Tuesday, April 15, 2025

Latest Posts

ಕೊಹ್ಲಿ ಬ್ಯಾಟಿಂಗ್ ನ ವೈಫಲ್ಯ

- Advertisement -

ಇಂಡಿಯಾ ಟೀಮ್ ನಾಯಕ ವಿರಾಟ್ ಕೊಹ್ಲಿ ಶತಕಗಳಿಸಿ ಎರಡು ವರ್ಷ ಕಳೆದಿವೆ.  ಉತ್ತಮ ಆರಂಭವನ್ನು ಪಡೆದರೂ ಅದನ್ನು ಶತಕವನ್ನಾಗಿಸಿ ಪರಿವರ್ತಿಸಲು ಕೊಹ್ಲಿಗೆ ಸಾಧ್ಯವಾಗುತ್ತಿಲ್ಲ. ಇಂಗ್ಲೆಂಡ್ ವಿರುದ್ದದ ಸರಣಿಯ ಐದು ಇನ್ನಿಂಗ್ಸ್ ಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಅರ್ಧ ಶತಕ ಮಾತ್ರಗಳಿಸಿದ್ದಾರೆ. ಇನ್ನೆರಡು ಇನಿಂಗ್ಸ್​ಗಳಲ್ಲಿ 42 ಮತ್ತು 20 ರನ್​ಗಳಿಸಿ ಔಟ್ ಆಗಿದ್ದಾರೆ. ಐದರಲ್ಲಿ ಮೂರು ಇನಿಂಗ್ಸ್​ನಲ್ಲಿ ಕೊಹ್ಲಿ ಉತ್ತಮ ಆರಂಭ ಪಡೆದಿದ್ದರು ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಎಡವುತ್ತಿದ್ದಾರೆ ಎನ್ನಬಹುದು ಎಂದು ಟೆಸ್ಟ್ ಸ್ಪೆಷಲಿಸ್ಟ್​ ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ವಿಶ್ಲೇಷಣೆ ವೇಳೆ ಮಾತನಾಡಿದ ಗವಾಸ್ಕರ್, ಕೊಹ್ಲಿ ಬ್ಯಾಟಿಂಗ್​ನ ವೈಫಲ್ಯಗಳನ್ನು ಎತ್ತಿ ತೋರಿಸಿದ್ದು, ಇಂತಹ ಸಣ್ಣ ತಪ್ಪುಗಳನ್ನು ಸರಿ ಮಾಡಿಕೊಂಡರೆ ಖಂಡಿತವಾಗಿಯೂ ಮತ್ತೆ ಟ್ರ್ಯಾಕ್​​ಗೆ ಮರಳಿದ್ದಾರೆ ಎಂದು ವಿವರಿಸಿದರು.

ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಆಫ್-ಸ್ಟಂಪ್‌ನ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹಾಗೆಯೇ ಕ್ರೀಸ್‌ನಲ್ಲಿ ಹೆಜ್ಜೆ ಮುಂದಿಡುತ್ತಿದ್ದಾರೆ. ಈ ಎರಡು ಸಣ್ಣ ತಪ್ಪುಗಳು ಕೊಹ್ಲಿಯನ್ನು ಔಟ್ ಮಾಡುವಲ್ಲಿ ಎದುರಾಳಿಗಳಿಗೆ ಸಹಾಯಕವಾಗುತ್ತಿದೆ. ಹೀಗಾಗಿ ಈ ಎರಡು ತಪ್ಪುಗಳ ಬಗ್ಗೆ ವಿರಾಟ್ ಕೊಹ್ಲಿ ಮತ್ತಷ್ಟು ಎಚ್ಚರಿಕೆವಹಿಸಬೇಕಾಗಿದೆ ಎಂದು ಗವಾಸ್ಕರ್ ತಿಳಿಸಿದ್ದಾರೆ.

- Advertisement -

Latest Posts

Don't Miss