Hubballi News: ಹುಬ್ಬಳ್ಳಿ: ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಎಸ್ ಉಗ್ರರ ಜೊತೆಗೆ ನಂಟು ಇದ್ದವರು ಭಾಗವಹಿಸಿಲ್ಲ. ಡೈನಾಮಿಕ್ ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರು ಸುಖಾಸುಮ್ಮನೆ ಆರೋಪ ಮಾಡ್ತಾ ಇದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಾಷಾಪೀರ್ ದರ್ಗಾದ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ ನೀಡಿದ್ದಾರೆ.
ಮುಸ್ಲಿಂ ಧರ್ಮ ಗುರುಗಳ ಸಮಾವೇಶಕ್ಕೆ 150 ಕ್ಕೂ ಸೂಪಿಗಳಿಗೆ ಆಹ್ವಾನ ನೀಡಲಾಗಿತ್ತು. 100 ಕ್ಕೂ ಹೆಚ್ಚು ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸ್ ಉಗ್ರರ ಜೊತೆಗೆ ನಂಟು ಇದ್ದವರು ಇಲ್ಲ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ ವೇದಿಕೆಯ ಮೇಲೆ 25 ಜನ ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ವೇದಿಕೆಯ ಮೇಲೆ ಯಾರು ಭಾಗವಹಿಸಲಿದ್ದಾರೆಂಬ ಎಲ್ಲಾ ಮಾಹಿತಿಯನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು.
ಒಂದು ವೇಳೆ ಐಎಸ್ ಉಗ್ರರ ಜೊತೆಗೆ ನಂಟು ಇದ್ದಿದ್ದು ಆದ್ರೆ ಗುಪ್ತ ಇಲಾಖೆಗೆ ಮಾಹಿತಿ ಇರಬೇಕಾಗಿತ್ತು. ಐಎಎಸ್ ಉಗ್ರರ ಜೊತೆಗೆ ಯಾರು ನಂಟು ಇದ್ದರೆಂಬುದನ್ನ ಯತ್ನಾಳ ಅವರೇ ಹೇಳಲಿ. ಬಸವರಾಜ ಪಾಟೀಲ್ ಯತ್ನಾಳ ಉಗ್ರರ ಜತೆಗಿನ ನಂಟು ಇದ್ದವರ ಹೆಸರನ್ನ ಬಹಿರಂಗಪಡಿಸಲಿ. ನಾವು ಎಲ್ಲಾ ತನಿಖೆಗೆ ಸಿದ್ದರಾಗಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ಆಗಲಿ ಅಂತ ಸರ್ಕಾರಕ್ಕೆ ಮನವಿ ಮಾಡುತ್ತೆವೆ ಎಂದು ಹೇಳಿದರು.
ನಾನು ಸಿಎಂ ಸಿದ್ಧರಾಮಯ್ಯನವರ ವಕ್ತಾರನಲ್ಲ: ಹರಿಪ್ರಸಾದ್ ಪರೋಕ್ಷ ಅಸಮಾಧಾನ..!
ಸಿಎಂ ಹೇಳಿದ್ದು, ನೂರಕ್ಕೆ ನೂರು ಸತ್ಯ, ಇಲ್ಲಿರುವ ಮುಸ್ಲಿಂಮರು ಪಾಕಿಸ್ತಾನದವರಾ..?: ಸಚಿವ ತಿಮ್ಮಾಪೂರ
ಎರಡು ದಿನಗಳ ಕಾಲ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತದೆ: ಸಚಿವ ಜಾರಕಿಹೊಳಿ