Sunday, September 8, 2024

Latest Posts

ಈಶ್ವರಪ್ಪ ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬಹಳ ಹಿರಿಯರು, ಪಕ್ಷದ ಹಿತದೃಷ್ಟಿಯಿಂದ ಅವರ ಜೊತೆಗೆ ನಾನೇ ಕುದ್ದಾಗಿ ಮಾತನಾಡಿ ಅಸಮಾಧಾನ ಶಮನ ಮಾಡಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಈಶ್ವರಪ್ಪನವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಣೆ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರಿಗೂ ನಮಗೂ ಆತ್ಮೀಯವಾದ ಸಂಬಂಧವಿದೆ. ನಾನು ಅವರ ಜೊತೆಗೆ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಹಾವೇರಿ ಕ್ಷೇತ್ರ ಕೈತಪ್ಪಿರಬಹುದು. ಇದು ಪಕ್ಷದ ನಿರ್ಣಯ. ಈಶ್ವರಪ್ಪ ಅವರು ನಮಗಿಂತ ಬಹಳ ಹಿರಿಯರು, ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ. ಹೀಗಾಗಿ ಪಕ್ಷದ ವಿರುದ್ಧ ಅವರು ಹೋಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.

ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರು ರಾಜ್ಯಾಧ್ಯಕ್ಷ ಆಗಿದ್ದಾಗ, ನಾನು ಜಿಲ್ಲಾಧ್ಯಕ್ಷನಾಗಿದ್ದೆ, ಈಶ್ವರಪ್ಪ ಅವರು ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ಮಾನ್ಯ ಮಾಡುತ್ತಾರೆಂಬ ನಂಬಿಕೆಯಿದೆ.‌ ಇನ್ನು ಬಹಳ ಸಮಯಿದ್ದು, ಬದಲಾವಣೆ ಆಗಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿದ್ದು, ನಾನು ಕೂಡಾ ಕಲಬುರ್ಗಿಗೆ ಹೋಗುತ್ತಿದ್ದೇನೆ. ಅದರೊಳಗೆ ಈಶ್ವರಪ್ಪ ಅವರು ಬದಲಾವಣೆ ಆಗಲಿದ್ದಾರೆ ಎಂಬ ವಿಶ್ವಸವಿದೆ ಎಂದು ತಿಳಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಶೆಟ್ಟರ್ ಅವರು ಬೆಳಗಾವಿಯಲ್ಲಿ ಅತಿಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರಿಗೆ ನಾನು ಶುಭಕೋರುತ್ತೇನೆ. ಅಲ್ಲಿನ ಸ್ಥಳೀಯಮಟ್ಟದ ವಿರೋಧವನ್ನು ಸರಿಪಡಿಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

- Advertisement -

Latest Posts

Don't Miss