Chithradurga News: ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಇಂದು ಬಿಜೆಪಿ ವತಿಯಿಂದ ಬರ ಅಧ್ಯಯನ ಮಾಡಲಾಯಿತು. ಮಾಜಿ ಸ್ಪೀಕರ್ ವಿಶ್ವೇಶ್ವರಹೆಗ್ಡೆ ಕಾಗೇರಿರವರ ತಂಡದಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಾಯಕನಹಟ್ಟಿ ಮಂಡಲದಲ್ಲಿ ಹಾಗೂ ಚಳಕೆರೆ ತಾಲೂಕಿನಲ್ಲಿ ಇಂದು ಬರ ಅಧ್ಯಯನ ಮಾಡಿದರು.
ಈ ತಂಡದಲ್ಲಿ ಚಿತ್ರದುರ್ಗ ಜಿಲ್ಲೆಯ ಮಾಜಿ ಶಾಸಕರಾದ ತಿಪ್ಪಾರೆಡ್ಡಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ, ತಿಪ್ಪೇಸ್ವಾಮಿ ಸಾತ್ ನೀಡಿದರು. ನೆಲಗೇತನ ಹಟ್ಟಿ ನಾಯಕನಹಟ್ಟಿ ಮುಂತಾದ ಹಳ್ಳಿಗಳಲ್ಲಿ ಬರ ಸಮೀಕ್ಷೆಯನ್ನು ನಡೆಸಿದರು. ನೆಲಗೇತನಟ್ಟಿಯಲ್ಲಿ ನವಣೆ, ಸಜ್ಜೆ, ಸೂರ್ಯಕಾಂತಿ, ಶೇಂಗಾ ಬೆಳೆಗಳನ್ನು ವೀಕ್ಷಣೆ ಮಾಡಿದರು.
ನಾಯಕನಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವರ ದರ್ಶನ ಪಡೆದು, ನಂತರ ಚಿಕ್ಕ ಕೆರೆ ಕೆಲ ವರ್ಷಗಳಿಂದ ಸತತವಾಗಿ ತುಂಬಿದ ಕಾರಣ ಕೆರೆ ವೀಕ್ಷಣೆಯನ್ನು ಮಾಡಿದರು. ಈ ಮಧ್ಯೆ ರೈತರನ್ನು ಕರೆದು ಒಂದು ಹೆಕ್ಟರಿಗೆ ಎಷ್ಟು ಖರ್ಚು ಬರುತ್ತದೆ ಎಂದು ಕೇಳಿದರು. ರೈತರು ಇದಕ್ಕೆ ಒಂದು ಪಲ್ಲಕ್ಕೆ 40,000 ಖರ್ಚು ಬರುತ್ತದೆ. ಸಜ್ಜೆ ಮತ್ತು ನವಣೆಗೆ 20 ರಿಂದ 25 ಸಾವಿರ ಖರ್ಚು ಬರುತ್ತದೆ ಎಂದು ಹೇಳಿದರು.
ಮಾಜಿ ಸ್ಪೀಕರ್ ವಿಶ್ವೇಶ್ವರಹೆಗ್ಡೆ ಕಾಗೇರಿ:- 125 ವರ್ಷಗಳಲ್ಲಿ ಇಂತಹ ಬರಗಾಲ ಎಂದು ಕಂಡಿಲ್ಲ ರೈತರಿಗೆ ಪರಿಹಾರವಾಗಲಿ, ಕರೆಂಟ್, ಅಕ್ಕಿ ಯಾವುದೇ ಕೇಳಿದರು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಿದೆ ಇವರ ಜವಾಬ್ದಾರಿಯಾದರೂ ಏನು..? ಎಂದು ಪ್ರಶ್ನಿಸಿದರು.
ಗ್ಯಾರೆಂಟಿಗಳಿಗೆ ಇವರುಗಳು ಕೊಡುವುದಕ್ಕೆ ಆಗುತ್ತಿಲ್ಲ ಪರಿಹಾರಕ್ಕೆ ಇವರು ಎಲ್ಲಿಂದ ಕೊಡುತ್ತಾರೆ….?
ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆ ಗಾಗಿ ಶಾಸಕರುಗಳನ್ನು ಕಳಿಸಿಕೊಡುತ್ತಿದ್ದಾರೆ. ಆದರೆ ಬರ ಬಂದರೂ ಕೂಡ ಯಾವ ಶಾಸಕರಾಗಲಿ, ಮಂತ್ರಿಗಳಾಗಲಿ, ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರುಗಳಾಗಲಿ ಯಾರೂ ಕೂಡ ಪರಿವೀಕ್ಷಣೆ ಮಾಡಲು ಬಂದಿಲ್ಲ. ರೈತರ ನೋವುಗಳೇನು ಎಂದು ಕೇಳಿಲ್ಲ. ನಮ್ಮ ಬಿಜೆಪಿ ಪಕ್ಷ ಎರಡು ದಿನಗಳಿಂದ ತಂಡಗಳನ್ನು ಮಾಡಿಕೊಂಡು ಸತತವಾಗಿ ಪರಿವೀಕ್ಷಣೆ ಮಾಡುತ್ತಿದ್ದೇವೆ. ರೈತರ ಬಳಿ ಹೋಗಿ ಅವರ ನೋವುಗಳನ್ನು ಕೆಳುತ್ತಿದ್ದೇವೆ. ಈ ಬರೋ ವೀಕ್ಷಣ ವರದಿಯನ್ನು ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಕಳಿಸಿ ಕೊಡುತ್ತವೆ. ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಧ್ಯಮಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆ ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ಮೊಳಕಾಮೂರು ಮಾಜಿ ಶಾಸಕರಾದ ನೇರಲಗುಂಟೆ ತಿಪ್ಪೇಸ್ವಾಮಿ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವಣ್ಣ ರಾಮರೆಡ್ಡಿ, ಮಾಂತೇಶ್, ಗೋವಿಂದಪ್ಪ, ಮಹೇಶ್ ಹಾಗೂ ಬಿಜೆಪಿಯ ಪದಾಧಿಕಾರಿಗಳು ಪರ ವೀಕ್ಷಣೆಯಲ್ಲಿ ಭಾಗಿಯಾಗಿದ್ದರು.
ವರದಿ:- ಆಂಜನೇಯ ನಾಯಕನಹಟ್ಟಿ
ಜಗದೀಶ್ ಶೆಟ್ಟರ್ ಇಂತಹ ಹಲ್ಕಾ ಕೆಲಸ ಬಿಡಬೇಕು: ಶೆಟ್ಟರ್ ವಿರುದ್ಧ ಯತ್ನಾಳ್ ವಾಗ್ದಾಳಿ