Wednesday, June 18, 2025

Latest Posts

‘ರಾಜೀನಾಮೆ ಕೊಡಿ- ನಿಮ್ಮನ್ನ ನಾಯಿ ಕೂಡ ಮೂಸಲ್ಲ’- ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

- Advertisement -

ಬೆಂಗಳೂರು: ಗ್ರಾಮವಾಸ್ತವ್ಯದ ವೇಳೆ ನಿನ್ನೆ ಸಿಎಂ ವೈಟಿಪಿಎಸ್ ಸಿಬ್ಬಂದಿ ಮೇಲೆ ಕೋಪಗೊಂಡಿದ್ದ ಬಗ್ಗೆ ಬಿಜೆಪಿ ನಾಯಕ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಈಶ್ವರಪ್ಪ, ಜನ ಯಾರಿಗೆ ಬೇಕಾದ್ರೂ ವೋಟ್ ಹಾಕ್ತಾರೆ. ನೀವು ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಾರೆ. ಒಂದು ವೇಳೆ ನೀವು ಅವರ ಸಮಸ್ಯೆ ಬಗೆಹರಿಸೋದಕ್ಕೆ ಆಗಲ್ಲ ಅಂದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ಆಗ ನಿಮ್ಮನ್ನು ದಾರಿಯಲ್ಲಿ ಹೋಗೋ ದಾಸಯ್ಯನೂ ನಿಮ್ಮ ಬಳಿ ಬರೋದಿಲ್ಲ, ಯಾವ ನಾಯಿ ಕೂಡ ನಿಮ್ಮನ್ನು ಮೂಸಲ್ಲ ಅಂತ ಸಿಎಂ ಕುಮಾರಸ್ವಾಮಿ ವಿರುದ್ಧ ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು.

ಶ್ರಾವಣಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸಿಯೇ ತೀರುತ್ತಾ ಬಿಜೆಪಿ??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=yxzxd9TSD1Q
- Advertisement -

Latest Posts

Don't Miss