಗೆ ಬಂದಿದ್ದು, ರಾನಡೆ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ಬೆಳಗಾವಿಯಲ್ಲಿ ನಾಳೆ ಆರ್ಎಸ್ಎಸ್ ಪ್ರಮುಖರ ಜೊತೆ ಮಹತ್ವದ ಬೈಠಕ್ ಇರುವ ಕಾರಣಕ್ಕೆ, ಬೆಳಗಾವಿಗೆ ಆಗಮಿಸಿರುವ ಮೋಹನ್ ಭಾಗವತ್, ಹಿಂದವಾಡಿಯ ಗುರುದೇವ ರಾನಡೆ ಮಂದಿರಕ್ಕೆ ಆಗಮಿಸಿದ್ದರು.
ಈ ವೇಳೆ ರಾನಡೆ ಮಂದಿರದ ಅಧ್ಯಕ್ಷ ಅಶೋಕ ಪೋತದಾರ, ಸೆಕ್ರೆಟರಿ ಮಾರುತಿ ಜಿರಲಿ, ಮೋಹನ್ ಭಾಗವತ್ ಅವರನ್ನು ಸ್ವಾಗತಿಸಿದರು. ಇನ್ನು ಮೋಹನ್ ಭಾಗವತ್, ರಾನಡೆ ಮಂದಿರದಲ್ಲಿ ದಾಸಭೋದ ಆರತಿ, ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಗುರುದೇವ ರಾನಡೆ ಮಂದಿರದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿದ ಭಾಗವತ್, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.




