Movie News: ಡ್ರಗ್ಸ್ ಕಳ್ಳಸಾಗಾಣೆ ಮಾಡಿದ ಆರೋಪದಡಿ ಖ್ಯಾತ ನಿರ್ಮಾಪಕ ಜಫರ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಡ್ರಗ್ಸ್ ಬೆಲೆ 2 ಸಾವಿರ ಕೋಟಿ ರೂಪಾಯಿ ಆಗಿದೆ.
ಜಫರ್ ಸಾದಿಕ್ ಬರೀ ತಮಿಳು ನಿರ್ಮಾಪಕನಲ್ಲ, ರಾಜಕಾರಣಿಯೂ ಹೌದು. ತಮಿಳುನಾಡು ಪೊಲೀಸರು ಮಾದಕ ವಸ್ತುಗಳ ಜಾಲ ಪತ್ತೆಹಚ್ಚಲು ತಂಡವೊಂದನ್ನು ರಚನೆ ಮಾಡಿ, ಕಾರ್ಯಾಚರಣೆ ನಡೆಸಿದಾಗ, ಈತ ಡ್ರಗ್ಸ್ ಸಾಗಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಈತನನ್ನು ಅರೆಸ್ಟ್ ಮಾಡಿ, ಡ್ರಗ್ ಮಾಫಿಯಾ ಮಾಸ್ಟರ್ಮೈಂಡ್ ಎಂದು ಘೋಷಣೆ ಮಾಡಲಾಗಿದೆ.
ಇನ್ನು ಈತನ ಮೇಲಿನ ಆರೋಪ ಸಾಬೀತಾಗುತ್ತಿದ್ದಂತೆ, ಡಿಎಂಕೆ ಪಕ್ಷದವರು ಕೂಡ ಜಫರ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಜಫರ್ ಬೇರೆ ಬೇರೆ ರೀತಿಯ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಡ್ರಗ್ಸ್ನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸುತ್ತಿದ್ದನೆನ್ನಲಾಗಿದೆ. ಅಲ್ಲದೇ ನಿಷೇಧಿತವಾಗಿರು, ಮಾರಣಾಂತಿಕ ಡ್ರಗ್ಸ್ಗಳ ಮಾರಾಟವನ್ನೂ ಮಾಡಿದ್ದಾನೆ ಜಫರ್.
ಈತ ವಿದೇಶಗಳಿಗೆ ಮಾಲ್ ರಫ್ತು ಮಾಡುವಾಗ, ಡ್ರೈಫ್ರೂಟ್ಸ್, ಸ್ನ್ಯಾಕ್ಸ್ ಬಳಸಿ, ಅದರ ಮಧ್ಯೆ ಮಾದಕವಸ್ತುಗಳನ್ನಿಟ್ಟು ರಫ್ತು ಮಾಡುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಈ ಸತ್ಯ ಬೆಳಕಿಗೆ ಬಂದಿದ್ದು, ಇದರ ಹಿಂದಿನ ಆರೋಪಿ ಯಾರೆಂದು, ಪೊಲೀಸರು ತಂಡ ರಚಿಸಿ, ಬಲೆಬೀಸಿದ್ದರು. ಕೊನೆಗೂ ಆರೋಪಿ ಸಿಕ್ಕಿದ್ದು, ಜಫರ್ ಅರೆಸ್ಟ್ ಆಗಿದ್ದಾನೆ.
ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ಕೊಡಬೇಕಂತೆ 1 ಸಾವಿರ ರೂಪಾಯಿ..
ಟಿಕೆಟ್ ದೊರೆತರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ: ಮೋಹನ್ ಲಿಂಬಿಕಾಯಿ