ಬೆಂಗಳೂರು: ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿ ರೈತರು ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂ.ಅನುದಾನ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ಪ್ರಾಸ್ತಾವಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಹಲವೆಡೆ ಮಳೆಯ ಅಭಾವ ಉಂಟಾಗಿದೆ. ನಿಗದಿತ ಸಮಯಕ್ಕೂ ಮಳೆ ಬಂದಿಲ್ಲ. ಮಳೆ ಬಾರದ ಕಾರಣ ರೈತರು ಭಿತ್ತನೆ ಬೀಜಗಳನ್ನು ಹಾಕಿಲ್ಲ. ಜುಲೈ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿದೆ. ಆದರೆ,ಎಲ್ಲ ಕಡೆಯೂ ಮಳೆಯಾಗಿಲ್ಲ .
ಬಹಳಷ್ಟು ಜನರು ಮೊದಲ ಸಾರಿ ಬಿತ್ತನೆ ಮಾಡಿದ್ದಾರೆ. ನಂತರ ಎರಡನೇ ಬಾರಿಗೂ ಬಿತ್ತನೆ ಮಾಡಿದ್ದಾರೆ. ಮೊಳಕೆ ಬಂದಿಲ್ಲ. ಇದುವರೆಗೂ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು ಆದರೆ ಮಳೆ ಇಲ್ಲದೇ ಬರೀ 1 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ ಸರ್ಕಾರ ಇದನ್ನು ಬರಗಾಲ ಎಂದು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕುಡಿಯುವ ನೀರಿಗಾಗಿ ಸರ್ಕಾರ ಸಿಇಒ ಗಳಿಗೆ ಕೊಟ್ಟ ಹಣ ಸಾಲುವುದಿಲ್ಲ. ಪ್ರತಿ ಕ್ಷೇತ್ರಗಳಿಗೂ ಒಂದೊಂದು ಕೋಟಿ ಅನುದಾನ ಕೊಡಬೇಕು ಎಂದರು. ರೈತರ ಆತ್ಮಹತ್ಯೆ ಬಗ್ಗೆ ಕೃಷಿ ಸಚಿವರು ಲಘುವಾಗಿ ಮಾತನಾಡಿದ್ದಾರೆ. ಹಿಂದಿನ ವರ್ಷ ರೈತರ ಸಾವು ಇಷ್ಟಾಯಿತು, ಅಷ್ಟಾಯ್ತು ಅನ್ನುವುದು ಸರಿಯಲ್ಲ. ಅಂಕಿ ಅಂಶಗಳ ಮೂಲಕ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವುದು ಸರೀನಾ..? ನಿರ್ಲಕ್ಷ್ಯವಾಗಿ, ಬೇಜವಬ್ದಾರಿಯ ಹೇಳಿಕೆ ಸರಿಯಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡುವಂತೆ ಆಗ್ರಹಿಸಿದರು.
Sandalwood : ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗಿದೆ ಫ್ಯಾನ್ಸ್ ವಾರ್..!
HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ
Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ