ತುಲಾ ರಾಶಿಗೆ ಸೂರ್ಯನ ಪ್ರವೇಶ: ಯಾವ ರಾಶಿಯ ಮೇಲೆ ಯಾವ ಪ್ರಭಾವ..?

ನವರಾತ್ರಿಗೆ ಸೂರ್ಯ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶಿಸಿದ್ದಾನೆ. ನವೆಂಬರ್ 16ರ ತನಕ ಸೂರ್ಯ ತುಲಾ ರಾಶಿಯಲ್ಲಿರಲಿದ್ದು, ನಂತರ ಮುಂದಿನ ರಾಶಿಗೆ ಸ್ಥಾನಪಲ್ಲಟ ಮಾಡಲಿದ್ದಾನೆ. ಇದರಿಂದ ಉಳಿದ ಎಲ್ಲ ರಾಶಿಗಳ ಮೇಲೆ ಯಾವ ರೀತಿ ಪರಿಣಾಮವಾಗಲಿದೆ ಎನ್ನುವ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮೇಷ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಮೇಷ ರಾಶಿಯವರಿಗೆ ಸಣ್ಣ ತೊಂದರೆಯಾಗಲಿದೆ. ಸಂಬಂಧದಲ್ಲಿ ಏರುಪೇರಾಗಲಿದೆ. ಬಾಳ ಸಂಗಾತಿ ಜೊತೆ ತಾಳ್ಮೆಯಿಂದ ನಡೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲು ಕೂಡ ಏರುಪೇರಾಗಲಿದೆ. ಆದ್ದರಿಂದ ಮಾತನಾಡುವ ಮುನ್ನ ಯೋಚಿಸಿ ಮಾತನಾಡಿ, ಸಿಟ್ಟು ಕಡಿಮೆ ಮಾಡಿಕೊಂಡರೆ ಉತ್ತಮ. ಪ್ರಯತ್ನ ಪಟ್ಟಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಲ್ಲರು.

ವೃಷಭ : ವೃಷಭ ರಾಶಿಯವರಿಗೆ ಇದು ಉತ್ತಮ ಕಾಲ. ನಿವಂದುಕೊಂಡು ಕೆಲಸ ಪೂರ್ಣಗೊಳಿಸಲು ಉತ್ತಮ ಕಾಲ. ಶತ್ರುಗಳು, ಹಿತ ಶತ್ರುಗಳ ಕಾಟ ಇರುವ ಸಾಧ್ಯತೆ ಇದೆ. ಎಚ್ಚರ. ಆರೋಗ್ಯ ಸಮಸ್ಯೆ ಇದ್ದಲ್ಲಿ ಪರಿಹಾರ ಸಿಗಲಿದೆ. ನವೆಂಬರ್ 16ರ ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಿ.

ಮಿಥುನ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಈ ರಾಶಿಯವರಿಗೆ ಭೂಮಿಯ ವ್ಯವಹಾರದಲ್ಲಿ ಸಮಸ್ಯೆ ಸಂಭವಿಸಲಿದೆ. ಮಾನಸಿಕ ಒತ್ತಡ ಹೆಚ್ಚಾಗಲಿರುವ ಕಾರಣ, ಯೋಗ ಧ್ಯಾನದ ಕಡೆ ಗಮನ ಕೊಡುವುದು ಉತ್ತಮ. ನಿಮ್ಮ ಹವ್ಯಾಸವನ್ನ ವೃತ್ತಿಗೆ ಬದಲಾಯಿಸಿಕೊಳ್ಳಬಹುದು. ಸಂಬಂಧದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ. ಉದ್ಯೋಗಾಭಿವೃದ್ಧಿ, ವ್ಯವಹಾರಾಭಿವೃದ್ಧಿಗೆ ಇದು ಸಕಾಲ.

ಕರ್ಕಾಟಕ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ನಿದ್ರಾಹೀನತೆ ಸಮಸ್ಯೆ, ಮಾನಸಿಕ ಒತ್ತಡ ಉಂಟಾಗುತ್ತದೆ. ಪೋಷಕರ ಆರೋಗ್ಯದ ಬಗ್ಗೆಯೂ ನೀವು ಗಮನ ಕೊಡಬೇಕು. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಯಾರಾದರೂ ನಿಮ್ಮ ಬಳಿ ಸಾಲ ಕೇಳಿದರೂ ಕೇಳಬಹುದು. ಸಾಲ ಕೊಡುವುದರಲ್ಲಿ ತಪ್ಪಿಲ್ಲ ಆದ್ರೆ, ಇದರಿಂದ ನೀವು ಪೇಚಿಗೆ ಸಿಲುಕದಂತೆ ನೋಡಿಕೊಳ್ಳಿ. ವಾಹನ ಸಂಚಾರ ಮಾಡುವಾಗ ಜಾಗೃತೆ ಇರಲಿ.

ಸಿಂಹ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಸಿಂಹ ರಾಶಿಯವರಿಗೆ ಲಾಭವೇ ಹೆಚ್ಚು ಎನ್ನಬಹುದು. ಸಂಬಂಧಗಳು ಉತ್ತಮಗೊಳ್ಳುತ್ತದೆ. ಪ್ರಯತ್ನ ಪಟ್ಟಲ್ಲಿ, ನೀವು ಮಾಡುವ ಕೆಲಸದಲ್ಲಿ ಯಶಸ್ಸು ಕಾಣಬಲ್ಲಿರಿ. ವೃತ್ತಿ ರಂಗದಲ್ಲಿ ಉತ್ತಮ ಸ್ಥಾನ ಗಳಿಸುತ್ತೀರಿ.

ಕನ್ಯಾ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ವ್ಯಾಪಾರ ವ್ಯವಹಾರಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಬಂಡವಾಳ ಹಾಕುವ ಮುನ್ನ 100 ಬಾರಿ ಯೋಚಿಸಿ. ಮಾನಸಿಕ ಒತ್ತಡ ಹೆಚ್ಚಾಗಬಹುದು, ಆರೋಗ್ಯದ ಬಗ್ಗೆ ಗಮನವಿರಲಿ.

ತುಲಾ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ತುಲಾ ರಾಶಿಗೆ ಲಾಭವೂ ಅಲ್ಲ, ನಷ್ಟವೂ ಇಲ್ಲ. ಆದರೆ ಕೌಟುಂಬಿಕ ವಿಷಯದಲ್ಲಿ ಮಾತ್ರ ಸ್ವಲ್ಪ ಕಾಳಜಿ ಮಾಡಬೇಕಾದಿತು. ಪರಿಶ್ರಮ ಪಟ್ಟರೆ, ನೀವಂದುಕೊಂಡ ಕೆಲಸದಲ್ಲಿ ಉನ್ನತಿ ಕಾಣುವಿರಿ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಈ ರಾಶಿಯವರಿಗೆ ಲಾಭವಾಗುತ್ತದೆ. ವಿದೇಶ ಪ್ರಯಾಣದ ಆಸೆ ನೆರವೇರುತ್ತದೆ. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ವೃತ್ತಿ ಜೀವನ ಕೂಡ ಒಳ್ಳೆಯದಾಗಿರುತ್ತದೆ.

ಧನು : ಸೂರ್ಯನ ತುಲಾ ರಾಶಿ ಪ್ರವೇಶದಿಂದ ವೃತ್ತಿ ಜೀವನದಲ್ಲಿ ಏಳಿಯಾಗುತ್ತದೆ. ಸಮಾಜದಲ್ಲಿ ಗೌರವ ಸಿಗುತ್ತದೆ. ಖರ್ಚು ವೆಚ್ಚಗಳು ಕೂಡ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಮಕರ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ನಿರುದ್ಯೋಗಿಗಳಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ಬಾಳ ಸಂಗಾತಿಯ ಜೊತೆ ಉತ್ತಮ ಬಾಂಧವ್ಯ ಹೊಂದುವಿರಿ. ಅವಿವಾಹಿತರಿಗೆ ಪ್ರೇಮಿಗಳು ಸಿಗುವ ಸಾಧ್ಯತೆ ಇದೆ.

ಕುಂಭ : ಸೂರ್ಯನ ತುಲಾ ರಾಶಿ ಪ್ರವೇಶದಿಂದ ಹಣಕಾಸಿನ ಸಮಸ್ಯೆ, ಸತಿ- ಪತಿ ಕಲಹ ಸಂಭವಿಸುತ್ತದೆ. ಆದರೂ ಜೀವನದಲ್ಲಿ ಉತ್ತಮ ಬೆಳವಣಿಗೆ ಇರುತ್ತದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಉತ್ತಮ ಕಾಲ.

ಮೀನ : ಈ ರಾಶಿಯವರು ಶತ್ರುಗಳಿಂದ ದೂರವಿರಬೇಕಾಗುತ್ತದೆ. ವೃತ್ತಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸಂಬಂಧದಲ್ಲಿ ಏರುಪೇರಾಗದಂತೆ ನಿಗಾ ವಹಿಸಿ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author