Sunday, December 22, 2024

Latest Posts

ಬಿಸಿ ನೀರಿಗೆ ಒಂದು ಸ್ಪೂನ್ ತುಪ್ಪ ಹಾಕಿ ಕುಡಿದರೆ ಸಿಗುತ್ತದೆ ಈ ಆರೋಗ್ಯಕರ ಲಾಭ

- Advertisement -

Health Tips: ತುಪ್ಪದ ಸೇವನೆ ಮಾಡಿದರೆ, ನಮ್ಮ ದೇಹಕ್ಕೆ ಹಲವಾರು ಪೋಷಕಾಂಶಗಳು ಸಿಗುತ್ತದೆ. ಸಣ್ಣ ವಯಸ್ಸಿನಿಂದಲೇ ಯಾರು ತುಪ್ಪದ ಸೇವನೆ ಮಾಡುತ್ತಾರೋ, ಅಂಥ ಮಕ್ಕಳು ಗಟ್ಟಿಮುಟ್ಟಾಗಿರುತ್ತಾರೆ. ಹಾಗಾಗಿಯೇ ಗರ್ಭಾವಸ್ಥೆಯಲ್ಲಿದ್ದಾಗ, ತುಪ್ಪ ತಿನ್ನಲು ಹೇಳಲಾಗುತ್ತದೆ. ಇದರ ಜೊತೆಗೆ ಪ್ರತಿದಿನ ಬಿಸಿ ನೀರಿಗೆ 1 ಸ್ಪೂನ್ ತುಪ್ಪ ಹಾಕಿ ಕುಡಿದರೂ ನಿಮಗೆ ಅತ್ಯುತ್ತಮ ಆರೋಗ್ಯಕರ ಲಾಭವಾಗಲಿದೆ. ಏನದು ಲಾಭ ಅಂತಾ ತಿಳಿಯೋಣ ಬನ್ನಿ.

ಮೊದಲನೇಯದಾಗಿ ನೀವು ಬಳಸುವ ತುಪ್ಪ ಶುದ್ಧ ಹಸುವಿನ ತುಪ್ಪವೇ ಆಗಿರಬೇಕು. ಮಾರುಕಟ್ಟೆಯಲ್ಲಿ ಸಿಗುವ ಕೆಲ ತುಪ್ಪಗಳು ಕಲಬೆರಕೆ ತುಪ್ಪವಾಗಿರುತ್ತದೆ. ಅಲ್ಲದೇ, ಬಿಳಿ ತುಪ್ಪವಾಗಿದ್ದಲ್ಲಿ ಅದು ಎಮ್ಮೆ ಹಾಲಿನಿಂದ ಮಾಡಿದ ತುಪ್ಪವಾಗಿರುತ್ತದೆ. ಅಂಥ ತುಪ್ಪಗಳ ಸೇವನೆಯಿಂದ ನಿಮ್ಮ ದೇಹ ಗಟ್ಟಿಮುಟ್ಟಾಗಲು ಸಾಧ್ಯವಿಲ್ಲ.

ಎಮ್ಮೆ ತುಪ್ಪದ ಸೇವನೆಯಿಂದ ನಮ್ಮ ದೆಹದಲ್ಲಿ ಬೊಜ್ಜು ಹೆಚ್ಚಾಗುತ್ತದೆ. ದಪ್ಪವಾಗಬೇಕು ಎನ್ನುವವರು ಎಮ್ಮೆ ತುಪ್ಪ ತಿನ್ನಬಹುದು. ಆದರೆ ನಿಮ್ಮ ದೇಹದಲ್ಲಿ ಎಲುಬು ಗಟ್ಟಿ ಮುಟ್ಟಾಗಬೇಕು. ನೀವು ಶಕ್ತಿವಂತರು, ಬುದ್ಧಿವಂತರು ಆಗಬೇಕು ಅಂದ್ರೆ, ನೀವು ಹಸುವಿನ ತುಪ್ಪವನ್ನೇ ಸೇವಿಸಬೇಕು. ಹಾಗಾಗಿ ನೀವು ಸೇವಿಸುವ ತುಪ್ಪ ಶುದ್ಧ ಹಸುವಿನ ತುಪ್ಪವಾಗಿರಬೇಕು.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲು ಆಗುವಷ್ಟು ಬಿಸಿ ನೀರಿಗೆ, 1 ಸ್ಪೂನ್ ತುಪ್ಪ ಹಾಕಿ ಕುಡಿಯಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ತುಪ್ಪ ಹಾಕಿ ಕುಡಿದರೆ, ಮಲ, ಮೂತ್ರದ ಮೂಲಕ ನಿಮ್ಮ ದೇಹದಲ್ಲಿರುವ ಕೊಳೆ ಕ್ಲೀನ್ ಆಗಿ ಹೋಗುತ್ತದೆ. ಇದರಿಂದ ನೀವು ಆರೋಗ್ಯವಾಗಿದ್ದು, ಹಲವು ರೋಗಗಳಿಂದ ಮುಕ್ತಿ ಹೊಂದುವಿರಿ.

ಇದರ ಸೇವನೆಯಿಂದ ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಚಯಾಪಚಯ ಕ್ರಿಯೆ ಸುಗಮವಾದಾಗ, ಮಲ ಮೂತ್ರ ವಿಸರ್ಜನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಹೊಟ್ಟೆ ಉಬ್ಬರ, ಹೊಟ್ಟೆ ನೋವು ಇತ್ಯಾದಿ ಸಮಸ್ಯೆ ಇರುವುದಿಲ್ಲ. ಈ ವೇಳೆ ಸಮಸ್ಯೆಯಾಗದೇ ಇದ್ದಲ್ಲಿ, ನೀವು ಆರೋಗ್ಯವಾಗಿದ್ದೀರಿ ಎಂದರ್ಥ.

ಇನ್ನು ನಿಮ್ಮ ನೆನಪಿನ ಶಕ್ತಿ ಹೆಚ್ಚಬೇಕು ಅಂದ್ರೆ ತುಪ್ಪ ತಿನ್ನಬೇಕು. ನೀವು ಬಿಸಿ ನೀರಿಗೆ ತುಪ್ಪ ಬೆರೆಸಿ ತಿಂದರೆ, ನಿಮ್ಮ ನೆನಪಿನ ಶಕ್ತಿ, ಬುದ್ಧಿವಂತಿಕೆ ಹೆಚ್ಚಾಗುವುದಲ್ಲದೇ, ನಿಮಗೆ ಅನೇಕ ರೋಗಗಳಿಂದ, ನೋವುಗಳಿಂದಲೂ ಮುಕ್ತಿ ಸಿಗುತ್ತದೆ.

ನಿಮಗೆ ಮೂಳೆ ನೋವು ಶುರುವಾಗಿದೆ. ಸಂಧಿವಾತ, ಮೂಳೆ ಸವೆತ ಶುರುವಾಗುತ್ತಿದೆ ಎಂದೆನ್ನಿಸುತ್ತಿದ್ದಲ್ಲಿ, ನೀವು ಈ ರೀತಿ ಬಿಸಿ ನೀರಿಗೆ ತುಪ್ಪ ಸೇರಿಸಿ, ಕುಡಿಯಿರಿ. ಮೂಳೆ ಗಟ್ಟಿಗೊಳ್ಳುವುದಲ್ಲದೇ, ಮೂಳೆ ಸವೆತ, ಸಂಧಿವಾತದ ನೋವೆಲ್ಲ ಪರಿಹಾರವಾಗುತ್ತದೆ.

ಇಷ್ಟೇ ಅಲ್ಲದೇ, ನೀವು ಡಯಟ್ ಮಾಡುತ್ತಿದ್ದಲ್ಲಿ, ದೇಹದ ತೂಕ ಇಳಿಸಿಕೊಳ್ಳಬೇಕು ಎಂದಲ್ಲಿ, ಬಿಸಿ ನೀರಿಗೆ ತುಪ್ಪ ಸೇರಿಸಿ, ಸೇವಿಸಿ. ದೇಹದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಾಗಿ, ನಿಮ್ಮ ದೇಹದ ತೂಕವೂ ಇಳಿಯುತ್ತದೆ.

ಇನ್ನು ಇದರ ಸೇವನೆಯಿಂದ ತ್ವಚೆಯ ಅಂದ ಹೆಚ್ಚುವುದಲ್ಲದೇ, ಕೂದಲು ಉದುರುವುದೂ ಕೂಡ ಕಡಿಮೆಯಾಗುತ್ತದೆ. ಆದರೆ ನಿಮಗೆ ತುಪ್ಪ ತಿಂದಲ್ಲಿ ಅಲರ್ಜಿ ಅಂತಾದಲ್ಲಿ, ವೈದ್ಯರ ಬಳಿ ವಿಚಾರಿಸಿ, ಬಳಿಕ ತುಪ್ಪದ ಸೇವನೆ ಮಾಡುವುದು ಉತ್ತಮ.

- Advertisement -

Latest Posts

Don't Miss