ಕೋಲಾರದಲ್ಲಿ ಶಕ್ತಿ ಯೋಜನೆಗೆ ಭೈರತಿ ಸುರೇಶ್‌ರಿಂದ ಚಾಲನೆ: ಮೊದಲ ಉಚಿತ ಬಸ್ ಟಿಕೇಟ್ ಪಡೆದ ರಮಾಮಣಿ

Kolar News: ಕೋಲಾರ: ಕೋಲಾರದಲ್ಲಿಂದು ಶಕ್ತಿ ಯೋಜನೆಗೆ  ಉಸ್ತುವಾರಿ ಸಚಿವ, ಬಿ.ಎಸ್. ಸುರೇಶ್ ಚಾಲನೆ ನೀಡಿದರು.  ಇಂದು ರಾಜ್ಯದ್ಯಂತ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ಹಿನ್ನೆಲೆ, ಕೋಲಾರ ನಗರದ ನೂತನ ಸಾರಿಗೆ ಬಸ್ ನಿಲ್ದಾಣ ದಲ್ಲಿ ಚಾಲನೆ ನೀಡಲಾಗಿದ್ದು, ಕೆಂಪು ಬಸ್‌ಗಳು ಮದುವಣ ಗಿತ್ತಿಯಂತೆ ಶೃಂಗಾರಗೊಂಡಿದ್ದವು.

ರಾಜ್ಯ ಸರ್ಕಾರ ಇಂದಿನಿಂದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಜಾರಿ ಮಾಡಿದ್ದು, ಇಂದಿನಿಂದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರಲಿದೆ. ಹೀಗಾಗಿ ಕೋಲಾರ ಬೆಂಗಳೂರು ‌ಮಾರ್ಗ ಹಾಗೂ ಕೋಲಾರ ಚಿಂತಾಮಣಿ ಮಾರ್ಗಕ್ಕೆ ಎರಡು ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕ್ಕೆ ಜಿಲ್ಲಾ ಮಂತ್ರಿ ಬಿಎಸ್ ಸುರೇಶ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ  ಶಾಸಕ ಕೊತ್ತೂರು ಜಿ ಮಂಜುನಾಥ್, ಎಂಎಲ್ ಸಿ ನಸೀರ್ ಅಹ್ಮದ್, ಅನಿಲ್ ಕುಮಾರ್, ಜಿಲ್ಲಾಧಿಕಾರಿ ವೆಂಕಟರಾಜ,ಸಿಇಒ ಯುಖೇಶ್  ಕುಮಾರ್‌ ಸಾರಿಗೆ ವ್ಯವಸ್ಥಾಪಕ ಬಸವರಾಜು, ನಗರ ಸಭೆ ಸದಸ್ಯರುಗಳು, ಭಾಗಿಯಾಗಿದ್ದರು.

ಇನ್ನು ಕೋಲಾರದಲ್ಲಿ ರಮಾಮಣಿ ಎಂಬ ಮಹಿಳೆ ಉಚಿತ ಬಸ್ ಪ್ರಯಾಣದ ಟಿಕೇಟ್ ಪಡೆದರು. ರಮಾಮಣಿ ಕೋಲಾರದಿಂದ ಹೊಸಕೋಟೆಗೆ ಉಚಿತ ಪ್ರಯಾಣ ಮಾಡಿದರು.

‘ಕೋಮುಸಂಘರ್ಷದ ಮಾತು ಬಿಟ್ಟು, ಅಭಿವೃದ್ಧಿ ಕಡೆ ಗಮನ ಕೊಡಲಿ’

‘ಬಿಜೆಪಿ ಸಚಿವರ ಸರ್ಕಾರದ ನಡೆ ಹೇಗಿತ್ತು ಅಂತ ನಾನು ಹೇಳಬೇಕಾದ ಅಗತ್ಯವಿಲ್ಲ’

420 ಸರಕಾರ ಎನಿಸಿಕೊಳ್ಳಲು ನಿಮಗೆ ಆಸೆ ಇತ್ತೇ?: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

About The Author