Friday, August 8, 2025

Latest Posts

ಬಿಗ್‌ಬಾಸ್ ಮನೆಯಿಂದ ಆಸ್ಪತ್ರೆಗೆ ದಾಖಲಾದ ಡ್ರೋಣ್ ಪ್ರತಾಪ್..

- Advertisement -

Big Boss News: ಬಿಗ್‌ಬಾಸ್ ಸ್ಪರ್ಧಿ ಡ್ರೋಣ್‌ ಪ್ರತಾಪ್ ಎರಡನೇಯ ಬಾರಿ ಆಸ್ಪತ್ರೆ ದಾಖಲಾಗಿದ್ದಾರೆ. ಈ ಮೊದಲು ಕಣ್ಣಿಗೆ ಸೋಪ್ ನೀರು ತಾಕಿ, ಪ್ರತಾಪ್ ಆಸ್ಪತ್ರೆ ದಾಖಲಾಗಿದ್ದರು. ಇದೀಗ, ಫುಡ್ ಪಾಯ್ಸನ್ ಆಗಿ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಹೇಳಲಾಗಿದೆ.

ಊಟದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಆರೋಗ್ಯ ಹಾಳಾಗಿದ್ದು, ಚಿಕಿತ್ಸೆ ಪಡೆದು ಬೇಗ ಬಿಗ್‌ಬಾಸ್‌ಗೆ ಹೋಗುತ್ತಾರೆಂದು, ಪ್ರತಾಪ್ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್ ಮಾಡುವವರು, ಸ್ಟೇಟಸ್ ಹಾಕಿದ್ದಾರೆ. ಆದರೆ ಇನ್ನು ಕೆಲವರು ಪ್ರತಾಪ್‌ ಮತ್ತೆ ಬಿಗ್‌ಬಾಸ್ ಮನೆಗೆ ಬರೋದು ಡೌಟ್ ಎಂದು ಹೇಳುತ್ತಿದ್ದಾರೆ.

ಮೊನ್ನೆಯಷ್ಟೇ ಗುರೂಜಿ ಬಂದು, ನೀನು ನಿನ್ನ ಕುಟುಂಬಸ್ಥರಿಂದ ದೂರವಿರುವುದೇ ಉತ್ತಮ. ದೂರವಿದ್ದು ಧೂಪವಾಗು, ಹತ್ತಿರವಿದ್ದು ಹೇಸಿಗೆಯಾಗಬೇಡ. ಇದು ನಿನಗೂ ಒಳ್ಳೆಯದು, ನಿನ್ನ ಮನೆಯವರಿಗೂ ಒಳ್ಳೆಯದು. ನೀವು ಕಷ್ಟಪಟ್ಟರೆ, ಪ್ರಯತ್ನಪಟ್ಟರೆ, ವಿದೇಶದಲ್ಲಿ ಕೆಲಸ ಪಡೆದು, ಒಳ್ಳೆ ಭವಿಷ್ಯ ರೂಪಿಸಿಕೊಳ್ಳುವೆ ಎಂದು ಹೇಳಿದ್ದರು.

ಒಟ್ಟಾರೆಯಾಗಿ ಪ್ರತಾಪ್ ಫ್ಯಾನ್ಸ್ ಮಾತ್ರ, ಬೇಗ ಪ್ರತಾಪ್ ಹುಷಾರಾಗಿ, ಬಿಗ್‌ಬಾಸ್ ಮನೆಗೆ ಬರಲಿ. ಆಟವಾಡಲಿ, ಫೈನಲ್‌ನಲ್ಲಿ ಗೆದ್ದು, ಟ್ರೋಫಿ ಗೆಲ್ಲಲಿ ಎಂದು ಹಾರೈಸಿದ್ದಾರೆ.

- Advertisement -

Latest Posts

Don't Miss