Thursday, December 5, 2024

Latest Posts

ಭಾರತದ ಚುನಾವಣಾ ಪ್ರಕ್ರಿಯೆ ಹೊಗಳಿದ ಎಲಾನ್ ಮಸ್ಕ್

- Advertisement -

ಕೋಟ್ಯಂತರ ಮಂದಿ ಮತದಾರರು, ಸಾವಿರಾರು ಮಂದಿ ಅಭ್ಯರ್ಥಿಗಳು, ನೂರಾರು ಕ್ಷೇತ್ರಗಳ ಚುನಾವಣೆಯ ಫಲಿತಾಂಶವು ಕೆಲವೇ ಗಂಟೆಗಳಲ್ಲಿ ಪ್ರಕಟ ಆಗುವ ಬಗ್ಗೆ ಜಗತ್ತಿನ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ಜನರ ಮತಗಳ ಎಣಿಕೆಯನ್ನು ಭಾರತ ಕೆಲವೇ ಗಂಟೆಗಳಲ್ಲಿ ಮುಗಿಸಿದೆ. ಆದರೆ, ಅಮೆರಿಕದಲ್ಲಿ ಇನ್ನೂ ಕೌಂಟಿಂಗ್‌ ಮುಗಿದೇ ಇಲ್ಲ ಅಂತ ಹಣೆಚಚ್ಚಿಕೊಂಡಿದ್ದಾರೆ.

ಅಮೆರಿಕದಲ್ಲಿ ಮತ ಎಣಿಕೆ ಶುರುವಾಗಿ 20 ದಿನ ಕಳೆದರು ಕೌಂಟಿಂಗ್‌ ಮುಗಿದಿಲ್ಲ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ರಾಜ್ಯದಲ್ಲಿ ಮತ ಎಣಿಕೆ ಭಾರೀ ವಿಳಂಬವಾಗುತ್ತಿದೆ. ಇದನ್ನು ಟೀಕಿಸಿರುವ ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್‌, ಭಾರತವನ್ನು ಎಕ್ಸಾಂಪಲ್‌ ಆಗಿ ನೀಡಿ ಅಮೆರಿಕ ಚುನಾವಣಾ ವ್ಯವಸ್ಥೆಗೆ ಚಾಟಿ ಬೀಸಿದ್ದಾರೆ. ವಿರೋಧ ಪಕ್ಷಗಳು ಇಲ್ಲಿನ ಇವಿಎಂ ಆಧಾರಿತ ಚುನಾವಣಾ ಪದ್ಧತಿಯನ್ನು ಟೀಕಿಸುತ್ತಿರುವಾಗ ಟೆಕ್‌ ದೈತ್ಯ ಎಲಾನ್‌ ಮಸ್ಕ್‌ ಅವರ ಮೆಚ್ಚುಗೆ ಭಾರತದ ಚುನಾವಣಾ ಆಯೋಗಕ್ಕೆ ಮಾರಲ್‌ ಬೂಸ್ಟ್‌ ನೀಡಿದೆ. ಜೊತೆಗೆ ವಿಶ್ವದ ದೊಡ್ಡಣ್ಣ ಅಮೆರಿಕದ ಬಂಡವಾಳ ಕೂಡ ಬಯಲಾಗಿದೆ.

ಎಲಾನ್ ಮಸ್ಕ್ ಭಾರತದ ಮತ ಎಣಿಕೆ ಪ್ರಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಅಮೆರಿಕದ ಚುನಾವಣಾ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ. ಭಾರತ ಒಂದೇ ದಿನದಲ್ಲಿ 64 ಕೋಟಿ ಮತಗಳನ್ನು ಎಣಿಸುತ್ತದೆ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಇನ್ನು ಕೌಂಟಿಂಗ್‌ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ

ಭಾರತದಲ್ಲಿ ಮೊನ್ನೆಯಷ್ಟೇ ಎರಡು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳು, ಹಲವು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರ ಬಂದಿದೆ. ಪ್ರಜಾಪ್ರಭುತ್ವದ ಬೃಹತ್‌ ರಾಷ್ಟ್ರವಾಗಿರುವ ಭಾರತದಲ್ಲಿನ ಚುನಾವಣೆಯ ಹಬ್ಬವು ಜಗತ್ತಿನಾದ್ಯಂತ ಆಗಾಗ್ಗೆ ಸದ್ದು ಮಾಡುತ್ತಿರುತ್ತದೆ. ಈಗಿನ ಚುನಾವಣೆಯಲ್ಲೂ ಎಲ್ಲ ಕ್ಷೇತ್ರಗಳ ಫಲಿತಾಂಶವೂ ಒಂದೇ ದಿನದಲ್ಲೇ ಹೊರಬಂದಿದೆ. ಅದೇ ವೇಳೆ ಭಾರತದ ಚುನಾವಣಾ ವ್ಯವಸ್ಥೆಯ ಲೇಖನವೊಂದನ್ನು ಗಮನಿಸಿರುವ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌, ತಮ್ಮ ಎಕ್ಸ್‌ ಖಾತೆಯಲ್ಲಿ ಅದರ ಬಗ್ಗೆ ಪೋಸ್ಟ್‌ ಮಾಡಿದ್ದಾರೆ.

ಮತ ಎಣಿಕೆಯ ವರದಿಯನ್ನು ಹಂಚಿಕೊಂಡಿರುವ ವೀ ದ ಪಿಪಲ್‌, ಭಾರತದ ಚುನಾವಣೆಯಲ್ಲಿ ಮೋಸ ಮಾಡುವುದು ಪ್ರಮುಖ ಗುರಿಯಾಗಿಲ್ಲ ಎಂದು ಬರೆದುಕೊಂಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಎಲಾನ್‌ ಮಸ್ಕ್‌, 2024ರ ಲೋಕಸಭಾ ಚುನಾವಣೆಯ ನಂತರ ಕೇವಲ ಒಂದು ದಿನದಲ್ಲಿ 640 ಮಿಲಿಯನ್ ಮತಗಳನ್ನು ಎಣಿಸುವ ಭಾರತದ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇನ್ನು ಮತ ಎಣಿಕೆ ನಡೆಯುತ್ತಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನವೆಂಬರ್‌ 5ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆದಿತ್ತು. ವೋಟಿಂಗ್‌ ಬೆನ್ನಲ್ಲೇ ಕೌಂಟಿಂಗ್‌ ಕೂಡ ಶುರುವಾಗಿತ್ತು. ಆದರೆ, 20 ದಿನ ಆದ್ರೂ ಕೌಂಟಿಂಗ್‌ ಮುಗಿಯದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಅಮೆರಿಕದಲ್ಲಿ ಮತ ಎಣಿಕೆ ತಡ ಏಕೆ?
ಅಲ್ಲಿ ಈಗಲೂ ಕೂಡ ಮತದಾನ ಬ್ಯಾಲಟ್ ಪೇಪರ್ ಮೂಲಕವೇ ನಡೆಯುತ್ತೆ.. ಇದೇ ವಿಳಂಬಕ್ಕೆ ಮೊದಲ ಕಾರಣ.. ಇನ್ನ ಕ್ಯಾಲಿಫೋರ್ನಿಯಾದಲ್ಲಂತೂ ಇದು ಇನ್ನೂ ತಡ. ಯಾಕಂದ್ರೆ, ಕ್ಯಾಲಿಫೋರ್ನಿಯಾ ರಾಜ್ಯ ಹೆಚ್ಚಿನ ಮತದಾರರನ್ನ ಹೊಂದಿದೆ. ಅಮೆರಿಕದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕ್ಯಾಲಿಫೋರ್ನಿಯಾದಲ್ಲಿ ಸಾಮಾನ್ಯವಾಗಿ ಕೌಂಟಿಂಗ್‌ ವಿಳಂಬವಾಗುತ್ತದೆ. ಅದು ಎಷ್ಟರ ಮಟ್ಟಿಗೆ ಎಂದರೆ 20 ದಿನಗಳ ಬಳಿಕವೂ ಅಲ್ಲಿ 3 ಲಕ್ಷ ಮತ ಪತ್ರಗಳನ್ನು ಎಣಿಸಲು ಆಗಿಲ್ಲವಂತೆ. ಇದನ್ನು ಎಲಾನ್‌ ಮಸ್ಕ್‌ ಮಾತ್ರವಲ್ಲದೇ ಮತದಾರರು ಹಾಗೂ ವಿಶ್ಲೇಷಕರು ಕೂಡ ಟೀಕಿಸಿದ್ದು, ಅಮೆರಿಕದ ವೋಟ್‌ ಕೌಂಟಿಂಗ್‌ ದಕ್ಷತೆ ಬಗ್ಗೆ ಪ್ರಶ್ನೆ ಸೃಷ್ಟಿಯಾಗಿದೆ. ಇನ್ನು, ಕ್ಯಾಲಿಫೋರ್ನಿಯಾ ತನ್ನ ಹೆಚ್ಚಿನ ಚುನಾವಣೆಗಳನ್ನು ಅಂಚೆ ಮೂಲಕವೇ ನಡೆಸುತ್ತದೆ. ಅಂಚೆ ಮೂಲಕ ಬಂದ ಬ್ಯಾಲೆಟ್‌ ಲಕೋಟೆಗಳ ಮೇಲಿನ ಸಹಿ ಪರಿಶೀಲನೆ, ಮತಪತ್ರಗಳನ್ನು ತೆರೆಯುವುದು, ವಿಂಗಡಿಸುವುದು ಸೇರಿ ಅನೇಕ ಹಂತಗಳನ್ನು ಮತ ಎಣಿಕೆ ಪ್ರಕ್ರಿಯೆ ಒಳಗೊಂಡಿದೆ. ಅದಲ್ಲದೇ ಅಮೆರಿಕದಲ್ಲಿ ರಾಜ್ಯಗಳು ತಮ್ಮದೇ ಆದ ಚುನಾವಣಾ ಆಯೋಗಗಳನ್ನು ಹೊಂದಿರುವುದರಿಂದ ರಾಜ್ಯದಿಂದ ರಾಜ್ಯಕ್ಕೆ ಮತ ಎಣಿಕೆಯು ಕೂಡ ವಿಭಿನ್ನವಾಗಿರುತ್ತದೆ. ಇದು ಮತ ಎಣಿಕೆ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

- Advertisement -

Latest Posts

Don't Miss