ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಚರಣೆ: ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ನಿರ್ಗತಿಕ ಬಡ ಮಕ್ಕಳಿಗೆ ಹಬ್ಬ ಗೊತ್ತಾಗಲಿ, ಎಲ್ಲರಂತೆ ಅವರು ಹಬ್ಬ ಮಾಡಲಿ ಅನ್ನುವ ಕಾರಣಕ್ಕೆ ಇವತ್ತು ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ ಮಾಡಾಲಾಯ್ತು. ಮಾತೃ ಛಾಯಾ ಬಾಲ ಕಲ್ಯಾಣ ಕೇಂದ್ರದ ಜೊತೆ ಅಕ್ಕ ಪಕ್ಕದ ನಿವಾಸಿಗಳೆಲ್ಲ ಸೇರಿ ಆ ನಿರ್ಗತಿಕ ಮಕ್ಕಳಿಗೆ ಕುಮಾರಿಕಾ ಪೂಜೆ ಮಾಡಿದರು.

ಹುಬ್ಬಳ್ಳಿ ಮಾತೃ ಛಾಯಾ ಬಾಲ ಮಂದಿರದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಾಲ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗಾಗಿ ಕುಮಾರಿಕಾ ಪೂಜೆ ಹಮ್ಮಿಕೊಳ್ಳಲಾಯ್ತು. ಇದೀಗ ಹೇಳಿ ಕೇಳಿ ದಸರಾ ಹಬ್ಬ. ಇವತ್ತು ಲಲಿತ ಪಂಚಮಿ ಇಲ್ಲಿರೋ ನಿರ್ಗತಿಕ ಮಕ್ಕಳಿಗೆ ಹಬ್ಬ ಅನ್ನೋದು ಗಗನ ಕುಸುಮ. ಅಂತಹ ಮಕ್ಕಳಿಗಾಗಿ ಕುಂಕುಮಾರ್ಚನೆ ಮಾಡಿ, ಮಕ್ಕಳಿಗೆ ಪೂಜೆ ಮಾಡಿ‌ ಕುಮಾರಿಕಾ ಹಬ್ಬ ಆಚರಿಸಿ ಬಾಲ ಮಂದಿರ ಜೊತೆ ಅಕ್ಕ ಪಕ್ಕದ ನಿವಾಸಿಗಳು ನಿರ್ಗತಿಕ ಮಕ್ಕಳ ಮುಖದಲ್ಲಿ ಹಬ್ಬದ ಕಳೆ ತಂದಿದ್ದಾರೆ.

ಬಾಲ‌ ಮಂದಿರದಲ್ಲಿರೋ ನಿರ್ಗತಿಕ ಮಕ್ಕಳಿಗೆ ಮಾತೆಯರು ಪೂಜೆ ಮಾಡಿದ್ದು ವಿಶೇಷವಾಗಿತ್ತು. ಮನೆಯಲ್ಲಿ ಆದರೆ ತಂದೆ ತಾಯಿ ಹಬ್ಬ ಮಾಡೋದನ್ನ ಮಕ್ಕಳು ನೋಡ್ತಾರೆ, ಇವರೆಲ್ಲ ನಿರ್ಗತಿಕ ಮಕ್ಕಳು, ಇವರಿಗೆ ಹಬ್ಬ ಅನ್ನೋದು ಗೊತ್ತಿಲ್ಲ. ಅಂತಹ ಮಕ್ಕಳಿಗೆ ಪೂಜೆ ಮಾಡಿದ್ದು ಇವತ್ತು ವಿಶೇಷವಾಗಿತ್ತು.

ಹುಬ್ಬಳ್ಳಿಯ ಕೇಶ್ವಾಪೂರದಲ್ಲಿರೋ ಬಾಲ ಮಂದಿರದಲ್ಲಿ ಸುಮಾರು 32 ಜನ ನಿರ್ಗತಿಕ ಮಕ್ಕಳಿದಾರೆ. ಮಕ್ಕಳೆಲ್ಲ ಬೇರೆ ಬೇರೆ ಶಾಲೆಯಲ್ಲಿ ಓದುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಇದೀಗ ದಸರಾ ಹಬ್ಬದ ಸಂಭ್ರಮ. ಆದರೆ ಇಲ್ಲಿರುವ ಮಕ್ಕಳಿಗೆ ಹಬ್ಬದ ಖುಷಿ ಇರಲಿಲ್ಲ, ಮಿಗಿಲಾಗಿ ತಂದೆ ತಾಯಿ ಇಲ್ಲ ಅನ್ನೋ ನೋವು. ಆ ನೋವು ನಿವಾರಣೆ ಮಾಡಲು ಕೇಶ್ವಾಪೂರದಲ್ಲಿರೋ ಮಾತೆಯರು ಇಂದು ಮುಂದಾಗಿದ್ದರು.

ನಿರ್ಗತಿಕ ಮಕ್ಕಳನ್ನ ಸಾಲಿಗೆ ಕೂರಿಸಿ ಅವರಿಗೆ ಕುಮಾರಿಕಾ ಪೂಜೆ ಮಾಡಿ ಮಾನವೀಯತೆ ಸಾರಿದ್ದಾರೆ‌. ಪೂಜೆ ನಂತರ ಎಲ್ಲರೊಂದಿಗೆ ಮಕ್ಕಳು ಬೆರೆತು ಕೋಲಾಟ ಆಡಿದರು. ನಿರ್ಗತಿಕ ಮಕ್ಕಳೊಂದಿಗೆ ಬಾಲ ಮಂದಿರದ ಪಕ್ಕದಲ್ಲಿರೋ ಕೆಲ ಮಕ್ಕಳು ಭಾಗಿಯಾಗಿದ್ದರು.

ನಿರ್ಗತಿಕ ಮಕ್ಕಳಲ್ಲೂ ಇಂದು ದಸರಾ ಹಬ್ಬದ ಸಡಗರ ಮನೆ ಮಾಡಿತ್ತು. ತಂದೆ ತಾಯಿ ಇಲ್ಲ ಅನ್ನೋ ನೋವು ಕಾಡಬಾರದು ಅನ್ನೋ ಕಾರಣಕ್ಕೆ ಬಾಲ ಮಂದಿರ ಇಂತಹ ಕಾರ್ಯಕ್ರಮ ಮಾಡಿದ್ದೂ ನಿಜಕ್ಕೂ ಒಳ್ಳೆಯ ಕೆಲಸ.

ಕುಂದಗೋಳದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಅಂಗನವಾಡಿ ಕಾರ್ಯಕರ್ತೆಯರು.

1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

‘ನಾನೇ ಅಂತರ್ಜಾತಿ ವಿವಾಹ ಆಗಿದ್ದೇನೆ. ನಾನೇನು ಚೇಂಜ್ ಆಗಿದ್ದೀನಾ..?’

About The Author