Dharwad News: ಧಾರವಾಡ (ಕುಂದಗೋಳ ): ಮುಂಗಾರು ಮಳೆ ದಿನೇ ದಿನೇ ಭಾರಿ ಹಿನ್ನಡೆ ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತ ಕುಲ ಅಕ್ಷರಶಃ ಚಿಂತೆಗೆ ಈಡಾಗಿ ಇದೀಗ ಮಳೆಗಾಗಿ ಗುರ್ಜಿ ಪೂಜೆ ಚೌಡಮ್ಮನ ಮೊರೆ ಹೋಗಿದ್ದಾರೆ.
ಹೌದು. ಈಗಾಗಲೇ ಸಂಪೂರ್ಣ ಬಿತ್ತನೆ ಕಾರ್ಯ ಮುಗಿಸಬೇಕಿದ್ದ ರೈತರು ಮುಂಗಾರು ಮಳೆ ಅಭಾವದ ಕಾರಣ ಬೀಜ ಗೊಬ್ಬರ ದಾಸ್ತಾನು ಮಾಡಿ ಮಳೆಯಿಲ್ಲದೆ ಬಿತ್ತನೆ ಇಲ್ಲದೆ ಸಂಕಷ್ಟದಲ್ಲಿ ಗುರ್ಜಿ ಪೂಜೆ ಕೈಗೊಂಡು ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸಿದ್ದೇಶ್ವರ ಪ್ಲಾಟ್ ರೈತಾಪಿ ಮಹಿಳೆಯರು ಚೌಡೇಶ್ವರಿ ಪೂಜೆ ಗುರ್ಜಿ ಆಟವಾಡಿ ಮುಂಗಾರು ಮಳೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸದ್ಯ ಕುಂದಗೋಳ ತಾಲೂಕಿನ ಎಲ್ಲೇಡೆ ಉಷ್ಣ ಗಾಳಿಯೆ ಹೆಚ್ಚಾಗಿದ್ದು ಬಿತ್ತನೆಯ ದಿನಗಳು ಅವಧಿ ಮೀರುತ್ತಿವೆ. ಈ ಹಿನ್ನೆಲೆಯಲ್ಲಿ ರೈತಾಪಿ ಮಹಿಳೆಯರು ಗುರ್ಜಿ ಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮ ಕೈಗೊಂಡು ತಾಯಿ ಚೌಡೇಶ್ವರಿಗೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ ಇಎಸ್ಐ ಆಸ್ಪತ್ರೆಯಲ್ಲಿ ಹಾವುಗಳ ಹಾವಳಿ: ಆತಂಕದಲ್ಲಿಯೇ ಸಿಬ್ಬಂದಿ ಹಾಗೂ ಸಾರ್ವಜನಿಕರು
ಪೌರಕಾರ್ಮಿಕರಿಗೆ ಕಳಪೆ ಆಹಾರ: ನಿರ್ಲಕ್ಷ್ಯವೋ..? ಕಮೀಷನ್ ಕರಾಳ ದಂಧೆಯೋ…?