Spiritual Story: ಎಲ್ಲರೂ ಜೀವನದಲ್ಲಿ ಈ ಒಂದು ಪರಿಸ್ಥಿತಿಯನ್ನು ಅನುಭವಿಸಿಯೇ ಇರುತ್ತಾರೆ. ಅದೇನೆಂದರೆ, ನಾವು ಮಾಡಿದ ಕೆಲ ತಪ್ಪುಗಳಿಂದ, ನಮ್ಮೊಂದಿಗೆ ಇರುವ ಕೆಲವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವುದು. ಅಥವಾ ಅವರು ತಪ್ಪು ಮಾಡಿ, ನೀವು ಶಿಕ್ಷೆ ಅನುಭವಿಸುವುದು. ಇಂಥ ಪರಿಸ್ಥಿತಿಯ ಬಗ್ಗೆ ಚಾಣಕ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಪತಿ- ಪತ್ನಿ. ಪತಿ- ಪತ್ನಿ ಸುಖ ದುಃಖದಲ್ಲಿ ಜೊತೆಯಾಗಿರಬೇಕು. ಹಾಗಾಗಿಯೇ ಸಪ್ತಪದಿ ತುಳಿಯುವಾಗ, ಸುಖ ದುಖದಲ್ಲಿ ಇಬ್ಬರೂ ಒಂದಾಗಿರುತ್ತೇವೆ ಅಂತಾ ಹೇಳಲಾಗುತ್ತದೆ. ಆದರೆ ಪತಿ ತಪ್ಪು ಮಾಡಿದಾಗ, ಪತ್ನಿಯೂ ಆ ತಪ್ಪಿನ ಫಲವಾಗಿ ಶಿಕ್ಷೆ ಅನುಭವಿಸಲೇಬೇಕು. ಅದರೊಂದಿಗೆ ಪತ್ನಿ ತಪ್ಪು ಮಾಡಿದಾಗ, ಆ ತಪ್ಪಿಗಾಗಿ ಪತಿಯೂ ಶಿಕ್ಷೆ ಅನುಭವಿಸಬೇಕು. ಹಾಗಾಗಿ ಯಾವ ಕೆಲಸ ಮಾಡುವಾಗಲೂ, ಪತಿ-ಪತ್ನಿ ಇಬ್ಬರೂ ಸೇರಿ, ಹೊಂದಾಣಿಕೆಯಿಂದ ಮಾಡಬೇಕು ಅಂತಾರೆ ಚಾಣಕ್ಯರು.
ಶಿಕ್ಷಕ ಮತ್ತು ವಿದ್ಯಾರ್ಥಿ. ಶಿಕ್ಷಕನಾದವನು ತನ್ನ ವಿದ್ಯಾರ್ಥಿಗೆ ಬುದ್ಧಿ ಮಾು ಹೇಳಿ, ತಪ್ಪು ತಿದ್ದಿ ಅತ್ಯುತ್ತಮ ವ್ಯಕ್ತಿಯನ್ನಾಗಿ ಮಾಡಬೇಕು. ಶಿಕ್ಷಕನಿಗೇ ಸರಿಯಾಗಿ ಬುದ್ಧಿ ಇಲ್ಲದೇ, ಆತನೇ ಓರ್ವ ಉತ್ತಮ ವ್ಯಕ್ತಿಯಾಗಿರದೇ ಇದ್ದಲ್ಲಿ, ಆತ ಹೇಗೆ ಓರ್ವ ವಿದ್ಯಾರ್ಥಿಯ ಜೀವನ ಉತ್ತಮಗೊಳಿಸಬಲ್ಲ..? ಅದೇ ರೀತಿ ವಿದ್ಯಾರ್ಥಿಯಾದವನು, ಶಿಕ್ಷಕರನ್ನು ಗೌರವಿಸುತ್ತ, ಅವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಇಲ್ಲವಾದಲ್ಲಿ, ಶಿಕ್ಷಕನು ಅಥವಾ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯ ತಪ್ಪಿಗೆ ತಲೆ ತಗ್ಗಿಸಬೇಕಾಗುತ್ತದೆ.
ರಾಜ ಮತ್ತು ಪ್ರಜೆ. ಇದು ತುಂಬಾ ಮುಖ್ಯವಾದ ವಿಷಯ. ಇದನ್ನು ನಮ್ಮ ಚುನಾವಣೆಗೆ ಹೋಲಿಸಿ ನೋಡಬಹುದು. ನಾವು ದುಡ್ಡು, ಗ್ಯಾರಂಟಿ ಆಸೆಗೆ ಬೀಳದೇ, ಉತ್ತಮ ರಾಜನನ್ನು ಆಯ್ಕೆ ಮಾಡಿದರೆ, ಆತ ರಾಜ್ಯವನ್ನು ಅಥವಾ ದೇಶವನ್ನು ಅತ್ಯುತ್ತಮವಾಗಿ ಇರಿಸಿಕೊಳ್ಳುತ್ತಾನೆ. ಅಲ್ಲಿನ ಪ್ರಜೆಗಳು ಕೂಡ ಸುಖವಾಗಿ ಇರಬಹುದು. ಜೊತೆಗೆ ಪ್ರಜೆಗಳು ಮಾಡುವ ಕೆಲವು ತಪ್ಪಿನಿಂದ ರಾಜನ ಗೌರವವೂ ಹಾಳಾಗುತ್ತದೆ.