Karnataka TV Money: ನಾವು ದುಡ್ಡನ್ನು ಹೇಗೆ ಸೇವ್ ಮಾಡಬೇಕು..? ಯಾಾವ ನಿಯಮ ಫಾಲೋ ಮಾಡಿದ್ರೆ ದುಡ್ಡು ಉಳಿಸಬಹುದು ಅಂತಾ ನಿಮಗೆ ವಿವರಿಸಿದ್ದೆವು. ಆದರೆ ನಿಮ್ಮ ಬಳಿ ಸೇವಿಂಗ್ಸ್ ಇದೆ, ದುಡ್ಡನ್ನು ಇನ್ವೆಸ್ಟ್ ಮಾಡಿದ್ದೀರಿ. ಇನ್ಶೂರೆನ್ಸ್ ತೆಗೆದುಕಂಡಿದ್ದೀರಿ. ಆದರೂ ನನ್ನ ಬಳಿ ಖರ್ಚು ಮಾಡಲು ದುಡ್ಡಿದೆ ಅಂದ್ರೆ, ದುಡ್ಡು ಖರ್ಚು ಮಾಡಲೇಬೇಕು ಅಂದ್ರೆ ಯಾವ ರೀತಿ ಖರ್ಚು ಮಾಡಬೇಕು ಅಂತಲೂ ನಾವು ಹೇಳಲಿದ್ದೇವೆ.
ಬಟ್ಟೆ: ನೀವು ದುಡ್ಡು ಖರ್ಚು ಮಾಡಬೇಕು ಅಂದ್ರೆ ಬಟ್ಟೆ ಖರೀದಿಸಲು ದುಡ್ಡು ಖರ್ಚು ಮಾಡಿ. ಕಾಟನ್, ಲೆನಿನ್, ಸಿಲ್ಕ್ ಇಂಥ ಉಡುಪು ಖರೀದಿಸಿ. ಏಕೆಂದರೆ ಇದೆಲ್ಲ ಕಡಿಮೆ ರೇಟಿಗೆ ನಿಮಗೆ ಸಿಗೋದಿಲ್ಲ. ಯಾಕಂದ್ರೆ ಇದೆಲ್ಲ ಉತ್ತಮ ಕ್ವಾಲಿಟಿಯ ಬಟ್ಟೆಯಾಗಿರುತ್ತದೆ. ಇಂಥ ಬಟ್ಟೆಗಳನ್ನು ನೀವು ಧರಿಸಿದರೆ, ಅದು ತುಂಬ ದಿನ ಬಾಳಿಕೆ ಬರುತ್ತದೆ. ಮತ್ತು ನೀವು Posh ಆಗಿ ಕಾಣುತ್ತೀರಿ.
ಊಟ: ನಾವು ಉತ್ತಮ ಕ್ವಾಲಿಟಿಯ ಆಹಾರ ಸೇವನೆ ಮಾಡಬೇಕು. ಅಂದ್ರೆ ರೆಸ್ಟೋರೆಂಟ್ ಊಟವಲ್ಲ. ಬದಲಾಗಿ ಮನೆಯಲ್ಲೇ ಆರೋಗ್ಯಕರ ಆಹಾರ ಮಾಡಿ ಸೇವಿಸಿ. ಉತ್ತಮ ಕ್ವಾಲಿಟಿಯ ಹಣ್ಣು, ತರಕಾರಿ, ಡ್ರೈಫ್ರೂಟ್ಸ್, ಧವಸ ಧಾನ್ಯ ಹೀಗೆ ಇದಕ್ಕೆಲ್ಲ ದುಡ್ಡು ಖರ್ಚು ಮಾಡಿ. ಆಗ ನಿಮ್ಮ ಆರೋಗ್ಯಕ್ಕಾಗಿ ನೀವು ಲಕ್ಷ ಲಕ್ಷ ಹಣ ಖರ್ಚು ಮಾಡುವ ಅವಶ್ಯಕತೆ ಬರುವುದಿಲ್ಲ. ವ್ಯಾಯಾಮ ಮಾಡಿ, ಯೋಗ ಮಾಡಿ. ಇದರಿಂದಲೇ ನಿಮ್ಮ ಮೈಕಟ್ಟು ಮತ್ತು ಆರೋಗ್ಯ ಉತ್ತಮವಾಗಿರುತ್ತದೆ.
ಶೂಸ್: ನೀವು ಉತ್ತಮ ಕ್ವಾಲಿಟಿಯ ಶೂಸ್, ಚಪ್ಪಲಿ ತೆಗೆದುಕ“ಳ್ಳಬಹುದು. ಎರಡು ಜೋಡಿ ಅತ್ಯುತ್ತಮ ಕ್ವಾಲಿಟಿಯ ಶೂಸ್, ಚಪ್ಪಲಿ ಇದ್ದರೆ ಉತ್ತಮ. ಇಂಥ ಶೂಸ್, ಚಪ್ಪಲಿ ಖರೀದಿಸುವುದರಿಂದ ಇದು ಹೆಚ್ಚು ವರ್ಷ ಬಾಳಿಕೆ ಬರುತ್ತದೆ.
ಪ್ರವಾಸ: ನೀವು ಹಲವು ವಿಷಯಗಳನ್ನು ತೆಗೆದುಕ“ಳ್ಳಲು, ಚಿಲ್ ಮಾಡಲು ಖಂಡಿತ ಪ್ರವಾಸಕ್ಕೆ ಹೋಗಬೇಕು., ಪ್ರವಾಾಸಕ್ಕೆ ಹೋಗುವುದರಿಂದ ಮನಸ್ಸು ತಿಳಿಗ“ಳ್ಳುತ್ತದೆ. ಅಂಥ ಚಿಕ್ಕ ಚಿಕ್ಕ ಬ್ರೇಕ್ ತೆಗೆದುಕ“ಳ್ಳಿ. ಹಾಗಂತ ಪ್ರವಾಸ ಅಂದ್ರೆ, ದುಬೈ, ಥೈಲ್ಯಾಂಡ್, ಕುಲು-ಮನಾಲಿಗೆ ಹೋಗಿ ಅಂತಾ ಹೇಳ್ತಿಲ್ಲ. ಬದಲಾಗಿ ನೀವಿರುವ ಊರಿನಲ್ಲೇ, ಅಥವಾ ಹತ್ತಿರದಲ್ಲೇ ನಿಸರ್ಗ ಸವಿಯಬಹುದಾದ ಜಾಗಗಳಿಗೆ ಹೋಗಿ. ಕುಟುಂಬಸ್ಥರಜತೆ ಸಮಯ ಕಳೆಯಿರಿ.