Hubli News: ಹುಬ್ಬಳ್ಳಿ: ಅದೆಷ್ಟೋ ದಿನಗಳಿಂದ ಗಬ್ಬೂರಿನ ಬೈಪಾಸ್ ನಲ್ಲಿ ಕನ್ನಡ ಬಾವುಟ ಹರಿದು ಹಾರಾಡುತ್ತಿದ್ದರೂ ಜಿಲ್ಲಾಡಳಿತವಾಗಲಿ, ತಾಲೂಕಾಡಳಿವಾಗಲಿ, ಕನ್ನಡಪರ ಸಂಘಟನೆಗಳಾಗಲಿ ಕಿಂಚಿತ್ತೂ ಗಮನ ಹರಿಸಿಲ್ಲ. ನವೆಂಬರ್ ತಿಂಗಳಲ್ಲಿ ಮಾತ್ರವೇ ಕನ್ನಡಾಭಿಮಾನ ಉಕ್ಕಿ ಹರಿಯುತ್ತದೆ ಎಂಬುವಂತ ಮಾತು ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಹೌದು.. ಕನ್ನಡ ನಾಡು ನುಡಿ ಸಂಸ್ಕೃತಿಗೆ ಹುಬ್ಬಳ್ಳಿ ಬಹುದೊಡ್ಡ ಕೊಡುಗೆ ನೀಡಿದೆ. ಆದರೆ ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ನಲ್ಲಿಯೇ ಕನ್ನಡಕ್ಕೆ ಅಪಮಾನವಾಗಿದ್ದರೂ ಯಾರೊಬ್ಬರೂ ಕೂಡ ಕಣ್ಣು ಬಿಟ್ಟು ನೋಡುತ್ತಿಲ್ಲ. ಹರಿದು ಹಾಳಾಗಿರುವ ಕನ್ನಡ ಬಾವುಟ ಇಂದಿಗೂ ಹಾರಾಡುತ್ತಿರುವುದು ನಿಜಕ್ಕೂ ಕನ್ನಡ ಪರ ಹೋರಾಟಗಾರರ ಕಾರ್ಯವೈಖರಿ ಅಣಕಿಸುವಂತಿದೆ.
ಹುಬ್ಬಳ್ಳಿಯಲ್ಲಿಯೇ ಕನ್ನಡಕ್ಕೆ ಅಪಮಾನವಾಗಿದೆ. ಎಲ್ಲಿದ್ದೀರಾ ಕನ್ನಡಾಭಿಮಾನಿಗಳೇ, ಅಧಿಕಾರಿಗಳೇ..? ಎಂಬುವಂತ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಇನ್ನೂ ಕನ್ನಡ ಪರ ಹೋರಾಟಗಾರರು ಹಾಗೂ ಹುಬ್ಬಳ್ಳಿಯ ಕನ್ನಡಾಭಿಮಾನಿಗಳು ಮೌನ ವಹಿಸಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಅಲ್ಲದೇ ಹರಿದಿರುವ ಕನ್ನಡದ ಬಾವುಟ ಹುಬ್ಬಳ್ಳಿಗೆ ಬರುವವರನ್ನು ಸ್ವಾಗತಿಸುವಂತಿದೆ. ಹೀಗಿದ್ದರೂ ಜಿಲ್ಲಾಡಳಿತ ಹಾಗೂ ಪಾಲಿಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.