Mandya News: ಮಂಡ್ಯ: ಕಾಂಗ್ರೇಸ್ ನಲ್ಲಿ ಟಿಕೆಟ್ ಪಡೆಯಲು ದುಡ್ಡೆ ಮಾನದಂಡ. ಕಾಸು ಇದ್ದವರನ್ನ ಪಕ್ಷಕ್ಕೆ ಕೆರದುಕೊಂಡು ಬರ್ತಾರೆ ಎಂದು ರವೀಂದ್ರ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ರವೀಂದ್ರ, MLA ಎಲೆಕ್ಷನ್ ವೇಳೆ ಚಲುವರಾಯಸ್ವಾಮಿ ನನ್ನ ವಿರುದ್ದ ಒಬ್ಬರನ್ನ ಎತ್ತಿ ಕಟ್ಟಿದ್ರು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ದ ಡಾ.ಹೆಚ್.ಎನ್.ರವೀಂದ್ರ ಆರೋಪಿಸಿದ್ದಾರೆ.
MLA ಚುನಾವಣೆಯಲ್ಲಿ ಆಕಾಂಕ್ಷಿತರೆಲ್ಲ ಎಂಎಲ್ಎ ಟಿಕೆಟ್ ಗೆ ಒಂದು ಲಕ್ಷ ದುಡ್ಡು ಕಟ್ಟಿದ್ವಿ. ನಾನು ನಿಲ್ಲಲ್ಲ, ನಾನು ಸ್ಪರ್ಧಿಸಿದ್ರು ಚಲುವರಾಯಸ್ವಾಮಿ ಗೆಲ್ಲಕ್ಕೆ ಬಿಡಲ್ಲ ಅಂತ ಹೇಳಿದ್ದೆ. ನನ್ನ ಮತ್ತೊಬ್ಬ ಆಕಾಂಕ್ಷಿಗೆ ನೀನೆ ನಿಲ್ಲು ಸಪೋರ್ಟ್ ಮಾಡ್ತಿನಿ ಅಂತ ಹೇಳಿದ್ದೆ. ಗಣಿಗ ರವಿಕುಮಾರ್ ಟಿಕೆಟ್ ವಿಚಾರದಲ್ಲಿ ಚಲುವರಾಯಸ್ವಾಮಿ ಗೆ ಬೈದಿದ್ದೆ. ನನ್ನ ಹಾಗೂ ಚಲುವರಾಯಸ್ವಾಮಿ ಗೆ ಮನಸ್ತಾಪ ಕೂಡ ಆಗಿತ್ತು, ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆಲ್ಲಿಸಿಕೊಂಡ್ರು.
ಸರ್ಕಾರ ರಚನೆಯಾಗಿ ಚಲುವರಾಯಸ್ವಾಮಿ ಮಂತ್ರಿಯಾದ್ರು. ಕರೆ ಮಾಡಿ ಎಲ್ಲಾ ಬಿಟ್ಟು ಕೆಲಸ ಮಾಡೋಣ ಅಂತ ಹೇಳಿದ್ರು. ಸಚಿವರ ಬಗ್ಗೆ ಸಾಮಾಜಿಕ ಜಾಲತಾಣದ ನನ್ನನ್ನೆ ಗೇಲಿ ಮಾಡ್ಕೊಂಡು ಬರೆದಿದೆ. ಎಂಪಿ ಚುನಾವಣೆ ವಿಚಾರದಲ್ಲಿ ಚಲುವರಾಯಸ್ವಾಮಿ ನನ್ನ ಹೆಸರು ತೆಗೆದುಕೊಂಡಿದ್ರು. ಕಾಂಗ್ರೇಸ್ ನಲ್ಲಿ ಟಿಕೆಟ್ ಪಡೆಯಲು ಮಾನದಂಡ ಅಂದ್ರೆ ಅದು ದುಡ್ಡೆ ಮಾನದಂಡ ಎಂದು ರವೀಂದ್ರ ಆರೋಪಿಸಿದ್ದಾರೆ.
7ಜನ ಎಂಎಲ್ ಎ ಇದ್ದಾರೆ, ದುಡ್ಡು ಇರುವವರು ಇದ್ದರೆ ಗೆದ್ದೆ ಗೆಲ್ತೇವೆ ಅನ್ಕೊಂಡಿದ್ದಾರೆ. ಇದೆ ವಿಚಾರದಲ್ಲಿ ಕುಮಾರಸ್ವಾಮಿ ದುಡಿಕಿ ಯಡವಟ್ಟು ಮಾಡಿಕೊಂಡರು. ಅವರ ತರ ಈಗಾ ನೀವು ಯೋಚನೆ ಮಾಡಿದ್ರೆ ಕಷ್ಟ. ಅದೇ ಜಿದ್ದಿಗೆ ಬಿದ್ದು ಚುನಾವಣೆ ಮಾಡ್ತಿನಿ ಅಂದ್ರೆ ಅಷ್ಟು ಸುಲಭವಾಗಿ ಜಿಲ್ಲೆಯ ಜನ ಬಗ್ಗುವ ಮಕ್ಕಳಲ್ಲ ಇವರಿಗೆ ದುಡ್ಡು ತಂದು ಕೊಡೊಕೆ ನಾವು ಅಷ್ಟು ಲಂಚ ಹೊಡೆದಿಲ್ಲ. ಕಾಸು ಇರುವವರನ್ನ ಪಕ್ಷಕ್ಕೆ ಕೆರದುಕೊಂಡು ಬರ್ತಿರಾ? ಎಸ್.ಟಿ.ಸೋಮಶೇಖರ್ ಕ್ರಾಸ್ ಓಟ್ ಮಾಡಿದ್ದಾನೆ, ಇವಾಗ ಕಾಂಗ್ರೆಸ್ ಕರೆದುಕೊಂಡು ಬರ್ತಿದ್ದಿರಿ. ಸ್ಥಳೀಯ ಕಾರ್ಯಕರ್ತರಿಗೆ ಚ…ಯಲ್ಲಿ ಹೊಡೆದಾಗೆ ಆಗಲ್ವಾ? ಪಕ್ಷದ ಚೌಕಟ್ಟು ನನ್ನಂತವರಿಗೆ ಹೊಂದಲ್ಲ ಆಗಾಗಿ ರಾಜೀನಾಮೆ ಕೊಡ್ತಿದ್ದೇನೆ ಎಂದು ಡಾ.ಹೆಚ್.ಎನ್.ರವೀಂದ್ರ ಆಕ್ರೋಶ ಹೊರಹಾಕಿದ್ದಾರೆ.
ಶೇಕ್ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು
ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್
ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್