Friday, August 29, 2025

Latest Posts

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿ ಸೇವಿಸುವುದರಿಂದ ಆರೋಗ್ಯಕ್ಕಾಗಲಿದೆ ಹಲವು ಲಾಭಗಳು

- Advertisement -

Health Tips: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಾಗುತ್ತದೆ ಅಂತಾ ನಿಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಅದನ್ನು ಕೆಲವೇ ಕೆಲವರು ಮಾತ್ರ, ಫಾಲೋ ಮಾಡೋದು. ಆದ್ರೆ ನಾವಿಂದು ಬಾದಾಮಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಹೇಳಿದ್ದನ್ನು ನೀವು ಓದಿದ್ರೆ, ನೀವೂ ನಾಳೆಯಿಂದ ಬಾದಾಮಿ ಸೇವಿಸಲು ಶುರು ಮಾಡುತ್ತೀರಿ. ಹಾಗಾದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿ ಸೇವನೆಯಿಂದಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿ ಸೇವಿಸುವುದರಿಂದ, ನೆನಪಿನ ಶಕ್ತಿ ಉತ್ತಮವಾಗುತ್ತದೆ. ಬುದ್ದಿಮತ್ತೆ ಹೆಚ್ಚಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇದನ್ನು ಕೊಡಲಾಗುತ್ತದೆ. ಹಾಗಾಗಿಯೇ ಗರ್ಭಿಣಿಯರಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿ ಸೇವಿಸಲು ಹೇಳಲಾಗುತ್ತದೆ. ಇದರ ಸೇವನೆಯಿಂದ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಮಗು ಚುರುಕಾಗುತ್ತದೆ. ಅಲ್ಲದೇ, ತಾಯಿಯ ಸ್ಕಿನ್ ಕೂಡ ಉತ್ತಮವಾಗಿರುತ್ತದೆ.

ಇನ್ನು ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿಲ್ಲವೆಂದಲ್ಲಿ, ಪ್ರತಿದಿನ 4 ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು, ಸೇವಿಸಿ. ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಮಲಬದ್ಧತೆ ಸಮಸ್ಯೆಯನ್ನೂ ಇದು ತೊಡೆದು ಹಾಕುತ್ತದೆ. ಇದರಲ್ಲಿರುವ ನಾರಿನಂಶ ನಾವು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣಿಸುತ್ತದೆ.

ಬಿಪಿ ಇದ್ದವರು ಪ್ರತಿದಿನ ನೆನೆಸಿಟ್ಟ ಬಾದಾಮಿ ಸೇವಿಸುವುದು ಉತ್ತಮ. ಇದರಿಂದ ಬಿಪಿ ಕಂಟ್ರೋಲಿನಲ್ಲಿ ಇರುತ್ತದೆ. ನೆನೆಸಿಟ್ಟ ಬಾದಾಮಿಯ ಸೇವನೆ ಮಾಡುವುದರಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ. ಆದರೆ, ನೆನಪಿಡಿ, ನೀವು ನೆನೆಸಿಟ್ಟ ಬಾದಾಮಿಯನ್ನು ಮಾತ್ರ ಸೇವಿಸಬೇಕು. ನೆನೆಸದೇ ಬಾದಾಮಿ ತಿನ್ನುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇನ್ನು ನೆನೆಸಿಟ್ಟ ಬಾದಾಮಿಯನ್ನು ಸಿಪ್ಪೆ ತೆಗೆದು ಬಳಸಬೇಕು.

- Advertisement -

Latest Posts

Don't Miss