Health Tips: ಕೆಲವೊಂದು ಆಹಾರಗಳು ನಾಲಿಗೆಗೆ ರುಚಿಸುತ್ತದೆ ಆದರೆ, ಆರೋಗ್ಯ ಹಾಳು ಮಾಡುತ್ತದೆ. ಮತ್ತೆ ಕೆಲವು ಆಹಾರಗಳು ನಾಲಿಗೆಗೆ ಒಗರು, ಕಹಿ, ಖಾರವಿದ್ದರೂ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಇಲ್ಲಿ ಎರಡನೇಯ ಆಯ್ಕೆ ಒಪ್ಪಿಕೊಳ್ಳುವವರು ಬಹಳ ಕಡಿಮೆ ಜನ. ಎಲ್ಲರಿಗೂ ನಾಲಿಗೆಗೆ ಹಿಡಿಸುವಂಥ ರುಚಿ ರುಚಿಯಾಗಿರುವ ತಿಂಡಿಯೇ ಬೇಕು. ಆದರೆ ಇಂಥ ರುಚಿಕರ ಆಹಾರಗಳು ನಮ್ಮ ಹೊಟ್ಟೆಯ ಆರೋಗ್ಯವನ್ನೇ ಹಾಳು ಮಾಡುತ್ತದೆ. ಯಾವುದು ಅಂಥ ಆಹಾರ ಅಂತಾ ತಿಳಿಯೋಣ ಬನ್ನಿ..
ಮೈದಾ ಬಳಸಿ ಮಾಡಿದ ಆಹಾರ: ಮೈದಾ ಅಂದ್ರೆ ಅಂಟು ಅಂಟಾಗಿರುವ ಪದಾರ್ಥ. ಹಾಗಾಗಿ ಮೈದಾ ತಯಾರಿಸಿ, ಮಾಡಿದ ಪದಾರ್ಥ ತಣ್ಣಗಾದ ಬಳಿಕ ರಬ್ಬರ್‌ನಂತಾಗುತ್ತದೆ. ಇದರ ಸೇವನೆಯಿಂದ ಹೊಟ್ಟೆಯಲ್ಲಿ ಆ ಅಂಟಿನ ಪದಾರ್ಥ ಹೋಗಿ ಕುಳಿತು, ನಮ್ಮ ಜೀರ್ಣಕ್ರಿಯೆಗೆ ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಮೈದಾ ಬಳಸಿ ಮಾಡಿದ ಆಹಾರ ತಿನ್ನಬಾರದು ಅಂತಾ ಹೇಳುವುದು.
ಹಲವು ದಿನಗಳ ಕಾಲ ಪ್ರಿಸರ್ವೇಟಿವ್ಸ್ ಬಳಸಿ, ಪ್ಯಾಕ್ ಮಾಡಿದ ಆಹಾರ: ಪ್ಯಾಕ್ ಮಾಡಿದ ಜ್ಯೂಸ್, ತಿಂಡಿ ಎಲ್ಲದರಲ್ಲೂ ಕೂಡ ಕೆಡದಂತೆ ಪ್ರಿಸರ್ವೇಟಿವ್ಸ್ ಬಳಸಿರುತ್ತಾರೆ. ಹಾಗಾಗಿ ಆಹಾರ ಫ್ರೆಶ್ ಆಗಿರುತ್ತದೆ. ಇಂಥ ಕೆಮಿಕಲ್ ಸೇವನೆಯಿಂದಲೇ, ನಮ್ಮ ಹೊಟ್ಟೆಯ ಆರೋಗ್ಯ ಹಾಳಾಗುತ್ತದೆ.
ಸಕ್ಕರೆ, ಬೆಲ್ಲ ಬಳಸದೇ ಮಾಡಿದ ಸಿಹಿ ಪದಾರ್ಥ: ಸಿಹಿ ಪದಾರ್ಥ ಮಾಡುವಾಗ ಸಕ್ಕರೆ ಅಥವಾ ಬೆಲ್ಲ ಬಳಸಿ ಮಾಡಬೇಕು. ಆದರೆ ಇವೆರಡನ್ನೂ ಬಳಸದೇ, ಅಥವಾ ಹೆಚ್ಚು ಸಕ್ಕರೆ ಬಳಸಿ, ಸಿಹಿ ಪದಾರ್ಥಗಳನ್ನು ತಯಾರಿಸಿದ ತಿಂಡಿ ಸೇವನೆ ಮಾಡಿದರೆ, ಅದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಕ್ಯಾನ್ಸರ್‌ನಂಥ ಮಾರಕ ಖಾಯಿಲೆಗಳು ಬರುತ್ತದೆ.
ಕರಿದ ತಿಂಡಿ: ಮನೆಯಲ್ಲಿ ಶುದ್ಧ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಲಿಮಿಟ್‌ನಲ್ಲಿ ತಿನ್ನಬಹುದು. ಆದರೆ ಪ್ರತಿದಿನ, ಕರಿದ ತಿಂಡಿಗಳನ್ನು ತಿಂದರೆ, ಅದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಅಲ್ಲದೇ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಂಟಾಗಿ, ಹೊಸ ಹೊಸ ರೋಗಗಳು ಉದ್ಭವಿಸುವಂತೆ ಮಾಡುತ್ತದೆ.
ಟೀ, ಕಾಫಿ: ಟೀ, ಕಾಫಿ ಸೇವನೆ ಮಿತವಾಗಿರಬೇಕು. ದಿನಕ್ಕೆ ಒಂದರಿಂದ ಎರಡು ಬಾರಿ, ಅದೂ ತುಂಬಿದ ಹೊಟ್ಟೆಯಲ್ಲಿ. ಟೀ, ಕಾಫಿ ತ್ಯಜಿಸಿದರೆ, ಅದು ಇನ್ನೂ ಒಳ್ಳೆಯದು. ಏಕೆಂದರೆ, ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಸೇವನೆ ಮಾಡುವುದು ಮತ್ತು ಅಗತ್ಯಕ್ಕಿಂಚ ಹೆಚ್ಚು ಟೀ ಕಾಫಿ ಸೇವನೆ ಮಾಡಿದರೆ, ಅದರಿಂದ ನಿಮ್ಮ ಹೊಟ್ಟೆಯ ಆರೋಗ್ಯ ಹಾಳಾಗುತ್ತದೆ. ಅಲ್ಲದೇ. ಬೇರೆ ಬೇರೆ ರೋಗಗಳಿಗೆ ಆಮಂತ್ರಣ ಕೊಟ್ಟ ಹಾಗಾಗುತ್ತದೆ.
ಇನ್ನು ಮಾಂಸಾಹಾರ ಸೇವಿಸುವವರು ಕೆಂಪು ಮಾಂಸವನ್ನು ಹೆಚ್ಚು ಬಳಸುವಂತಿಲ್ಲ. ಇದು ಕೂಡ ನಿಮ್ಮ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುತ್ತದೆ.