ಬೆಂಗಳೂರು : ರಾಜ್ಯಾದ್ಯಂತ ಕೊರೊನಾ ಸ್ಫೋಟದ ಬೇನ್ನಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತುರ್ತು ಸಭೆ ಕರೆದಿದ್ದರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೇಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕರುನಾಡಿನಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ನಿನ್ನೆ 11,698 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅದರಲ್ಲಿ ಬೆಂಗಳುರಿನಲ್ಲಿಯೇ 9221 ಕೇಸ್ ಪತ್ತೆಯಾಗಿದೆ. ಇದರಿಂದ ಬೆಂಗಳೂರು ಲಾಕ್ ಆಗುವ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈಗಾಗಲೇ ಅನೇಕ ಸಚಿವರು ಮತ್ತು ಸಿಎಂ ಬಸವರಾಜ್ ಬೊಮ್ಮಾಯಿಯ ಸಂಪುಟದ ಹಲವು ಸಚಿವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸಿಎಂ ಸಂಪರ್ಕದಲ್ಲಿದ್ದ ಸಚಿವ ಸುಧಾಕರ್ ಮುಂಜಾಗೃತಾ ಕ್ರಮಾವಾಗಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಇದರ ನಡುವೆ ಆರೋಗ್ಯಾಧಿಕಾರಿಗಳ ತುರ್ತು ಸಭೆ ಕರೆದಿದ್ದು, ರಾಜ್ಯದಲ್ಲಿ ಮತ್ತಷ್ಟು ಟಫ್ ರೂಲ್ಸ್ ಬಗ್ಗೆ ಚರ್ಚಿಸಲಿದ್ದಾರೆ. ಒಟ್ಟಾರೆಯಾಗಿ ಕರುನಾಡಿಗೆ ಮತ್ತೆ ಲಾಕ್ ಡೌನ್ ಭೀತಿ ಶುರುವಾಗಿದೆ.