Hubli News: ಹುಬ್ಬಳ್ಳಿ: ಪಾಲಕರೇ ಎಚ್ಚರ..! ಎಚ್ಚರ..! ಎಚ್ಚರ..! ನಿಮ್ಮ ಮಕ್ಕಳಿಗಿರುವ ಮೊಬೈಲ್ ಗೀಳು ನಿಜಕ್ಕೂ ನಿಮ್ಮ ಮಕ್ಕಳನ್ನು ಬಹುದೊಡ್ಡ ಆತಂಕಕ್ಕೆ ದೂಡಲಿದೆ. ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗಲು ಅವರ ಬಳಸುತ್ತಿರುವ ಮೊಬೈಲ್, ಜೀವನ ಶೈಲಿ, ಆಹಾರ ಅಭ್ಯಾಸಗಳೇ ಪ್ರಮುಖ ಕಾರಣ ಎನ್ನುವ ಭಯಾನಕ ಅಂಶವೊಂದು ಬೆಳಕಿಗೆ ಬಂದಿದೆ. ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಮೊಬೈಲ್ ಗೀಳು ಬಿಡಿಸಿದಿದ್ದರೇ ಸಮಸ್ಯೆ ಮಾತ್ರ ಕಟ್ಟಿಟ್ಟ ಬುತ್ತಿ.
ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಮಾಣಕ್ಕೆ ಮೊಬೈಲ್ ಬಳಕೆಯೇ ಬಹುದೊಡ್ಡ ಕಾರಣವಾಗಿದೆ. ಹೌದು..ಈ ಬಗ್ಗೆ ದೇಶದಲ್ಲಿಯೇ ಮೊದಲ ಬಾರಿಗೆ ಕಿಮ್ಸ್ ಸಂಶೋಧಾನ ತಂಡದಿಂದ ಅಧ್ಯಯನ ನಡೆಸಿದ್ದು, ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಮಕ್ಕಳು, ಯುವಕ, ಯುವತಿಯರು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದು, ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ. ಈ ಮೊದಲು ನಲವತ್ತರ ನಂತರದವರಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಹೃದಯಾಘಾತ ಇದೀಗ ಮಕ್ಕಳಲ್ಲಿ ಕೂಡಾ ಉಂಟಾಗುತ್ತಿರುವದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ನೋಡಲಿಕ್ಕೆ ಸಾಮಾನ್ಯವಾಗಿ ಕಂಡರು ಕೂಡಾ ದಿಡೀರನೆ ಹೃದಯಾಘಾತಕ್ಕೊಳಗಾಗಿ ಮೃತಪಡುತ್ತಿದ್ದಾರೆ. ಆದ್ರೆ ಮಕ್ಕಳಲ್ಲಿ ಯಾಕೆ ಹೃದಯಾಘಾತವಾಗುತ್ತಿದೆ, ಅದಕ್ಕೆ ಪ್ರಮುಖ ಕಾರಣವೇನು ಅನ್ನೋ ಬಗ್ಗೆ ಹೆಚ್ಚಿನ ಅಧ್ಯಯನಗಳಾಗಿಲ್ಲಾ. ಆದ್ರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ, ಹುಬ್ಬಳ್ಳಿಯ ಪ್ರತಿಷ್ಟಿತ ಕಿಮ್ಸ್ ವೈದ್ಯಕೀಯ ಕಾಲೇಜಿನ, ಬಹುಶಿಸ್ತೀಯ ಸಂಶೋಧನಾ ತಂಡ, ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು ಅನ್ನೋದರ ಬಗ್ಗೆ ದೇಶದಲ್ಲಿಯೇ ಮೊದಲ ಬಾರಿಗೆ ಪೈಲಟ್ ಪ್ರೊಜೆಕ್ಟ್ ಆಗಿ, ಸಂಶೋಧನೆಯನ್ನು ನಡೆಸಿದೆ. ಐಸಿಎಂಆರ್ ಕೂಡಾ ಈ ರೀತಿಯ ಉತ್ತರಗಳನ್ನು ಹುಡುಕಲು ಅನೇಕ ರೀತಿಯ ಸಂಶೋಧನಕ್ಕೆ ಒತ್ತು ನೀಡುತ್ತದೆ. ಹೀಗಾಗಿ ಕಿಮ್ಸ್ ನ ಬಹುಶಿಸ್ತೀಯ ಸಂಶೋಧನಾ ಘಟಕ ತಂಡದಿಂದ ಮಹತ್ವದ ಅಂಶ ಬೆಳಕಿಗೆ ಬಂದಿದೆ.
ಇನ್ನೂ ಹೆಚ್ಚಿನ ಸಮಯ ಮೊಬೈಲ್ ನೋಡುವ ಮಕ್ಕಳ ದೈಹಿಕ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಿತ್ತು. ನಂತರ ಅವರ ದೈಹಿಕ ಪರೀಕ್ಷೆ ಮಾಡಲಾಗಿತ್ತು. ಇನ್ನು ಲಿಪಿಡ್ ಪ್ರೊಪೈಲ್, ಲೈಪೋ ಪ್ರೋಟಿನ್ ಎ, ಹೋಮೋಸಿಸ್ಟಿನ್, ಹೈಸೆನ್ಸಟಿವಿಟಿ ಸಿ ರ್ಯಾಕ್ಟಿವ್ ಪ್ರೋಟಿನ್ ರಕ್ತ ಪರೀಕ್ಷೆ, ಜೆನಟಿಕ್ ಪರೀಕ್ಷೆ ಸೇರಿದಂತೆ ಅನೇಕ ರೀತಿಯ ರಕ್ತ ಪರೀಕ್ಷೆಗಳನ್ನು ನಡೆಸಿತ್ತು. ಪರೀಕ್ಷೆಯ ನಂತರ ಬಂದ ವರದಿ ನೋಡಿ, ತಂಡವೇ ಶಾಕ್ ಆಗಿದೆ. ಯಾಕಂದ್ರೆ ಆಯ್ಕೆ ಮಾಡಿಕೊಂಡ ಮೂವತ್ತು ಮಕ್ಕಳ ಪೈಕಿ, ಬರೋಬ್ಬರಿ 26 ಮಕ್ಕಳು ಹೃದಯಾಘಾತದ ರಿಸ್ಕ್ ಹೊಂದಿರೋದು ಗೊತ್ತಾಗಿದೆ. ಇದಕ್ಕೆ ಮೊಬೈಲ್ ಬಳಕೆಯೇ ಕಾರಣವಾಗಿದೆ.
ಒಟ್ಟಿನಲ್ಲಿ ಮಕ್ಕಳಲ್ಲಿನ ಮೊಬೈಲ್ ಗೀಳನ್ನು ಪಾಲಕರು ತಪ್ಪಿಸದೇ ಇದ್ದರೇ ನಿಜಕ್ಕೂ ಬಹುದೊಡ್ಡ ಸಂಕಷ್ಟ ಅನುಭವಿಸುವುದು ಅನಿವಾರ್ಯವಾದಂತಿದೆ. ಇನ್ನಾದರೂ ಪಾಲಕರು, ತಮ್ಮ ಮಕ್ಕಳ ಬಗ್ಗೆ ಹಾಗೂ ಅವರ ದೈಹಿಕ ಚಟುವಟಿಕೆ, ಮಾನಸಿಕ ಸದೃಢತೆಯ ಬಗ್ಗೆ ಕಾಳಜಿ ವಹಿಸಬೇಕಿದೆ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ