ನಾಟಿಂಗ್‍ಹ್ಯಾಮ್: ಸೂರ್ಯ ಕುಮಾರ್ ಯಾದವ್ ಅವರ ಆಕರ್ಷಕ ಶತಕದ ಹೊರತಾಗಿಯೂ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 17 ರನ್‍ಗಳಿಂದ ಸೋಲು ಕಂಡಿತು. ಇದರೊಂದಿಗೆ ರೋಹಿತ್ 2-1 ಅಂತರದಿಂದ ಸರಣಿ ಗೆದ್ದುಕೊಂಡಿತು.
ಇಲ್ಲಿನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಭಾರತ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
216 ರನ್ ಗುರಿ ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ರಿಷಬ್ ಪಂತ್ 1, ವಿರಾಟ್ ಕೊಹ್ಲಿ 11, ನಾಯಕ ರೋಹಿತ್ ಶರ್ಮಾ 11 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 28, ದಿನೇಶ್ ಕಾರ್ತಿಕ್ 6, ರವೀಂದ್ರ ಜಡೇಜಾ 7, ಹರ್ಷಲ್ ಪಟೇಲ್ 1 ರನ್ ಗಳಿಸಿದರು.
ಬೌಂಡರಿ ಸಿಕ್ಸರ್‍ಗಳ ಸುರಿಮಳಗೈದ ಸೂರ್ಯಕುಮಾರ್ ಯಾದವ್ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಂತರ 48 ಎಸೆತದಲ್ಲಿ ಶತಕ ಸಿಡಿಸಿ ಮಿಂಚಿದರು. ಇದರೊಂದಿಗೆ ಚೊಚ್ಚಲ ಶತಕ ಸಿಡಿಸಿದ ಸಾಧನೆ ಮಾಡಿದರು. ಆದರೆ 117 ರನ್ ಗಳಿಸಿದ್ದಾಗ ಅಲಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಆಂಗ್ಲರ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಸನ್ ರಾಯ್ (27ರನ್) ಮತ್ತು ನಾಯಕ ಜೋಸ್ ಬಟ್ಲರ್ (18) ಮೊದಲ ವಿಕೆಟ್‍ಗೆ 31 ರನ್ ಸೇರಿಸಿದರು. ಜೋಸ್ ಬಟ್ಲರ್ ಅವರನ್ನು ವೇಗಿ ಆವೇಶ್ ಖಾನ್ ಬೌಲ್ಡ್ ಮಾಡಿದರು. ಜಾಸನ್ ರಾಯ್ ಜೊತೆಗೂಡಿದ ದಾವಿದ್ ಮಲಾನ್ ತಂಡದ ಕುಸಿತವನ್ನು ತಡೆದರು. ಜಾಸನ್ ರಾಯ್ ಪಂತ್‍ಗೆ ಕ್ಯಾಚ್ ಕೊಟ್ಟರು. ಬೌಂಡರಿ ಸಿಕ್ಸರ್‍ಗಳ ಸುರಿಮಳೆಗೈದ ದಾವಿದ್ ಮಲಾನ್ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಆದರೆ 77 ರನ್ ಗಳಿಸಿ ಮುನ್ನಗುತ್ತಿದಾಗ ರವಿ ಬಿಷ್ಣೊಯಿಗೆ ಬಲಿಯಾದರು.
ಫಿಲ್ ಸಾಲ್ಟ್ (8ರನ್) ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಲಿಯಾಮ್ ಲಿವೀಂಗ್ ಸ್ಟೋನ್ ಅಜೇಯ 42 ರನ್ ಹೊಡೆದರು. ಕೊನೆಯಲ್ಲಿ ಬಂದ ಮೊಯಿನ್ ಅಲಿ 0, ಹ್ಯಾರಿ ಬ್ರೂಕ್ 19, ಕ್ರಿಸ್ ಜೋರ್ಡನ್ 11 ರನ್ ಗಳಿಸಿದರು.
ಅಂತಿಮವಾಗಿ ಇಂಗ್ಲೆಂಡ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಭಾರತ ಪರ ಹರ್ಷಲ್ ಪಟೇಲ್ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್, ಆವೇಶ್ ಖಾನ್ ಮತ್ತು ಉಮ್ರಾನ್ ಮಲ್ಲಿಕ್ ತಲಾ 2 ವಿಕೆಟ್ ಪಡೆದರು.