Saturday, March 22, 2025

Latest Posts

‘ನಿಮ್ಮ ಮಗ ನಿಖಿಲ್ ಸೋತ ಸಿಟ್ಟನ್ನು ಜನರ ಮೇಲೆ ತೋರಿಸ್ತೀರಾ..?’- ಸಿಎಂಗೆ ಈಶ್ವರಪ್ಪ ಚಾಟಿ

- Advertisement -

ಬೆಂಗಳೂರು: ರಾಯಚೂರಿನಲ್ಲಿ ಗ್ರಾಮವಾಸ್ತವ್ಯದ ವೇಳೆ ಮೋದಿಗೆ ವೋಟ್ ಹಾಕಿ ನನಗೆ ಕೆಲಸ ಹೇಳ್ತೀರಾ ಅನ್ನೋ ಸಿಎಂ ಕುಮಾರಸ್ವಾಮಿ ಹೇಳಿಕೆ ಇದೀಗ ಬಿಜೆಪಿಗೆ ಅಸ್ತ್ರವಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ಈಶ್ವರಪ್ಪ ಸಿಎಂಗೆ ಚಾಟಿ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನಿಮ್ಮ ಮಗ ನಿಖಿಲ್ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತು, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದ ಕೋಪವನ್ನು ಜನರ ಮೇಲೆ ತೀರಿಸಿಕೊಳ್ತೀರಾ..? ಅಂತ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವದಲ್ಲಿ ಇಂತಹ ಪೌರುಷ ನಡೆಯೋದಿಲ್ಲ. ದೇಶದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ರು ಅನ್ನೋದು ನಿಮಗೆ ನೆನಪಿರಲಿ ಅಂತ ಇದೇ ವೇಳೆ ಈಶ್ವರಪ್ಪ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಚುನಾವಣೆಗೆ ಈಗಾಗಲೇ ಪ್ಲ್ಯಾನ್ ಮಾಡಿದ್ದಾರಾ ಸಿದ್ದರಾಮಯ್ಯ??? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=H5kgDBoq3y0
- Advertisement -

Latest Posts

Don't Miss