Sunday, September 8, 2024

Latest Posts

ಕಛೇರಿಯಲ್ಲಿನ ಒತ್ತಡದಿಂದ ಉದ್ಯೋಗ ಬದಲಾಯಿಸುತ್ತಿರುವ ಉದ್ಯೋಗಿಗಳು

- Advertisement -

special story

ಕಂಪನಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಮತ್ತು ಟಾರ್ಗೇಟ್ ನಿಂದಾಗಿ ಉದ್ಯೋಗಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಛೇರಿಯಲ್ಲಿನ ಕೆಲಸದ ಒತ್ತಡದಿಂದಾಗಿ ಮನೆಯಲ್ಲಿಯೂ ಸಹ ಕಛೇರಿ ಕೆಲಸದಲ್ಲಿ ತೊಡಗಿರುವುದರಿಂದ ಉದ್ಯೋಗಿಗಳಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮನೆಯವರ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿಲ್ಲ .ಒತ್ತಡ ಕಡಿಮೆ ಇರುವ ಕಡೆ ಕೆಲಸ ಮಾಡಲು ಬಯಸಿ ಹಲವಾರು ಉದ್ಯೋಗಿಗಳು ಕಛೇರಿಯನ್ನು ಬದಲಾವಣೆ ಮಾಡಲು ಬಯಸುತಿದ್ದಾರೆ.ಇದು ಒಂದು ವಿಷಯ ಕಛೇರಿ ಬದಲಾವಣೆಗೆ ದೊಡ್ಡ ಕಾರಣವಾಗಿದೆ.

ಉದ್ಯೋಗ ಬದಲಾವಣೆಗೆ ಇನ್ನೊಂದು ದೊಡ್ಡ ಕಾರಣವೆಂದರೆ ಸಂಬಳ : ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲದಿರುವುದು. ಕೆಲಸದ ಒತ್ತಡ ಕೊಂಚ ಜಾಸ್ತಿ ಇದ್ದರೂ ಪರವಾಗಿಲ್ಲ ಆದರೆ ಕೆಲಸಕ್ಕೆ ತಕ್ಕ ಸಂಬಳ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ.ಹೌದು ಸ್ನೇಹಿತರೆ ಈ ಮಹಾನಗರಿಯಲ್ಲಿ ಕೆಲಸ ಮಾಡಲು ಎಲ್ಲಾರು ಬಯಸುತ್ತಾರೆ. ಆದರೆ ಇಲ್ಲಿ ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು ತುಂಬಾ ವಿರಳ. ಬರುವ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಿ ವಾಹನಕ್ಕೆ ಇಂಧನ ಹಾಕಿ ಮನೆ ನಿಭಾಯಿಸುವುದು ತುಂಬಾ ಕಷ್ಟ.ದಿನೇ ದಿನೇ ಏರಿಕೆಯಾಗುತ್ತಿರುವ ದಿನಸಿ ಬೆಲೆ ಇಂಧನ ಬೆಲೆ ಬಾಡಿಗೆ ಇವೆಲ್ಲವನ್ನು ಬರುವ ಸಂಬಳದಲ್ಲಿ ಸರದೂಗಿಸುವುದು ಅಸಾಧ್ಯದ ಮಾತು . ಹಾಗಾಗಿ ಬೇರೆ ಕಡೆ ಸಂಬಳ ಜಾಸ್ತಿ ಸಿಗಬಹುದು ಎಂಬ ದೃಷ್ಟಿ ಕೋನದಿಂದ ಸಾಮಾಜಿಕ ಜಾಲತಾಣದಲ್ಲಿ ವೃತ್ತಿಪರರು 5 ಜನರಲ್ಲಿ 4 ಜನ ಉದ್ಯೋಗಿಗಳು ಕೆಲಸ ಹುಡುಕುತ್ತಿದ್ದಾರೆ.

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

ಮೂರು ರಾಜ್ಯಗಳ ಚುನಾವಣೆಗೆ ಡೇಟ್ ಫಿಕ್ಸ್!

ಮೋದಿ ಆಗಮನಕ್ಕೆ ಹೆಚ್‌ಡಿಕೆ ವ್ಯಂಗ್ಯ..!

- Advertisement -

Latest Posts

Don't Miss