Tuesday, November 18, 2025

Latest Posts

Health Tips: ಈ ರೀತಿಯ ಆಹಾರ ಸೇವನೆಯಿಂದ ಕ್ಯಾನ್ಸರ್ ಬರಬಹುದು..!

- Advertisement -

Health Tips: ಕ್ಯಾನ್ಸರ್ ಎನ್ನುವ ಮಹಾಮಾರಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲವು ಆಹಾರ ಸೇವನೆಯಿಂದ, ಧೂಮಪಾನ ಸೇವನೆಯಿಂದ, ನಾವು ಬಳಸುವ ಕೆಲ ವಸ್ತುಗಳಿಂದಲೂ ನಮಗೆ ಗೊತ್ತಿಲ್ಲದೇ, ಕ್ಯಾನ್ಸರ್ ಕಣ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತಿದೆ. ಈ ಬಗ್ಗೆ ವೈದ್ಯರಾದ ಡಾ.ಪವನ್ ಕುಮಾರ್ ಮಾತನಾಡಿದ್ದು, ಯಾವ ರೀತಿಯ ಆಹಾರ ಸೇವನೆಯಿಂದ ಕ್ಯಾನ್ಸರ್ ಸಂಭವಿಸಬಹುದು ಎಂದು ವಿವರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸ್ಮೋಕಿ ಫುಡ್ ಹೆಚ್ಚಾಗುತ್ತಿದೆ. ಸ್ಮೋಕಿ ಫುಡ್ ನಲ್ಲಿ ರುಚಿ ಹೆಚ್ಚಾಗಿರುತ್ತದೆ ಅಂತಾ, ಜನ ಹೆಚ್ಚಾಗಿ ಆ ಆಹಾರವನ್ನೇ ಹೆಚ್ಚಾಗಿ ಆರ್ಡರ್ ಮಾಡುತ್ತಿದ್ದಾರೆ. ಆದರೆ ಈ ಸ್ಮೋಕಿ ಫುಡ್ ಸೇವನೆಯಿಂದಲೇ ಜನರಲ್ಲಿ ರೋಗ ರುಜಿನಗಳು ಹೆಚ್ಚಾಗುತ್ತಿದೆ. ಕ್ಯಾನ್ಸರ್ ಬರಲು ಕೂಡ ಇದೇ ಕಾರಣವಾಗಿದೆ.

ಕಟ್ಟಿಗೆ ಬಳಸಿ ಬಿಸಿ ಮಾಡುವ ಆಹಾರ ಬೇರೆ. ಚಾರ್‌ಕೋಲ್ ಬಳಸಿ, ಸ್ಮೋಕ್ ಬರಿಸುವ ಆಹಾರ ಬೇರೆ. ಕಟ್ಟಿಗೆ ಬಳಸಿ ತಯಾರು ಮಾಡುವ ಆಹಾರ ಆರೋಗ್ಯಕರವಾಗಿರುತ್ತದೆ. ಅದೇ ಚಾರ್‌ಕೋಲ್ ಬಳಸಿ ತಯಾರಿಸುವ ಆಹಾರ ಅಷ್ಟು ಆರೋಗ್ಯಕರವಾಗಿರುವುದಿಲ್ಲ. ಇಂಥ ಆಹಾರಗಳೇ ಹೊಟೇಲ್‌ನಲ್ಲಿ ಟ್ರೆಂಡ್ ಆಗಿರುವ ಕಾರಣಕ್ಕೆ, ಈ ಆಹಾರ ಸೇವನೆ ಹೆಚ್ಚಾಗಿದೆ. ಆದರೆ ಇದು ಕ್ಯಾನ್ಸರ್ ಬರಲು ಇರುವ ಕಾರಣಗಳಲ್ಲಿ ಒಂದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss