Friday, April 18, 2025

Latest Posts

ಡಾ ಸುಧಾಕರ್ ಆಪರೇಷನ್ ಶುರು ಜೆಡಿಎಸ್ ಮಾಜಿ ಶಾಸಕ ಬಿಜೆಪಿಗೆ

- Advertisement -

ಕರ್ನಾಟಕ ಟಿವಿ ದೇವನಹಳ್ಳಿ : 2013ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಪಿಳ್ಳಮುನಿಶಾಮಪ್ಪಗೆ ಟಿಕೆಟ್ ಮಿಸ್ ಮಾಡಿ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ಕೊಟ್ಟಿದ್ರು.  ಕಳೆದ ಐದು ವರ್ಷದಿಂದ ಸೈಲೆಂಟಾಗಿದ್ದ  ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದ್ರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಸುಧಾಕರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಜರಿದ್ರು.

2023ಕ್ಕೆ ಬಿಜೆಪಿಯಿಂದ ಪಿಳ್ಳಮುನಿಶಾಮಪ್ಪ ಸ್ಪರ್ಧೆ, ಚಂದ್ರಣ್ಣಗೆ ಅರ್ಧ ಚಂದ್ರ..!

ಇನ್ನು 1994 ಜನತಾದಳದಿಂದ, 2004ರಲ್ಲಿ ಜೆಡಿಎಸ್ ನಿಂದ ಗೆಲುವು ಸಾಧಿಸಿ, 1999, 2008ರಲ್ಲಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿ ಸೋತಿದ್ದ ಜಿ ಚಂದ್ರಣ್ಣ 2013ರಲ್ಲಿ ಪಿಳ್ಳಮುನಿಶಾಮಪ್ಪಗೆ ಟಿಕೆಟ್ ಕೊಟ್ಟ ಕಾರಣ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧೇ ಮಾಡಿ ಸೋತಿದ್ರು. 2023ಕ್ಕೆ ಬಿಜೆಪಿ ಟಿಕೆಟ್ ನಿಂದ ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡಿಲು ಚಂದ್ರಣ್ಣ ತಯಾರಿ ನಡೆಸಿದ್ರು. ಇದೀಗ 2014ರಲ್ಲಿ ಜೆಡಿಎಸ್ ಟಿಕೆಟ್ ಮಿಸ್ ಮಾಡಿದ್ದ ಪಿಳ್ಳಮುನಿಶಾಮಪ್ಪ ಇದೀಗ ಬಿಜೆಪಿಗೆ ಬಂದಿರುವ ಕಾರಣ ಚಂದ್ರಣ್ಣ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ. 2023ಕ್ಕೆ ಜೆಡಿಎಸ್ ನಿಂದ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಸ್ಪರ್ಧೇ ಮಾಡಲಿದ್ದು ಬಿಜೆಪಿಯಿಂದ ಪಿಳ್ಳಮುನಿಶಾಮಪ್ಪರನ್ನ ಆಭ್ಯರ್ಥಿ ಮಾಡೋದಾಗಿ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆಯಂತೆ. ಇನ್ನು ಕಾಂಗ್ರೆಸ್ ನಿಂದ 2023, 2018ರಲ್ಲಿ ಸೋಇರುವ ವೆಂಕಟಸ್ವಾಮಿ ಜೊತೆಗೆ ಬೆಂಗಳೂರಿನ ಹೆಬ್ಬಾಳ ವಾರ್ಡ್ ಕಾರ್ಪೋರೇಟರ್ ಆಗಿದ್ದ ಆನಂದ್ ಹಾಗೂ ಮಹದೇವಪುರದ ಎಸಿ ಶ್ರೀನಿವಾಸ್ ಸಹ ದೇವನಹಳ್ಳಿ ಕೈ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಇದುವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಣಾಹಣಿ ನಡೀತಿತ್ತು. ಆದ್ರೀಗಾ ಪಿಳ್ಳಮುನಿಶಾಮಪ್ಪ ಬಿಜೆಪಿ ಸೇರ್ಪಡೆಯಿಂದ ತ್ರಿಕೋನ ಸ್ಪರ್ಧೇ ನಡೆಯಲಿದೆ..

ಶಿವಕುಮಾರ್ ಬೆಸಗರಹಳ್ಳಿ, ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss