Saturday, July 27, 2024

Latest Posts

ಬೇಸಿಗೆಯಲ್ಲಿ ಈ 5 ಆಹಾರಗಳನ್ನು ನೀವು ಸೇವಿಸಲೇಬೇಕು..

- Advertisement -

ಇನ್ನು ಎರಡು ತಿಂಗಳಲ್ಲೇ ಬೇಸಿಗೆ ಆರಂಭವಾಗಲಿದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಕೂಲ್ ಕೂಲ್ ಆಹಾರದ ಮೊರೆ ಹೋಗ್ತೀವಿ. ಜ್ಯೂಸ್ , ಐಸ್‌ಕ್ರೀಮ್ ಮೊರೆ ಹೋಗ್ತೀವಿ. ಆದ್ರೆ ನಾವು ಈ ಜ್ಯೂಸ್,ಐಸ್‌ಕ್ರೀಮ್‌ಗಿಂತಾನೂ ಮುಖ್ಯವಾಗಿ ಆರೋಗ್ಯಕರವಾದ ತಂಪು ಆಹಾರವನ್ನು ಸೇವಿಸಬೇಕು. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ನೋಡೋಣ ಬನ್ನಿ..

ಮೊದಲನೇಯದಾಗಿ ನೀರಿನ ಅಂಶವನ್ನು ಒಳಗೊಂಡ ಹಣ್ಣುಗಳನ್ನ ತಿನ್ನಬೇಕು. ಕಲ್ಲಂಗಡಿ, ಮಸ್ಕ್‌ಮೆಲನ್, ಕಿತ್ತಳೆ ಹಣ್ಣು ಇವುಗಳನ್ನ ಸೇವಿಸಬೇಕು. ಯಾಕಂದ್ರೆ ಇವುಗಳಲ್ಲಿ ಶೇ.90ರಷ್ಟು ನೀರಿನ ಅಂಶವಿರುತ್ತದೆ. ಇದು ನಿಮ್ಮ ದೇಹದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಸೀಸನಲ್ ಹಣ್ಣುಗಳನ್ನ ಕೂಡ ನೀವು ಸೇವಿಸಲೇಬೇಕು. ಬೇಸಿಗೆಯಲ್ಲಿ ಸಿಗುವ ಹಣ್ಣಂದ್ರೆ ಮಾವಿನ ಹಣ್ಣು. ಮಾವಿನ ಹಣ್ಣನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಉಷ್ಣ ಮತ್ತು ತಂಪಿನ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಬೇಸಿಗೆಯಲ್ಲಿ ಬರೀ ತಂಪಿನ ಪದಾರ್ಥ ತಿಂದರೆ ಜೀರ್ಣಕ್ರಿಯೆ ಸರಿಯಾಗುವುದಿಲ್ಲ. ಹಾಗಾಗಿ ಮಾವಿನ ಹಣ್ಣಿನ ಸೇವನೆ ಮಾಡಲೇಬೇಕಾಗಿದೆ. ಅಲ್ಲದೇ ಸೀಸನಲ್ ಫ್ರೂಟ್ಸ್‌ ತಿನ್ನೋದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಎರಡನೇಯದಾಗಿ ಸಮ್ಮರ್ ಡ್ರಿಂಕ್ಸ್. ಬೇಸಿಗೆಯಲ್ಲಿ ದೇಹಕ್ಕೆ ತಂಪಾದ ದ್ರವ ಪದಾರ್ಥಗಳನ್ನು ನಾವು ಸೇವಿಸಬೇಕಾಗುತ್ತದೆ. ಮೊಸರು, ಮಜ್ಜಿಗೆ, ಎಳನೀರು, ಹಣ್ಣಿನ ರಸ, ನಿಂಬೆ ಜ್ಯೂಸ್‌, ಮಿಲ್ಕ್‌ ಶೇಕ್ ಇವುಗಳೆಲ್ಲ ಸೇವಿಸುವುದರಿಂದ ಬೇಸಿಗೆಯಲ್ಲಿ ನಮ್ಮ ದೇಹ ತಂಪಾಗಿರುತ್ತದೆ. ಆದ್ರೆ ಇದನ್ನೆಲ್ಲ ಮನೆಯಲ್ಲೇ ಮಾಡಿಕೊಂಡು ಕುಡಿದರೆ ಉತ್ತಮ. ನೀವು ಇದನ್ನೆಲ್ಲ ಪ್ಯಾಕ್‌ನಲ್ಲಿ ಖರೀದಿಸಿ ಕುಡಿದರೆ ಪ್ರಯೋಜನವಿಲ್ಲ. ಯಾಕಂದ್ರೆ ಅಂಗಡಿಯಲ್ಲಿ ಸಿಗುವ ಪ್ಯಾಕ್ಡ್ ಜ್ಯೂಸ್‌ನಲ್ಲಿ ಪ್ರಿಸರ್ವೇಟಿವ್ಸ್ ಬಳಸಿರುತ್ತಾರೆ. ಇದರಿಂದ ತುಂಬ ದಿನ ಜ್ಯೂಸ್ ಕೆಡುವುದಿಲ್ಲ. ಹಾಗಾಗಿ ಅಂಥ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಆರೋಗ್ಯ ಹಾಳಾಗುವುದೇ ಹೆಚ್ಚು.

ಮೂರನೇಯದಾಗಿ ಮಸಾಲೆ ಪದಾರ್ಥಗಳು. ಇದೇನಪ್ಪಾ ಮಸಾಲೆ ಪದಾರ್ಥಗಳು ನಮ್ಮ ದೇಹವನ್ನು ತಂಪು ಮಾಡುತ್ತಾ ಅನ್ನೋ ಪ್ರಶ್ನೆಗೆ ಉತ್ತರ, ಹೌದು ಮಸಾಲೆಗೆ ಬಳಸುವ ಕೆಲ ಪದಾರ್ಥಗಳ ಸೇವನೆಯಿಂದ ನಮ್ಮ ದೇಹ ತಂಪಾಗಿರುವುದಲ್ಲದೇ, ಜೀರ್ಣಶಕ್ತಿ ಉತ್ತಮವಾಗಿರುತ್ತದೆ. ಏಲಕ್ಕಿಯನ್ನು ತಿನ್ನುವುದರಿಂದ ನಿರ್ಜಲೀಕರಣವಾಗುವುದನ್ನ ತಡೆಗಟ್ಟುತ್ತದೆ. ಇದನ್ನ ಹಾಲಿಗೆ, ಎಳನೀರಿಗೆ ಹಾಕಿ ಸೇವಿಸಬಹುದು. ಆದ್ರೆ ಎರಡಕ್ಕಿಂತ ಹೆಚ್ಚು ಏಲಕ್ಕಿ ತಿನ್ನದಿರುವುದು ಉತ್ತಮ. ಇನ್ನು ಜೀರಿಗೆ. ಜೀರಿಗೆ ಆರೋಗ್ಯಕ್ಕೆ ತಂಪು. ಬೇಸಿಗೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ನಮ್ಮ ದೇಹ ತಂಪಾಗಿರುತ್ತದೆ. ಇನ್ನು ಊಟದ ಬಳಿಕ ನೀವು ಸೋಂಪನ್ನ ಸೇವನೆ ಮಾಡುವುದು ಉತ್ತಮ.

ನಾಲ್ಕನೇಯದಾಗಿ ಹಸಿ ತರಕಾರಿ ಸೇವನೆ ಮಾಡಬೇಕು. ಸೌತೇಕಾಯಿ, ಈರುಳ್ಳಿ, ಕ್ಯಾರೆಟ್, ಬೀಟ್‌ರೂಟ್ ಸೇವನೆ ಮಾಡುವುದು ಉತ್ತಮ. ಇದರಿಂದ ಆರೋಗ್ಯ ಉತ್ತಮವಾಗಿರುವುದಲ್ಲದೇ, ಇದು ನಿಮ್ಮ ಸೌಂದರ್ಯ ಕಾಪಾಡುವಲ್ಲಿಯೂ ಸಹಾಯಕವಾಗಿದೆ.

ಐದನೇಯದಾಗಿ ಸಿರಿಧಾನ್ಯ ಮತ್ತು ಡ್ರೈಫ್ರೂಟ್ಸ್. ಸಿರಿಧಾನ್ಯದ ಸೇವನೆ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ಅಭಿವೃದ್ಧಿಗೊಳ್ಳುತ್ತದೆ. ಇತ್ತೀಚಿಗೆ ಬಿಪಿ, ಶುಗರ್ ಇದ್ದವರು ಸಿರಿಧಾನ್ಯಗಳ ಗಂಜಿ ಸೇವಿಸಲು ಶುರು ಮಾಡಿದ್ದಾರೆ. ಮತ್ತು ಅದರ ಫಲಿತಾಂಶ ಕೂಡಾ ಉತ್ತಮವಾಗಿದೆ. ಇನ್ನು ಡ್ರೈಫ್ರೂಟ್ಸ್‌ಗಳ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತದೆ. ಆರೋಗ್ಯಕ್ಕೂ ಒಳ್ಳೆದು, ಸೌಂದರ್ಯ ವರ್ಧನೆಗೂ ಉತ್ತಮ. ಡ್ರೈಫ್ರೂಟ್ಸ್‌ನ್ನು ಮಿತವಾಗಿ ತಿನ್ನುವುದು ಉತ್ತಮ. ವರ್ಷದ 365 ದಿನ ಕೂಡ ಡ್ರೈಫ್ರೂಟ್ಸ್ ಸೇವನೆ ಒಳ್ಳೆಯದು.

- Advertisement -

Latest Posts

Don't Miss