ಮೈಸೂರು: 14 ಬಾರಿ ದಸರಾ ಅಂಬಾರಿ ಹೊತ್ತಿದ್ದ ಬಲರಾಮ ಅಸ್ವಸ್ಥ ನಾಗಿದ್ದಾನೆ. ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿದ್ದ ಬಲರಾಮ ಎಂಬ ಆನೆ ಅಸ್ವಸ್ಥಗೊಂಡಿದೆ. ನಾಡ ಅಧಿದೇವತೆಯನ್ನ ಚಿನ್ನದ ಅಂಬಾರಿಯಲ್ಲಿ ಹೊತ್ತಿ ತಿರುಗಿದ್ದ ಬಲರಾಮ ಅನಾರೋಗ್ಯಕ್ಕೆ ಈಡಾಗಿದೆ.
67 ವರ್ಷ ವಯಸ್ಸಿನ ಬಲರಾಮನಿಗೆ ವಯೋಸಹಜ ಅಸ್ವಸ್ಥತೆ ಕಾಡುತ್ತಿದೆ.. ಬಲರಾಮನಿಗೆ ಬಾಯಿ ಹುಣ್ಣಗಿದ್ದು, ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ನೀರು ಸಹ ಕುಡಿಯಲು ಸಾಧ್ಯವಾಗುತ್ತಿಲ್ಲ.
ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್ ನ ಭಿಮನಕಟ್ಟೆ ಆನೆ ಶಿಬಿರದಲ್ಲಿ ಇರುವ ಬಲರಾಮನಿಗೆ ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ .. ಇದು ಟಿಬಿ ಖಾಯಿಲೆ ಇರಬಹುದೆಂದು ವೈದ್ಯರು ಅಂದಾಜಿಸಿದ್ದಾರೆ. ಇದಕ್ಕೆ ಬೇಕಾದ ಪರೀಕ್ಷೆ ನಡೆಸಿದ್ದು.. ವರದಿ ಬಂದ ಬಳಿಕ ಯಾವ ಆರೋಗ್ಯ ಸಮಸ್ಯೆ ಎಂದು ಗೊತ್ತಾಗಲಿದೆ.
ಇನ್ನು ಆನೆಯ ಚಿಕಿತ್ಸೆಗಾಗಿ ರಾಜ ಮನೆತನದಿಂದ ವೆಚ್ಚ ಮಾಡಿ, ಬಲರಾಮನಿಗೆ ಎಂಡೊಸ್ಕೋಪಿ ಚಿಕಿತ್ಸೆ ಕೂಡ ಮಾಡಲಾಗಿದೆ. ಇದರ ವರದಿ ಬಂದ ಬಳಿಕ, ಯಾವ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿದು, ಚಿಕಿತ್ಸೆ ಶುರು ಮಾಡಲಾಗುತ್ತೆ.
ಸಧ್ಯ ಬಲರಾಮನಿಗೆ, ರಾಗಿ ಗಂಜಿ ಮತ್ತು ಬಾಳೆಹಣ್ಣು ತಿನ್ನಲು ಕೊಡಲಾಗುತ್ತಿದೆ. ಬಲರಾಮ ಆದಷ್ಟು ಬೇಗ ಹುಷಾರಾಗಲಿ ಎಂದು ಹಲವರು ಹಾರೈಸಿದ್ದಾರೆ..
ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..